ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಾ ಯೋಜನೆಗೆ 20ದಶಲಕ್ಷ ಡಾಲರ್:ಮೈಕ್ರೋಸಾಫ್ಟ್

By Staff
|
Google Oneindia Kannada News

ಬೆಂಗಳೂರು, ಜೂ. 5 : ಐಟಿ ದಿಗ್ಗಜ ಮೈಕ್ರೋಸಾಫ್ಟ್ ಕಂಪೆನಿಯು ಭಾರತದಲ್ಲಿನ ಶಿಕ್ಷಣ ಸುಧಾರಣೆಗೆ 20 ದಶಲಕ್ಷ ಡಾಲರ್ ಹೂಡಲಿದ್ದು, ಸುಮಾರು 5 ವರ್ಷ ಅವಧಿಯ ಯೋಜನೆ ಇದಾಗಿದ್ದು, ಈ ಮುಂಚೆ 2003 ರಲ್ಲಿ 20 ದಶಲಕ್ಷ ಡಾಲರ್ ಖರ್ಚು ಮಾಡಿ "ಪ್ರಾಜೆಕ್ಟ್ ಶಿಕ್ಷಾ' ಎಂಬ ಹೆಸರಿನ ಯೋಜನೆಯಡಿಯಲ್ಲಿ ಇಲ್ಲಿನ ಶಿಕ್ಷಕರಿಗೆ ತರಬೇತಿ ನೀಡಿತ್ತು.

ಈ ಅವಧಿಯಲ್ಲಿ ಸುಮಾರು ಸರ್ಕಾರಿ ಶಾಲೆಗೆ ಸೇರಿದ 2, 40,000 ಶಿಕ್ಷಕರಿಗೆ ತರಬೇತಿ ನೀಡಲಾಯಿತು.ತಂತ್ರಜ್ಞಾನದ ಬಳಕೆ, ಬೋಧನಾ ವಿಧಾನದಲ್ಲಿ ಸುಧಾರಣೆ ಮುಂತಾದ ವಿಷಯಗಳ ಮೇಲೆ ಗಮನಹರಿಸಲಾಯಿತು ಎಂದು ಮೈಕ್ರೊಸಾಫ್ಟ್ ಪ್ರಾಜೆಕ್ಟ್ ಶಿಕ್ಷಾ ಕಾರ್ಯಕ್ರಮ ವ್ಯವಸ್ಥಾಪಕರಾದ ಸುನೀತ್ ಸೇಥಿ ಹೇಳುತ್ತಾರೆ.

ಮುಂದಿನ ಹಂತದಲ್ಲಿ 50ಸಾವಿರ ಶಿಕ್ಷಕರನ್ನು ಮೊದಲ ವರ್ಷದ ಅವಧಿಯಲ್ಲಿ ತಯಾರಿಗೊಳಿಸಲಾಗಿಸುವ ನಿರೀಕ್ಷೆಯಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ, ಎನ್ ಜಿಒಗಳ ಸಹಕಾರವನ್ನು ಕೋರಲಾಗುವುದು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲೋಕದ ಪರಿಚಯ ಹಾಗೂ ಅಭಿವೃದ್ಧಿ ಪಥದತ್ತ ಗಣಕಶಿಕ್ಷಣವನ್ನು ಕೊಂಡೊಯ್ಯುವುದು ನಮ್ಮ ಉದ್ದೇಶ. ಸರ್ಕಾರಿ ಶಿಕ್ಷಣ ಯೋಜನೆಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳ ದೇಣಿಗೆ ನೆರವಿನಿಂದ ಯೋಜನೆಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಶಾಲೆಗಳಲ್ಲಿ ಇರುವ ಹಾರ್ಡ್ ವೇರ್ ಗೆ ಅನುಗುಣವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡಲಾಗುವುದು.

ಭಾರತೀಯ ಭಾಷೆಗಳಲ್ಲಿ ವಿಂಡೋಸ್ ಹಾಗೂ ಆಫೀಸ್ ತಂತ್ರಾಶಗಳು ಲಭ್ಯವಿದೆ. ಈ ಯೋಜನೆಯನ್ನು ಸ್ಥಳೀಯಗೊಳಿಸಿ, ಪ್ರಾದೇಶಿಕತೆ ಒತ್ತು ನೀಡುವುದು ನಮ್ಮ ಉದ್ದೇಶ, ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಶಿಕ್ಷಣ ಕುರಿತಾದ ತಂತ್ರಾಶ ಅಭಿವೃದ್ಧಿ ಫಲ ನೀಡಿದೆ. ಕರ್ನಾಟಕದಲ್ಲೂ ಯೋಜನೆ ಫಲಕಾರಿಯಾಗಲಿದೆ ಎಂಬ ಆಶಯವನ್ನು ಸೇಥಿ ವ್ಯಕ್ತಪಡಿಸಿದರು.

ಪ್ರಾಜೆಕ್ಟ್ ಶಿಕ್ಷಾಗೆ ವಿರೋಧ: ಮೈಕ್ರೊಸಾಫ್ಟ್ ಸಂಸ್ಥೆಯ ಪ್ರಾಜೆಕ್ಟ್ ಶಿಕ್ಷಾ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತಿದೆ. ಮೈಕ್ರೋಸಾಫ್ಟ್ ಕಂಪೆನಿಗೆ ಸೇರಿದ ತಂತ್ರಾಶ ಬಲ್ಲ ತಜ್ಞರನ್ನು ತಯಾರಿಸಲು ಈ ಯೋಜನೆ ಬಳಕೆ ಮಾಡಲಾಗುತ್ತಿದೆ. ಸರಳವಾದ ತಂತ್ರಾಶ ಪಾಠ ಮಾಡಲಿಕ್ಕೆ ಕೋಟ್ಯಾಂತರ ಹಣ ವಿನಿಯೋಗಿಸುತ್ತಿರುವುದು ವ್ಯರ್ಥ ಎಂದು ಓಪನ್ ಸೋರ್ಸ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೇ, ವಿಷಯವನ್ನು ಸರ್ಕಾರಿ ಸ್ವಾಮ್ಯದ ಗಣಕ ಸಂಸ್ಥೆಗಳಿಗೆ ಬಿಟ್ಟು, ಮೈಕ್ರೊಸಾಫ್ಟ್ ವಿರೋಧಿಗಳಿಗೆ ಮಂಕುಬೂದಿ ಎರಚಿಬಿಟ್ಟಿತು ಎಂಬುದು ಐಟಿ ಪಂಡಿತರ ಅಂಬೋಣ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X