ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೊದಲ್ಲಿ ವಾಕ್ ಇನ್ ಸಂದರ್ಶನ, ತ್ವರೆ ಮಾಡಿ

By ಶಾಮ್
|
Google Oneindia Kannada News

ಬೆಂಗಳೂರು ವಿಪ್ರೊ ಟೆಕ್ನಾಲಜೀಸ್ ಕಂಪನಿಯಲ್ಲಿ ಉದ್ಯೋಗಾವಕಾಶಗಳು ತೆರೆದಿವೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೌಕರಿಗೆ ಸೇರಲು ಇದೊಂದು ಸದವಕಾಶ. ಸದವಕಾಶ ಹೇಗೆಂದರೆ, ಸಾಮಾನ್ಯವಾಗಿ ಬಿಇ ವಿದ್ಯಾರ್ಹತೆ ಕೇಳಿದಾಗ ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧೆ ಇರುತ್ತದೆ. ಆದರೆ, ಈಗ ಭರ್ತಿ ಆಗಬೇಕಾಗಿರುವ ಖಾಲಿ ಹುದ್ದೆಗಳಿಗೆ ಡಿಪ್ಲೊಮಾ ಪಾಸಾಗಿದ್ದರೆ ಸಾಕಾಗಿರುವುದರಿಂದ ಸ್ಪರ್ಧೆ ಕಡಿಮೆಯಿರುತ್ತದೆ. ಸ್ಪರ್ಧೆ ಕಡಿಮೆ ಏಕೆಂದರೆ, ವಿಪ್ರೊ ಕಂಪನಿ ತನ್ನ ವಾಕ್ ಇನ್ ಸಂದರ್ಶನಗಳನ್ನು ಕೊಚ್ಚಿ, ಚೆನ್ನೈ, ಹೈದರಾಬಾದ್‌ನಲ್ಲೂ ಇಟ್ಟುಕೊಂಡಿದೆ. ಇದರಿಂದಾಗಿ, ಕನ್ನಡನಾಡಿನ ಉದ್ಯೋಗಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಂಡಿವೆ.

ಅವರು ಕೇಳಿರುವ ಅರ್ಹತೆಗಳು ತುಂಬ ಸಿಂಪಲ್ ಆಗಿವೆ. ವಾಕಿನ್ ಸಂದರ್ಶನಗಳು ಇರುವುದರಿಂದ ನಮ್ಮ ಕನ್ನಡ ಹುಡುಗರು, ಹುಡುಗಿಯರು ಆಲಸ್ಯ ಮಾಡದೆ ಪ್ರಯತ್ನ ಮಾಡಬಹುದು.

*ವಿದ್ಯಾರ್ಹತೆ : ಮೆಕ್ಯಾನಿಕಲ್, ಏರೋಸ್ಪೇಸ್, ಆಟೋಮೊಬೈಲ್, ಮ್ಯಾನುಫ್ಯಾಕ್ಚರಿಂಗ್ ಅಂಡ್ ಪ್ರೊಡಕ್ಷನ್.
*ನಿರೀಕ್ಷೆ : 2006, 07, 08ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು.
*ಅಂಕಗಳು : ಹತ್ತು ಮತ್ತು 12ನೇ ತರಗತಿಯಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು.ಡಿಪ್ಲೊಮಾದಲ್ಲಿ ಕನಿಷ್ಠ ಶೇ. 60 ಅಂಕ ತೆಗೆದಿರಬೇಕು.

ನೊಂದಾವಣೆ ಯಾವಾಗ? : ಇದೇ ಮಾರ್ಚ್ 7 ಶುಕ್ರವಾರ ಬೆಳಗ್ಗೆ 8 ಗಂಟೆಗೆ.
ವಾಕಿನ್ ಇಂಟರ್ ವ್ಯೂ ಎಲ್ಲಿ ? : ವಿಪ್ರೊ ಟೆಕ್ನಾಲಜೀಸ್, ಎಂ3 ಬಿಲ್ಡಿಂಗ್, ಮಡಿವಾಳ ಪೊಲೀಸ್ ಠಾಣೆ ಪಕ್ಕ. ಗಣಪ ಟವರ್ಸ್, ಮಡಿವಾಳ ಬೆಂಗಳೂರು.
ಏನೇನು ತರಬೇಕು ? : ವಿಪ್ರೊ ಎಚ್ಆರ್‌ಡಿಗೆ ಫೋನ್ ಮಾಡಿ, ಸಂದರ್ಶನಕ್ಕೆ ಬರಬೇಕಾದರೆ ಯಾವಯಾವ ದಾಖಲೆಗಳನ್ನು ತರಬೇಕು ಇತ್ಯಾದಿ ಮಾಹಿತಿಯನ್ನು ಪಡೆದುಕೊಳ್ಳಿರಿ. ದೂರವಾಣಿ ಸಂಖ್ಯೆ : 080 - 3982 9300. [extn: 3064]

**ದಟ್ಸ್‌ಕನ್ನಡ ಓದುಗರಲ್ಲಿ ವಿನಂತಿ : ಉದ್ಯೋಗಾವಕಾಶಗಳು ಇರುತ್ತವೆ, ಆದರೆ ಅದರ ಬಗೆಗೆ ಸ್ಪಷ್ಟ ಮಾಹಿತಿ ಗೊತ್ತಿಲ್ಲದೆ ಸುಮ್ಮನೆ ಎಲ್ಲೋ ಇದ್ದುಬಿಡುವ ಯುವಕ ಯುವತಿಯರು ಇರುತ್ತಾರೆ. ಅವರೆಲ್ಲ ನಮ್ಮ ವೆಬ್‌ಸೈಟ್ ನೋಡುತ್ತಾರೆಂದು ನಿರೀಕ್ಷಿಸಲಾಗದು. ಆದ್ದರಿಂದ, ಈ ಸುದ್ದಿ ಓದಿದವರು ತಮಗೆ ಗೊತ್ತಿರುವ ಜನಕ್ಕೆ ಇಮೇಲ್ ಮುಖಾಂತರವೋ, ಫೋನ್ ಮಾಡಿಯೋ, ಹೇಳಿಕಳಿಸಿಯೋ ವಿಚಾರ ತಲುಪಿಸುವುದು. ಈಗಾಗಲೆ ನೌಕರಿಯಲ್ಲಿರುವ ಡಿಪ್ಲೊಮಾ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕರಿಗೆ ತಿಳಿಸುವುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X