ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಮುಡಿ ಚೆಲುವನಾರಾಯಣನ ಬ್ರಹ್ಮೋತ್ಸವ

By Staff
|
Google Oneindia Kannada News

melkote vairamudi utsavಪಾಂಡವಪುರ, ಮಾ. 13: ವೈರಮುಡಿ ಬ್ರಹ್ಮೋತ್ಸವದ ಪ್ರಯುಕ್ತ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು.

ಕೃತಿಕಾ ನಕ್ಷತ್ರದಲ್ಲಿ ಅಂಕುರಾರ್ಪಣೆ ಪೂಜಾ ವಿಧಾನಗಳು ಸಂಜೆ ನೇರವೇರಿಸಲಾಯಿತು. ಮಾ.17 ರಂದು ವಿಧ್ಯುಕ್ತವಾಗಿ ಆರಂಭವಾಗಲಿರುವ ವೈರಮುಡಿ ಉತ್ಸವ, ಮಾ. 24 ರವರೆಗೆ ನಡೆಯಲಿದೆ. ಪ್ರತಿ ದಿನ ನಾನಾ ರೀತಿಯ ಪೂಜಾ ವಿಧಾನಗಳಿಂದ ಚೆಲುವನಾರಾಯಣಸ್ವಾಮಿಯನ್ನು ಸಂತೃಪ್ತಿಗೊಳಿಸಲಾಗುವುದು ಎಂದು ಮೇಲುಕೋಟೆ ದೇವಳದ ಪ್ರಧಾನ ಅರ್ಚಕರು ತಿಳಿಸಿದರು.

ಈ ಬಾರಿಯ ಉತ್ಸವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳು ಭರದಿಂದ ಸಾಗಿದ್ದು, ಮೇಲುಕೊಟೆ ಸಂಪರ್ಕ ರಸ್ತೆಗಳನ್ನು ಕೂಡ ದುರಸ್ತಿ ಮಾಡಲಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಪಾಂಡವಪುರ,ಶ್ರೀರಂಗಪಟ್ಟ್ಟಣ, ಕೆ.ಆರ್. ಪೇಟೆಯಿಂದ ಮೇಲುಕೋಟೆಗೆ ಬರುವ ಭಕ್ತಾದಿಗಳಿಗೆ ಕೆಎಸ್ಸಾರ್ಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ನಾಣ್ಯ ಎಸೆಯಬೇಡಿ: ಉತ್ಸವದ ಸಂದರ್ಭದಲ್ಲಿ ಮಾಂಸ, ಮದ್ಯ ವ್ಯಾಪಾರವನ್ನು ನಿಷೇಧಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ನಾನಾ ಠಾಣೆಗಳ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ . ವೈರಮುಡಿ ಧರಿಸಿದ ಶ್ರೀ ಚೆಲುವನಾರಾಯಣ ಸ್ವಾಮಿಯ ಉತ್ಸವ ದೇವಾಲಯದಿಂದ ಹೊರಬರುತ್ತಿದ್ದಂತೆ ಭಕ್ತರು ನಾಣ್ಯ ಎಸೆಯುವುದು ಪ್ರತೀತಿ. ಆದರೆ ಇದರ ಪರಿಣಾಮವಾಗಿ ವೈರಮುಡಿ ಭಗ್ನವಾಗುವ ಸಾಧ್ಯತೆ ಹೆಚ್ಚು.ಈ ಬಾರಿಯಿಂದ ಯಾರು ನಾಣ್ಯ ಎಸೆಯಬಾರದೆಂದದು ಜಿಲ್ಲಾಡಳಿತ ಕಟ್ಟಾಜ್ಞೆ ಹೊರಡಿಸಿದೆ.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X