ಅಣು ಒಪ್ಪಂದ : ಕೇಂದ್ರ ಸರ್ಕಾರದ ನಿಲುವು ಇಂದು ಪ್ರಕಟ
ನವದೆಹಲಿ, ಮಾ.03 : ಭಾರತ ಮತ್ತು ಅಮೆರಿಕ ನಡುವಿನ ಅಣುಬಂಧ ಒಪ್ಪಂದ ಕುರಿತಂತೆ ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇಂದು ಲೋಕಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ.
ಅಣುಬಂಧ ಒಪ್ಪಂದಕ್ಕೆ ಆದಷ್ಟು ಬೇಗನೆ ಅಂಕಿತ ಹಾಕಬೇಕೆಂದು ವಾಷಿಂಗ್ಟನ್ ಭಾರತದ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದೆ. ಯುಪಿಎ ಸರ್ಕಾರದ ಈಕುರಿತ ಮುಂದಿನ ಯೋಜನೆ ಬಗ್ಗೆ ಪ್ರಣಬ್ ಮುಖರ್ಜಿ ನಿಲುವನ್ನು ಸೋಮವಾರ ಸ್ಪಷ್ಟಪಡಿಸಲಿದ್ದಾರೆ.
ವಿಶ್ವಸಂಸ್ಥೆಯ ಕಾವಲುಪಡೆ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (ಐಎಇಎ) ಜೊತೆಗೆ ರಕ್ಷಣೆಗೆ ಸಂಬಂಧಿಸಿದಂತೆ ಭಾರತ ನಡೆಸುತ್ತಿರುವ ಮಾತುಕತೆಯ ಯಾವ ಹಂತ ತಲುಪಿದೆ ಎನ್ನುವುದರ ಬಗ್ಗೆಯೂ ಅವರು ಲೋಕಸಭೆಯಲ್ಲಿ ವಿವರಿಸಲಿದ್ದಾರೆ.
ಕಳೆದ ಗುರುವಾರ ಐಎಇಎ ಜೊತೆಗಿನ ಐದನೇ ಸುತ್ತಿನ ಮಾತುಕತೆ ಮುಕ್ತಾಯವಾಗಿದ್ದು ಭಾರತಕ್ಕೆ ಅಣುಬಂಧಕ್ಕೆ ಅಂಕಿತ ಹಾಕಲು ಅನುಮತಿ ದೊರೆಯುವ ಹಂತ ತಲುಪಿದೆ ಎನ್ನಲಾಗಿದೆ.
ಆದರೆ, ನಮ್ಮದೇ ಇಂಧನ ಸ್ಥಾವರ ಹೊಂದುವ ಮತ್ತು ಮಿಲಿಟರಿ ಅಣು ಯೋಜನೆಯ ಬಗ್ಗೆ ಐಎಇಎ ಏನು ನಿಲುವು ತಳೆದಿದೆ ಎಂದು ತಿಳಿದುಬಂದಿಲ್ಲ.
(ಏಜೆನ್ಸೀಸ್)


Click it and Unblock the Notifications
