ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಗೆ ಎರಡು ಹೊಸ ತ್ರಿಚಕ್ರ ವಾಹನಗಳು

By Staff
|
Google Oneindia Kannada News

ಬೆಂಗಳೂರು, ಮಾ.13 : 1999ರಿಂದ ಹಗುರ ಸಾರಿಗೆ ವಾಹನಗಳ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿಚಕ್ರವಾಹನ ಸಂಸ್ಥೆಯಾದ ಪಿಯಾಗ್ಯೊ ಇಂದು apeXtra ಮತ್ತು apeXtra – LDಎಂಬ ಎರಡು ತ್ರಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪಿಯಾಗ್ಯೊದ ಮುಖ್ಯಸ್ಥ ಮತ್ತು ವ್ಯವಹಾರ ನಿರ್ದೇಶಕರಾದ ರವಿ ಚೊಪ್ರಾ ಮಾತನಾಡುತ್ತಾ, ಈ ಸ್ಪರ್ದಾತ್ಮಕ ಯುಗದಲ್ಲೂ ತಮ್ಮತನವನ್ನು ಉಳಿಸಿಕೊಂಡು ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಸೌಲಭ್ಯಗಳನ್ನು ಒದಗಿಸುತ್ತಲೇ ಬಂದಿದ್ದೇವೆ ಎಂದರು.

ದೇಶಾದ್ಯಂತ ಉತ್ತಮ ದರ್ಜೆಯ ಸೇವೆಯನ್ನು ಒದಗಿಸುತ್ತಿದ್ದೇವೆ. ಮಾರುಕಟ್ಟೆಯ ಎಲ್ಲೆಯನ್ನು ಮೀರಿ ದೇಶದ ಗ್ರಾಮೀಣ ಪ್ರದೇಶಕ್ಕೆ ಲಗ್ಗೆ ಇಟ್ಟು ಅಲ್ಲಿನ ಜನರ ಜೀವನೋಪಾಯಕ್ಕೆ ಸಹಕಾರಿಯಾದ ಸಂಸ್ಥೆ ಇದಾಗಿದೆ. ನಮ್ಮ ಗುರಿಯೂ ಸಹ ಯಾರು ತಲುಪದ ಸ್ಥಳವನ್ನು ತಲುಪುದಾಗಿದ್ದು ಆ ಮೂಲಕ ನಮ್ಮ ಗ್ರಾಹಕರಿಗೆ ಉಪಯೋಗವಾಗುವಂತೆ ಮಾಡುವುದು ಎಂದು ರವಿ ಚೊಪ್ರಾ ಅಭಿಪ್ರಾಯ ಪಟ್ಟರು.

ಪಿಯಾಗ್ಯೊದ Ape Xtra ಮತ್ತು Xtra – LD ಎಂಬ ಎರಡು ವಾಹನಗಳು ತ್ರಿ ಚಕ್ರ ವಾಹನಗಳಲ್ಲೇ ಗುಣಮಟ್ಟದ ವಾಹನಗಳಾಗಿ ರೂಪುಗೊಂಡಿವೆ.ಹೆಚ್ಚಿನ ಸ್ಥಳಾವಕಾಶ, ಹೆಚ್ಚಿನ ಗಾತ್ರ, ಹೆಚ್ಚಿನ ಗಳಿಕೆ ಮತ್ತು ಲಾಭವನ್ನು ಪ್ರತಿ ಪ್ರಯಾಣದಲ್ಲೂ ಪಡೆಯಬಹುದಾಗಿದೆ ಎಂದು ಪಿಯಾಗ್ಯೊ ತ್ರಿಚಕ್ರ ವಾಹನ ತಯಾರಿಕಾ ಸಂಸ್ಥೆ ತಿಳಿಸಿದೆ.

(ದಟ್ಸ್‌ಕನ್ನಡ ಸುದ್ದಿ ಚಿತ್ರ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X