ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನ್ ಕನ್ನಡಿಗರನ್ನು ಕನ್ನಡಿಗರನ್ನಾಗಿಸೋಣ

By Staff
|
Google Oneindia Kannada News

ಬೆಂಗಳೂರು: ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಅಪರಾಧ ಮತ್ತು ತಾಂತ್ರಿಕ ವಿಭಾಗ) ಡಾ. ಸುಭಾಷ್ ಭರಣಿ ಹಾಗೂ ವಾರ್ತಾ ಇಲಾಖೆ ಆಯುಕ್ತ, ಐಜಿಪಿ ಕೆ.ವಿ.ಆರ್. ಠಾಗೂರ್ ಅವರು ರಾಜಕೀಯ ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಸ್ವಯಂ ನಿವೃತ್ತಿ ಪಡೆದು ಯಾವ ಪಕ್ಷ ಸೇರುತ್ತಾರೆ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷ ಇಬ್ಬರನ್ನು ತನ್ನ ತೆಕ್ಕೆಗೆ ಸೆಳೆಯಲು ಹುನ್ನಾರ ನಡೆಸಿದೆ.ಈಗಾಗಲೇ ಐಜಿಪಿಯಾಗಿದ್ದ ಕೆ.ಸಿ.ರಾಮಮೂರ್ತಿ, ಎಸಿಪಿಗಳಾಗಿದ್ದ ಬಿ.ಕೆ.ಶಿವರಾಂ, ದಿವಾಕರ್ ಅವರು ರಾಜಕೀಯ ರಂಗ ಸೇರಲು ಸಿದ್ಧರಾಗಿದ್ದಾರೆ.


ನಾನ್ ಕನ್ನಡಿಗರನ್ನು ಕನ್ನಡಿಗರನ್ನಾಗಿಸೋಣ

ಬೆಂಗಳೂರು: ನಗರದ ಎಸ್ ಜೆ ಆರ್ ವಿದ್ಯಾಸಂಸ್ಥೆ ಸಮೂಹದವರು ಹೊರರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವ ಜನರಿಗೆ ಕನ್ನಡ ಕಲಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಶಾಂತಿನಗರ, ಕೋರಮಂಗಲ ಹಾಗೂ ಬಸವನಗುಡಿ ಪ್ರದೇಶಗಳಲ್ಲಿ ಕನ್ನಡ ಕಲಿಕೆ ಶಾಲೆಗಳನ್ನು ತೆರೆದು ವರ್ಷವೊಂದರಲ್ಲಿ ಸುಮಾರು 1000 ಜನ ಕನ್ನಡೇತರರನ್ನು ಕನ್ನಡಿಗರಾಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಆಸಕ್ತರು ಸಂಪರ್ಕಿಸಿ: 98459 89533

ಲೋಕಾಯುಕ್ತರಿಗೆ ಸೆರೆಸಿಕ್ಕ ಪೊಲೀಸ್ ಅಧಿಕಾರಿ

ರಾಯಭಾಗ್ : ಇಲ್ಲಿನ ಕುಡಚಿ ಠಾಣೆ ಹಿರಿಯ ಪೊಲೀಸ್ ಅಧಿಕಾರಿ(ಪಿಎಸ್ ಐ ) ಎಂ.ಬಿ ಮೊಕಾಶಿ ಅವರು ಹತ್ತು ಸಾವಿರ ರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾರೆ.

ವಿದ್ಯಾರ್ಥಿ ಸಾವು

ಬೆಂಗಳೂರು : ನಗರದ ಚಿಕ್ಕಪೇಟೆ ಕಿಲಾರಿ ರಸ್ತೆಯಲ್ಲಿ ವಾಸವಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಫೇಲಾಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮರಣಪತ್ರದಿಂದ ತಿಳಿದುಬಂದಿದೆ.
(ದಟ್ಸ್ ಕನ್ನಡವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X