ಮಾರ್ಚ್ 17 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಬೆಂಗಳೂರು , ಮಾ.11: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 17 ರಿಂದ 29 ರ ತನಕ ನಡೆಯಲಿದೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತ ಎಸ್ .ಜಿ. ಹೆಗಡೆ ಮಾಹಿತಿ ನೀಡಿದರು.

ಈ ಬಾರಿಯ ಪರೀಕ್ಷೆಗೆ 5,73,446 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅವರಲ್ಲಿ 3,19,295 ಬಾಲಕರು ಮತ್ತು 2,54,151 ಬಾಲಕಿಯರು ಸೇರಿದ್ದಾರೆ. ಕಳೆದ ವರ್ಷಕ್ಕಿಂತ 79,234 ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 774 ಪರೀಕ್ಷಾ ಕೇಂದ್ರಗಳಿವೆ. ಅದರಲ್ಲಿ 75 ಸೂಕ್ಷ್ಮ ಮತ್ತು 18 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ .ಜಿ. ಹೆಗಡೆ ಹೇಳಿದರು.

ಈ ಬಾರಿ ಪರೀಕ್ಷೆಯ ವಿಶೇಷಗಳು:

ಪ್ರಸಕ್ತ ವರ್ಷದಿಂದ ಸ್ಕ್ಯಾನ್ ಪದ್ಧತಿ ಅಳವಡಿಸಲಾಗಿದೆ. ಪ್ರವೇಶ ಪತ್ರಗಳಲ್ಲಿ ಮತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ವಿದ್ಯಾರ್ಥಿಗಳ ಭಾವಚಿತ್ರ, ಸಹಿ ಹಾಗೂ ಪ್ರಾಂಶುಪಾಲರ ಸಹಿಗಳನ್ನು ಸ್ಕ್ಯಾನ್ ಮಾಡಿ ಮುದ್ರಿಸಲಾಗಿದೆ. ಇದೇ ಭಾವಚಿತ್ರ ಹಾಗೂ ಸಹಿ ಅಂಕಪಟ್ಟಿಯಲ್ಲಿಯೂ ಪ್ರಕಟವಾಗಲಿದೆ.

ಪರೀಕ್ಷಾ ಅವಧಿಯನ್ನು 15 ನಿಮಿಷಗಳ ಕಾಲ ಹೆಚ್ಚಿಸಲಾಗಿದೆ. ಸಿಟಿಂಗ್ ಸ್ಕ್ವಾಡ್ ಗಳ ಪದ್ಧತಿಯನ್ನು ರದ್ದು ಮಾಡಲಾಗಿದ್ದು, ಯಾವುದೇ ವೀಕ್ಷಣಾ ಅಧಿಕಾರಿಗಳು ಎರಡು ದಿನ ಮಾತ್ರ ಒಂದು ಕೇಂದ್ರವನ್ನು ನೋಡಿಕೊಳ್ಳಬೇಕು. ವಿಜ್ಞಾನೇತರ ವಿಷಯಗಳಿ ಹಾಗೂ ಭಾಷಾ ವಿಷಯಗಳಿಗೆ ನೀಡಲಾಗುವ ಆಂತರಿಕ ಅಂಕಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಗಳಲ್ಲಿಯೇ ಪ್ರಶ್ನೆಗಳನ್ನು ಕೇಳಲಾಗುತ್ತದೆ.

(ದಟ್ಸ್‌ಕನ್ನಡ ವಾರ್ತೆ)

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+