• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಅಂದ್ರೆ ಬರೀ ಸಾಹಿತ್ಯ ಅಲ್ಲ, ಬೇರೇನೆ ಇದೆ

By Staff
|

ವಿಚಾರ ಸಂಕಿರಣವೆಂದರೆ ಬರಿಯ ಮಾತುಗಳಷ್ಟೇ, ಬೇರೇನಿಲ್ಲ' ಎಂದೆನ್ನುವ ಭಾವನೆ ವ್ಯಾಪಕವಾಗಿಯೇ ಇದೆ. ಈ ವ್ಯಾಪಕ ಭಾವನೆಯ ಹಿನ್ನೆಲೆಯಲ್ಲಿ- ಜಿಗುಪ್ಸೆ, ಹತಾಶೆ, ವ್ಯಂಗ್ಯ ಏನೆಲ್ಲ ಅಡಗಿವೆ? ಇದೆಲ್ಲದರ ಬಗೆಗೆ ಅರಿವಿದ್ದೂ, ಕನ್ನಡಸಾಹಿತ್ಯ.ಕಾಂ ಕ್ರೈಸ್ಟ್ ಕಾಲೇಜ್ ಆಫ್ ಲಾ' ಸಹಕಾರದೊಂದಿಗೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಮತ್ತೂ ಒಂದು ವಿಚಾರ ಸಂಕಿರಣವನ್ನು ಜೂನ್ 8ರಂದು ಆಯೋಜಿಸಿದೆ.

ವಿಚಾರ ಸಂಕಿರಣದಲ್ಲಿ ಚರ್ಚೆಗೆ ಒಳಗಾಗುತ್ತಲಿರುವ ವಿಷಯಗಳು ಮತ್ತು ವಿಷಯ ಮಂಡಿಸುವವರ ಸಂಕ್ಷಿಪ್ತ ಪರಿಚಯ ಈಕೆಳಗಿನಂತಿದೆ.

ವಿಷಯ : ಮಾಹಿತಿ ತಂತ್ರಜ್ಞಾನ ಪರಿಸರದಲ್ಲಿ ಫ್ರೀವೇರ್, ಪೈರಸಿ ಹಾಗು ಭಾರತೀಯ ಸಾಮಾನ್ಯನ ಖರೀದಿಧಾರಣ ಶಕ್ತಿ

ಮಾತನಾಡಲಿರುವವರು: ಟಿ ಜೆ ಯತೀಂದ್ರನಾಥ್

ಯತೀಂದ್ರನಾಥ್ ಸಹಸ್ಥಾಪಕರಾಗಿ ಸ್ಥಾಪಿಸಿದ ಅದಮ್ಯ ಟೆಕ್ನಾಲಜಿಸ್ ಇಂದು ಕೆಟು ಎನ್ನುವ ಬೃಹತ್ ಸಂಸ್ಥೆಯೊಡನೆ ವಿಲೀನವಾಗಿದೆ. ಈ ಸಂಸ್ಥೆಯ ಮೊಬೈಲ್ ಅಂಡ್ ಪ್ರಾಡಕ್ಟ್ಸ್ ವಿಭಾಗಕ್ಕೆ ಯತೀಂದ್ರನಾಥ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಷಯ: ಅಂತರ್ಜಾಲದ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸೃಜನಶೀಲತೆಯ ಗತಿಸ್ಥಿತಿ, ಸವಾಲುಗಳು

ಮಾತನಾಡಲಿರುವವರು: ಪ್ರಕಾಶ್ ಬೆಳವಾಡಿ

ಪ್ರಕಾಶ್ ಬೆಳವಾಡಿ ಮೀಡಿಯಾ ಟೆಕ್‌ನಲ್ಲಿ ಸೃಜನಶೀಲ-ಮುಖ್ಯಸ್ಥ, ಇಂಜಿನಿಯರಿಂಗ್ ಪದವೀಧರರು, ನಾಟಕ, ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಕೆಲಸನಿರತರಾಗಿದ್ದಾರೆ.

ವಿಷಯ: ಅಂತರ್ಜಾಲದ ಸಂದರ್ಭದಲ್ಲಿ ಸಿನಿಮಾ-ಹಂಚಿಕೆ-ಪ್ರಾದೇಶಿಕ ಭಾಷೆ - ಸೃಜನಶೀಲತೆ ಹಾಗು ವಾಸ್ತವ

ಮಾತನಾಡಲಿರುವವರು: ಗುರುಪ್ರಸಾದ್ ಕೆ ಆರ್

ಓದಿದ್ದು ಬಿಎಸ್‌ಸಿ, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿಯಲ್ಲಿ ಡಿಪ್ಲೊಮ, ಓದಿನಂತರ ಹಿಂದೂಸ್ಥಾನ್ ಲಿವರ್‌ನಲ್ಲಿ ಐದು ವರ್ಷ ರಿಸರ್ಚ್ ಸೈಂಟಿಸ್ಟ್ ಆಗಿ ದುಡಿಮೆ. ಮಠ ಚಿತ್ರ ನಿರ್ದೇಶನಕ್ಕೆ ಮುಂಚೆ, ಟಿ.ಎನ್. ಸೀತಾರಾಂ, ಸುನಿಲ್‌ಕುಮಾರ್ ದೇಸಾಯಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ.

ವಿಷಯ: ಅಂತರ್ಜಾಲದ ಸಂಧರ್ಭದಲ್ಲಿ ಕನ್ನಡದ ಪುಸ್ತಕೋದ್ಯಮ-ಪೂರಕ, ಮಾರಕ

ಮಾತನಾಡಲಿರುವವರು: ಪ್ರಕಾಶ್ ಕಂಬತ್ತಳ್ಳಿ

'ಅಂಕಿತ ಪುಸ್ತಕ' ಪ್ರಕಾಶನ ಆರಂಭಿಸಿ, ನಡೆಸಿಕೊಂಡು ಬರುತ್ತಿರುವ ಪುಸ್ತಕೋದ್ಯಮಿ, ಬರಹಗಾರ ಹಾಗೂ ಸಾಹಿತ್ಯ ಅಭಿವೃದ್ಧಿ ಚಿಂತಕ.

ವಿಷಯ: ಅಂತರ್ಜಾಲದ ಸಂದರ್ಭದಲ್ಲಿ ಸಂಗೀತ ಹಂಚಿಕೆ-ಸೃಜನಶೀಲತೆ-ಪ್ರಜಾಪ್ರಭುತ್ವ

ಮಾತನಾಡಲಿರುವವರು: ಜಿ ತುಳಸಿರಾಂ ನಾಯ್ಡು (ಲಹರಿ ವೇಲು)

ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ, ಕನ್ನಡ ಮಾಧ್ಯಮದಲ್ಲಿ ಬಿಕಾಂ ಪದವಿಧರ. ಜನಪದ, ಸಿನಿಮಾ, ಸುಗಮಸಂಗೀತ ಗೀತೆಗಳ ಕ್ಯಾಸೆಟ್ ಹಾಗೂ ಸಿಡಿಯನ್ನು ಅತಿ ಕಡಿಮೆ ಬೆಲೆ ಮಾರಲು ಆರಂಭಿಸಿ, ಪೈರಸಿ ವಿರುದ್ಧ ಹೋರಾಡುವವರಲ್ಲಿ ಮುಂಚೂಣಿಯಲ್ಲಿರುವವರು.

ಎಂದು?

ಜೂನ್ 8ರ ಭಾನುವಾರದಂದು ಬೆಳಿಗ್ಗೆ : 10:30ಕ್ಕೆ

ಎಲ್ಲಿ?

ಕ್ರೈಸ್ಟ್ ಕಾಲೇಜ್ ಆಫ್ ಲಾ

ಜೂನಿಯರ್ ಕಾಲೇಜ್ ಕಟ್ಟಡ

ನಾಲ್ಕನೆ ಮಹಡಿ

ಡೈರಿ ಸರ್ಕಲ್

ಬೆಂಗಳೂರು

ಪ್ರವೇಶ : ಅಹ್ವಾನವನ್ನು ಕೇವಲ ನೋಂದಾಯಿಸಿಕೊಂಡವರಿಗೆ ಮಾತ್ರ ಎಂದು ನಿಗದಿಗೊಳಿಸಲಾಗಿದೆ. ಪ್ರವೇಶಾಹ್ವಾನವನ್ನು ಅಂತಿಮಗೊಳಿಸುವಾಗ ಕನ್ನಡದಲ್ಲಿ ಬ್ಲಾಗ್ ಚಟುವಟಿಕೆಯಲ್ಲಿ ನಿರತರಾಗಿರುವವರಿಗೆ, ಹಾಗು ಪ್ರಥಮವಾಗಿ ಯಾರು ನೋಂದಾಯಿಸಿಕೊಳ್ಳುತ್ತಾರೊ ಅಂಥವರಿಗೆ ಮಾತ್ರ. ಈ ನಮ್ಮ ಮಿತಿಯನ್ನು ಸಹೃದಯರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆ ನಮಗಿದೆ.

ನೋಂದಾಯಿಸುಕೊಳ್ಳುವವರ ಗಮನಕ್ಕೆ : ಪ್ರಬಂಧ ವಿಷಯ ಕುರಿತಂತೆ, ಪ್ರಬಂಧ ಮಂಡಿಸುವವರಿಗೆ, ಪ್ರಶ್ನೆಗಳನ್ನು ಕೇಳುವುದಿದ್ದರೆ ನೋಂದಾಯಿಸಿಕೊಳ್ಳುವಾಗಲೇ ಕೇಳಬಹುದು. ಪ್ರಶ್ನೆಗಳನ್ನು ಒಟ್ಟುಗೂಡಿಸಿ, ಐದು ಪ್ರಶ್ನೆಗಳನ್ನು ಆಯ್ಕೆ ಮಾಡಿ, ಪ್ರಬಂಧ ಮಂಡಿಸುವವರಿಗೆ ಮುಂಚೆಯೇ ತಲುಪಿಸಲಾಗುವುದು. ಜೊತೆಗೆ, ವಿಚಾರಸಂಕಿರಣದಂದು, ನೇರವಾಗಿ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸಲಾಗುವುದು. ಇದರ ಹೊರತಾಗಿ, ಒಂದು ಗಂಟೆ ಕಾಲ, ಮುಕ್ತ ಪ್ರಶ್ನೋತ್ತರ ಸಮಯವನ್ನೂ ನಿಗದಿ ಮಾಡಲಾಗಿದೆ. ಅಲ್ಲಿ ಯಾರು ಯಾರನ್ನು ಬೇಕಾದರೂ ಪ್ರಶ್ನೆ ಕೇಳಬಹುದು.

ವಿಚಾರಸಂಕಿರಣದಂದು, ಸ್ಥಳಾವಕಾಶ ಲಭ್ಯವಿದ್ದರೆ ಬೆಳಿಗ್ಗೆ 9:30ರಿಂದ 10:30ರವರೆಗೆ, ಸ್ಥಳದಲ್ಲಿಯೇ ನೇರ ನೋಂದಾವಣೆಗೆ ವ್ಯವಸ್ಥೆ ಮಾಡಲಾಗುವುದು.

ಸಮಯಾವಕಾಶ ಹಾಗು ಉತ್ಸಾಹ ಎರಡೂ ಇದ್ದರೆ, ಅದೇ ದಿನದಂದು ಮಧ್ಯಾಹ್ನ ಬ್ಲಾಗಿಗಳಿಗಾಗಿ, ಪ್ರತ್ಯೇಕ ಅನೌಪಚಾರಿಕವಾದ ಚರ್ಚೆಯನ್ನು ಏರ್ಪಡಿಸಬಹುದು. ಈ ಬಗೆಗೆ , ವಿಚಾರಸಂಕಿರಣದ ದಿನದಂದು ಮಧ್ಯಾಹ್ನ ಸ್ಥಳದಲ್ಲಿಯೇ ತಿಳಿಸಲಾಗುವುದು.

ನಿಮ್ಮ ಸಲಹೆ, ಪ್ರಶ್ನೆಗಳೇನಾದರೂ ಇದ್ದಲ್ಲಿ ಹಾಗೂ ನೋಂದಾಯಿಸಲು ಸಂಪರ್ಕಿಸಿ : ರವಿ ಅರೇಹಳ್ಳಿ : 9900439930

ಹೆಚ್ಚಿನ ವಿವರಗಳಿಗೆ ಕನ್ನಡಸಾಹಿತ್ಯ.ಕಾಂ ನ ಇವೆಂಟ್ಸ್ ಪುಟಕ್ಕೆ ಭೇಟಿಕೊಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more