ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂಗೆ ಬಲವಂತ ಮತಾಂತರ: ಕಾಶ್ಮೀರ್ ಸಿಂಗ್

By Staff
|
Google Oneindia Kannada News

ಲಾಹೋರ್, ಮಾ.4: ಸುದೀರ್ಘ35 ವರ್ಷಗಳ ಕಾಲ ಪಾಕಿಸ್ತಾನಿ ಜೈಲಿನಲ್ಲಿ ಕಳೆದು, ನಾನಾ ಚಿತ್ರಹಿಂಸೆಗಳನ್ನು ಅನುಭವಿಸಿ ಕಡೆಗೂ ತಾಯ್ನಾಡಿಗೆ ಮರಳಿದ್ದಾರೆ ಕಾಶ್ಮೀರ್ ಸಿಂಗ್. ಗೂಢಚರ್ಯೆ ಆಪಾದನೆಯ ಮೇಲೆ ಕಾಶ್ಮೀರ್ ಸಿಂಗ್ ಅವರನ್ನು ಪಾಕಿಸ್ತಾನ 1973 ಬಂಧಿಸಿತ್ತು. ವಾಘಾ ಗಡಿ ಮೂಲಕ ಮಂಗಳವಾರ ಅವರು ಭಾರತವನ್ನು ಪ್ರವೇಶಿಸಿದರು.

ಕಾಶ್ಮೀರ್ ಸಿಂಗ್ ಅವರನ್ನು ಸೊಮವಾರ ಸಂಜೆ ಲಾಹೋರ್ ಬಂಧಿಖಾನೆಯಿಂದ ಬಿಡುಗಡೆ ಮಾಡಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಕಾಶ್ಮೀರ್ ಸಿಂಗ್ ರಾತ್ರಿಯಲ್ಲಾ ಲಾಹೋರ್‌ನಲ್ಲೇ ಕಳೆದು ಅಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಅವರ ಆಗಮನಕ್ಕಾಗಿ ಇಂದು (ಮಾ.4) ವಾಘಾ ಗಡಿಯಲ್ಲಿ ಅವರ ಪತ್ನಿ ಹಾಗೂ ಮೂವರು ಮಕ್ಕಳು ನಿರೀಕ್ಷಿಸುತ್ತಿದ್ದರು.

ಕಾಶ್ಮೀರ್ ಸಿಂಗ್ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಶೇ.100 ರಷ್ಟು ಸುಸ್ಥಿತಿಯಲ್ಲಿದೆ ಎಂದು ಮಾನವ ಹಕ್ಕುಗಳ ಸಚಿವಾಲಯದ ವಕ್ತಾರ ಅನ್ಸಾರ್ ಬುರ್ನಿ ತಿಳಿಸಿದ್ದಾರೆ. ಕಾಶ್ಮೀರ್ ಸಿಂಗ್ ಜೈಲಿನಲ್ಲಿದ್ದಾಗ ಅವರನ್ನು ಮತಾಂತರ ಮಾಡಲಾಗಿತ್ತು. ಅವರ ಹೆಸರನ್ನು ಮೊಹಮ್ಮದ್ ಇಬ್ರಾಹಿಂ ಎಂದು ಬದಲಾಯಿಸಿದ್ದರು.

ತೀರಾ ಉದ್ವೇಗಕ್ಕೆ ಒಳಗಾಗಿದ್ದ ಕಾಶ್ಮೀರ್ ಸಿಂಗ್ ಭರವಸೆಯೊಂದೇ ನನ್ನನ್ನು ಉಳಿಸಿದ್ದು ಎಂದು ಅವರ ಸುತ್ತ ನೆರೆದಿದ್ದ ಪತ್ರಕರ್ತರಿಗೆ ತಿಳಿಸಿದರು. ಜೈಲಿನಿಂದ ಅವರನ್ನು ಬಿಡುಗಡೆಗೊಳಿಸಲು ಸುದೀರ್ಘ ವರ್ಷಗಳಿಂದ ಪಾಕಿಸ್ತಾನ ಸರ್ಕಾರದೊಂದಿಗೆ ಹೋರಾಡಿದ ಅನ್ಸಾರ್ ಬರ್ನಿ ಅವರ ಪಕ್ಕದಲ್ಲೇ ಇದ್ದರು. ನಾನು ಗೂಢಚರ್ಯೆ ಹಾಗೂ ಕಳ್ಳಸಾಗಣಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದೆ. ಈ ರೀತಿಯ ಯಾವುದೇ ಅಪರಾಧವನ್ನೂ ನಾನು ಮಾಡಿರಲಿಲ್ಲ. ಅವರು ನನ್ನನ್ನು ಬಂಧಿಸಿದಾಗ ನನ್ನ ಬಳಿ ಅವರಿಗೆ ಏನೂ ಸಿಗಲಿಲ್ಲ.ಭರವಸೆಯೊಂದೇ ನಮ್ಮನ್ನ್ನು ಇಷ್ಟು ದಿನ ಉಳಿಸಿದ್ದು. ಒಂದು ವೇಳೆ ಬದುಕುತ್ತೇವೆ ಎಂಬ ಭರವಸೆ ನಮ್ಮಲ್ಲಿ ಇಲ್ಲದೆ ಹೋಗಿದ್ದರೆ ನಾವು ಬದುಕಿ ಉಳಿಯುವುದು ಕಷ್ಟವಾಗುತ್ತಿತ್ತು ಎಂದು ಕಾಶ್ಮೀರ್ ಸಿಂಗ್ ಹೇಳಿದರು.

ಕಾಶ್ಮೀರ್ ಸಿಂಗ್ ಅವರ ಆಗಮನದಿಂದ ಅವರ ಕುಟುಂಬ ಸದಸ್ಯರಿಗೆ ಅತೀವ ಸಂತೋಷವಾಗಿತ್ತು. ನಾವು ಇದುವರೆಗೂ ಅವರನ್ನು ಮಾತನಾಡಲು ಸಾಧ್ಯವಾಗಿಲ್ಲ. ನಿಧಾನವಾಗಿ ಅವರ ಬಳಿ ಮಾತನಾಡುತ್ತೇವೆ. ನಮ್ಮ ಸ್ವಂತ ಊರಿಗೆ ಹೋಗಿ ನಾವು ಅಲ್ಲೇ ನೆಲೆಸುತ್ತೇವೆ ಎಂದು ಕಾಶ್ಮೀರ್ ಸಿಂಗ್ ಅವರ ಪುತ್ರ ಶಿಶುಪಾಲ್ ತಿಳಿಸಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X