ಕನ್ನಡಿಗರನ್ನು ಅವಹೇಳನ ಮಾಡುವ ಕವನ
ಬೆಂಗಳೂರು, ಮಾ.3:ಕನ್ನಡಿಗರು ಗುಗ್ಗುಗಳು , ಪೆದ್ದುಮುಂಡೆಮಕ್ಕಳು ಎಂಬ ಅರ್ಥ ಬರುವಂತಹ ಒಂದು ಪದ್ಯವನ್ನು ರಚಿಸಲಾಗಿದೆ. ಆ ಪದ್ಯವನ್ನು ಎಲ್ಲರೂ ರಾಗವಾಗಿ ಹಾಡಬೇಕು ಎಂದು ಪದ್ಯ ರಚನಕಾರ ಹೇಳಿದ್ದಾನೆ. ಈ ಪದ್ಯವನ್ನು ಕನ್ನಡಿಗರ ರಾಷ್ಟ್ರಗೀತೆಯೆಂದೂ ಬಣ್ಣಿಸಲಾಗಿದ್ದು ತನ್ನ ಜತೆ ಕೆಲಸಮಾಡುವ ಕಂಪನಿಯ ಎಲ್ಲಾ ಉದ್ಯೋಗಿಗಳು ಹಾಡನ್ನು ನಿತ್ಯ ಹಾಡಬೇಕೆಂದೂ ಗೀತರಚನಕಾರ ಕರೆಕೊಟ್ಟಿದ್ದಾನೆ.
ಕವನ ಬರೆದವನು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ 'ಸ್ಯಾಸ್ಕಿನ್' ಎಂಬ ಸಾಫ್ಟ್ವೇರ್ ಕಂಪನಿಯ ಅಧಿಕಾರಿ. ಆತ ವಿದೇಶೀ ಮೂಲದವನಾಗಿದ್ದು ಕನ್ನಡಿಗರನ್ನು ಅವಹೇಳನ ಮಾಡುವುದೇ ಆತನ ಪದ್ಯದ ಉದ್ದೇಶವೆಂದು ಹೇಳಲಾಗಿದೆ. ಅವನ ಹೆಸರು ಲೀ. ಕಂಪನಿಯಲ್ಲಿ ಯೋಜನಾ ವಿಭಾಗದ ಮುಖ್ಯಸ್ಥನಾಗಿರುವ ಈತ, ಈ ಮೂಲಕ ಕನ್ನಡಿಗರ ಮೇಲಿನ ದ್ವೇಷ ಸಾಧಿಸಲು ಹೊರಟಿದ್ದಾನೆ ಎಂದು ಟಿವಿ9 ಸೋಮವಾರ ಮಧ್ಯಾನ್ಹದ ತನ್ನ ಸುದ್ದಿಬಿಂಬದಲ್ಲಿ ವರದಿ ಮಾಡಿದೆ.
ಸ್ಯಾಸ್ಕಿನ್ ಕಂಪನಿಯಲ್ಲಿ ಶೇ. 90ರಷ್ಟು ಕನ್ನಡೇತರರು ಇದ್ದಾರೆ. ಇ-ಮೇಲ್ ಮೂಲಕ ಕನ್ನಡಿಗರಿಗೆ ಅಪಮಾನ ಮಾಡುವ ಪದ್ಯವನ್ನು ಅನೇಕರಿಗೆ ಫಾರ್ವರ್ಡ್ ಮಾಡಲಾಗುತ್ತಿದೆ. ಲೀ ರಚಿಸಿರುವ ಪದ್ಯದಲ್ಲಿ ಕನ್ನಡಿಗರನ್ನು ತೀವ್ರ ಅವಮಾನ ಅವಹೇಳನ ಮಾಡಲಾಗಿದೆ ಎಂದು ಟಿವಿ9 ವ್ಯಾಖ್ಯಾನ ಮಾಡಿತು. ಅಲ್ಲದೆ, ಇಂಗ್ಲಿಷ್ ನಲ್ಲಿರುವ ಆ ಗೀತೆಯನ್ನು ತನ್ನ ಪರದೆಯ ಮೇಲೆ ತೋರಿಸಿ, ಸಾಬೀತುಮಾಡಿತು.
(ದಟ್ಸ್ಕನ್ನಡ ವಾರ್ತೆ)
ಪೂರಕ ಓದಿಗೆ
ಕನ್ನಡ ವಿರೋಧಿ ಕವನದ ವಿರುದ್ಧ ಕಿಚ್ಚೆದ್ದ ಕರವೆ
ಸ್ಯಾಸ್ಕೆನ್ 'ಕವಿ' ಗಡೀಪಾರು ಮಾಡಲು ಕರವೇ ಆಗ್ರಹ


Click it and Unblock the Notifications
