ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್ ಕೆ ಹೊರರಾಜ್ಯಗಳ ವಿದ್ಯಾರ್ಥಿಗಳ ಮೇಲುಗೈ

By Staff
|
Google Oneindia Kannada News

ಬೆಂಗಳೂರು, ಜೂ. 5 : ವೃತ್ತಿ ಶಿಕ್ಷಣ ಪ್ರವೇಶದ ಆಡಳಿತ ಮಂಡಳಿಗಳ ಸೀಟುಗಳಿಗೆ ಕಾಮೆಡ್ ಕೆ ನಡೆಸಿದ್ದ ಸಿಇಟಿ-2008ರ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಆದರೆ ಅದರಲ್ಲಿ ಹೊರ ರಾಜ್ಯಗಳ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದಿದ್ದ 71,990 ಅಭ್ಯರ್ಥಿಗಳ ಪೈಕಿ 54,086 ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಹತೆಗಳಿಸಿಕೊಂಡಿದ್ದಾರೆ. ಮೇ 4 ರಂದು ನಡೆದ ಪರೀಕ್ಷೆಗೆ ಹೊರ ರಾಜ್ಯದ 51,855 ಹಾಗೂ ಕರ್ನಾಟಕದ 20,137 ಅಭ್ಯರ್ಥಿಗಳು ಹಾಜರಾಗಿದ್ದರು. ಭೌತ ವಿಜ್ಞಾನ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ(ಪಿಸಿಬಿ) ವಿಷಯಗಳಲ್ಲಿ ಶೇ.75 ರಷ್ಟು ಭೌತ ವಿಜ್ಞಾನ, ರಸಾಯನ ಶಾಸ್ತ್ರ ಮತ್ತು ಗಣಿತ(ಪಿಸಿಎಂ) ವಿಷಯದಲ್ಲಿ ಶೇ. 55.5 ರಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪಿಸಿಬಿ ಮತ್ತು ಪಿಸಿಎಂ ಎರಡರಲ್ಲೂ ಹೊರರಾಜ್ಯದವರೇ ಮೇಲುಗೈ ಪ‌ಡೆದಿದ್ದಾರೆ.

ಇದೇ 24 ರಿಂದ ಕೌನ್ಸ್ ಲಿಂಗ್ : ಮೂದಲ ಸುತ್ತು ಇದೇ 24 ರಿಂದ 26ರ ವರೆಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ, 28 ರಿಂದ ಜುಲೈ 11 ರವರೆಗೆ ಇಂಜನಿಯರಿಂಗ್, ಅಗಸ್ಟ್ 22 ರಂದು ಅರ್ಕಿಟೆಕ್ಟ್ ಕೋರ್ಸ್ ಗಳ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಕೌನ್ಸಲಿಂಗ್ ಗೆ ಹಾಜರಾಗುವ ವಿದ್ಯಾರ್ಥಿಗಳು ಕಾಮೆಟ್ ಕೆ ಅಂಕಪಟ್ಟಿ, ಹತ್ತನೇ ತರಗತಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ನಕಲು ಪ್ರತಿಯನ್ನು ತರಬೇಕು ಎಂದು ಕಾಮೆಡ್ ಕೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕಾಮೆಡ್ ಕೆ ವೆಬ್ ಸೈಟ್ www.comedk.org ಸಂಪರ್ಕಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X