ಭಯೋತ್ಪಾದನೆ ವಿರುದ್ಧ ರಾಜ್ಯ ಮುಸ್ಲಿಂಮರ ಸಮರ

Rehman Khan, Rajyasabha memberಬೆಂಗಳೂರು, ಮಾ. 11 : "ಭಯೋತ್ಪಾದನೆ ವಿರುದ್ಧ ಸಮರ" ವಿಷಯ ಇಟ್ಟುಕೊಂಡು ಕರ್ನಾಟಕದ ಮುಸ್ಲಿಂ ಸಮುದಾಯದವರು ಕಳೆದ ಭಾನುವಾರ ಬೆಂಗಳೂರಿನಲ್ಲಿ ಒಂದು ವಿಚಾರ ಸಂಕಿರಣ ನಡೆಸಿದರು. ಸಂಕಿರಣವನ್ನು ಸೆಂಟರ್ ಫಾರ್ ಕಮ್ಯುನಿಟಿ ಡೆವೆಲಪ್‌ಮೆಂಟ್ ಸಂಸ್ಥೆ ಏರ್ಪಡಿಸಿತ್ತು.

ಈ ಕಮ್ಮಟದಲ್ಲಿ ಇಸ್ಲಾಂ ವಿದ್ವಾಂಸರು, ರಾಜಕೀಯ ವ್ಯಕ್ತಿಗಳು, ಸ್ವಯಂಸೇವಾ ಸಂಸ್ಥೆಗಳ ಧುರೀಣರು, ವಿಚಾರವಾದಿಗಳು ಪಾಲ್ಗೊಂಡಿದ್ದರು. ಸೆಂಟರ್ ಫಾರ್ ಕಮ್ಯುನಿಟಿ ಡೆವೆಲಪ್‌ಮೆಂಟ್‌ನ ಅಧ್ಯಕ್ಷ ಎಸ್. ಎನ್. ಎಚ್. ರಜ್ವಿ ಪ್ರತಿನಿಧಿಗಳನ್ನು ಉದ್ದೇಶಿಸಿ ಸಂಕಿರಣದ ಉದ್ದೇಶ ಹಾಗೂ ಮಹತ್ವವನ್ನು ಬಿಂಬಿಸಿದರು. ಡಾ. ಟಾಹಾ ಮತೀನ್ ಆಶಯ ಭಾಷಣ ಮಾಡಿದರು. ಶೀಮಾ ಮೊಹಸಿನ್ ಅವರು ಈ ಸಮರದಲ್ಲಿ ಮಹಿಳೆಯರ ಪಾತ್ರವನ್ನು ವರ್ಣಿಸುವ ಪ್ರಬಂಧ ಮಂಡಿಸಿದರೆ, ಅಬ್ದುಲ್ ಸಲಾಂ ಪುತ್ತಿಗೆ ಅವರು ಭಯೋತ್ಪಾದನೆ ವಿರುದ್ಧ ಸಮರದ ಹಿನ್ನೆಲೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ತಮ್ಮ ವಿಚಾರಧಾರೆಗಳನ್ನು ಮಂಡಿಸಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್ ಅವರು ಸಂಸ್ಥೆ ರೂಪಿಸಿರುವ ಠರಾವುಗಳನ್ನು ಮಂಡಿಸಿದರು. ಆನಂತರ ಈ ಠರಾವುಗಳು ಸರ್ವಾನುಮತದಿಂದ ಅಂಗೀಕೃತವಾದವು. ಠರಾವುಗಳು ಕೆಳಕಂಡಂತಿವೆ :

1) ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಜಾಗತಿಕ ಹೋರಾಟಕ್ಕೆ ರಾಜ್ಯದ ಮುಸ್ಲಿಂ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಜಾಗತಿಕ ಶಾಂತಿಯೇ ನಮ್ಮ ಆಶಯ.

2)ಭಯೋತ್ಪಾದನೆಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ. ಉಗ್ರಗಾಮಿ ಚಿಂತನೆ ಇಸ್ಲಾಂನ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಕರ್ನಾಟಕದ ಮುಸ್ಲಿಮರು ಭಯೋತ್ಪಾದನೆಯ ಚಟುವಟಿಕೆಗಳನ್ನು ಒಕ್ಕೊರಲಿನಿಂದ ಖಂಡಿಸಬೇಕು.

3)ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಳ್ಳದೆ ಭಯೋತ್ಪಾದನೆಯ ಸುದ್ದಿ ಸಮಾಚಾರಗಳನ್ನು ರಾಜ್ಯದ ಮಾಧ್ಯಮ ಬಿಂಬಿಸಬೇಕು. ವರದಿ ಮಾಡುವಾಗ ವಸ್ತುನಿಷ್ಠವಾಗಿರಬೇಕು.

4)ಮುಸ್ಲಿಂ ಭಯೋತ್ಪಾದನೆ, ಇಸ್ಲಾಮಿಕ್ ಜೆಹಾದ್, ಇಸ್ಲಾಮಿಕ್ ಟೆರರಿಸಂ ಮುಂತಾದ ಪೂರ್ವಗ್ರಹ ಪೀಡಿತ ನುಡಿಗಟ್ಟುಗಳನ್ನು ಬಳಸಬಾರದು.ಹೀಗೆ ಶಬ್ದಗಳನ್ನು ಬಳಸಿದರೆ ಒಂದು ನಿರ್ದಿಷ್ಟ ಸಮುದಾಯವನ್ನೇ ಗುರಿಮಾಡಿದಂತಾಗುತ್ತದೆ.

5) ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಪ್ರಸಕ್ತ ಸಮರವು ಶಾಂತಿಸ್ಥಾಪನೆ ಆಗುವವರೆಗೆ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದೇ ಹೋದ ಪಕ್ಷದಲ್ಲಿ ಅದು ಒಂದು ಸಮುದಾಯದ ವಿರುದ್ಧದ ಅಪಪ್ರಚಾರವಾಗುತ್ತದೆ.

6) ಭದ್ರತೆ ಮತ್ತು ರಕ್ಷಣೆಯ ಹೆಸರಿನಲ್ಲಿ ನಿರಪರಾಧಿ ವ್ಯಕ್ತಿಗಳಿಗೆ ತೊಂದರೆಯಾಗದಂತೆ ರಾಜ್ಯದ ಆಡಳಿತ ನಿಗಾ ವಹಿಸಬೇಕು ಎಂದು ಸಿಸಿಡಿ ಆಗ್ರಪೂರ್ವಕವಾಗಿ ಒತ್ತಾಯಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+