ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರನಿದ್ರೆಗೆ ನೆಟ್ ಸ್ಕೇಪ್! ಜಾಲಿಗರ ತೀವ್ರ ಸಂತಾಪ

By Staff
|
Google Oneindia Kannada News

ಬೆಂಗಳೂರು, ಮಾ.3: ಅಂತರ್ಜಾಲ ಬಳಕೆದಾರರು ನೆಟ್‌ಸ್ಕೇಪ್ ಬ್ರೌಸರನ್ನು ಈಗಲೂ ನೆನಸಿಕೊಳ್ಳುವುದುಂಟು. 90ರ ದಶಕದಲ್ಲಿ ನೆಟ್‍ಸ್ಕೇಪ್ ಬ್ರೌಸರ್‌ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದರ ಸುದೀರ್ಘ ಬಳಕೆದಾರರಿಗೆ ನೆಟ್‌ಸ್ಕೇಪ್ ಇನ್ನ್ನು ಬರೀ ನೆನಪಷ್ಟೇ. ನೆಟ್‌ಸ್ಕೇಪ್‌ಗೆ ನೀಡುತ್ತಿರುವ ಎಲ್ಲಾ ಸಹಾಯವನ್ನೂ ನಿಲ್ಲಿಸುವುದಾಗಿ ಎಒಎಲ್ ಪ್ರಕಟಿಸಿದೆ. 1994ರ ವರೆಗೂ ನೆಟ್‌ಸ್ಕೇಪ್ ಬ್ರೌಸರ್ ಎಒಎಲ್ ಸಂಸ್ಥೆಯ ಒಡೆತನದಲ್ಲಿತ್ತು. ಹಾಗಾಗಿ ನೆಟ್‌ಸ್ಕೇಪ್ ಬ್ರೌಸರ್ ಸಮಾಧಿ ಆಗಲಿದೆ.

ಬ್ರೌಸರ್‌ಗಳಲ್ಲಿ ನೆಟ್‌ಸ್ಕೇಪ್ ಮೊದಲನೆಯದಲ್ಲ. ಅದಕ್ಕೂ ಮೊದಲು ಅಮೆರಿಕಾದ ಸಾಫ್ಟ್‌ವೇರ್ ಎಂಜಿನಿಯರ್ ಮಾರ್ಕ್ ಆಂಡರ್‌ಸನ್ ತನ್ನ ವಿದ್ಯಾರ್ಥಿ ದೆಸೆಯಲ್ಲೇ ಮೊಸಾಯ್ಕ್ ಎಂಬ ಬ್ರೌಸರನ್ನು ಸೃಷ್ಟಿಸಿದ್ದರು. ಮೈಕ್ರೊಸಾಫ್ಟ್ ಕಂಪನಿಯ ಇಂಟರ್ನೆಟ್ ಎಕ್ಸ್‌ಫ್ಲೋರರ್ ಬ್ರೌಸರ್ ಬಂದ ನಂತರ ನೆಟ್‌ಸ್ಕೇಪ್ ಆಕರ್ಷಣೆ ಕಡಿಮೆಯಾಯಿತು. ಆಶ್ಚರ್ಯವೆಂದರೆ ನೆಟ್‌ಸ್ಕೇಪ್‌ನ ಮತ್ತೊಂದು ರೂಪ ಮಾಝಿಲ್ಲಾ ಫೈರ್‌ಫಾಕ್ಸ್ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿತು. ಇದೊಂದು ಮುಕ್ತ ತಂತ್ರಾಂಶ. ಎಒಎಲ್ ಸಹ ಫೈರ್‌ಫಾಕ್ಸ್ ಬಳಕೆ ಮಾಡಲು ಶಿಫಾರಸು ಮಾಡುತ್ತಿದೆ.

ಫೈರ್‌ಫಾಕ್ಸ್‌ನ ಜನಪ್ರಿಯತೆ ಹೇಗಿದೆಯೆಂದರೆ,ಮುಕ್ತ ತಂತ್ರಾಂಶ ರೂಪದಲ್ಲಿ ಸಿಗುತ್ತಿರುವ ಬ್ರೌಸರ್‌ಗಳಲ್ಲಿ ಫೈರ್‌ಫಾಕ್ಸ್‌ನ್ನು ಪ್ರಪಂಚದಾದ್ಯಂತ ಕಳೆದ ವಾರ 50 ಕೋಟಿ ಅಂತರ್ಜಾಲ ಬಳಕೆದಾರರು ತಮ್ಮ ಗಣಕಗಳಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದಾರೆ. ಮೈಕ್ರೋಸಾಪ್ಟ್ ‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್(ಐಇ)ಗೆ ಪರ್ಯಾಯವಾಗಿ ಫೈರ್‌ಫಾಕ್ಸ್ ಮುಕ್ತ ತಂತ್ರಾಂಶ ಕಮೇಣ ಅತ್ಯಧಿಕವಾಗಿ ಬಳಕೆಯಾಗುತ್ತಿದೆ. 2007ರ ತಿಂಗಳೊಂದರಲ್ಲೇ 20 ದಶಲಕ್ಷ ಹೊಸ ಬಳಕೆದಾರರು ಮಾಝಿಲ್ಲಾ ಫೈರ್‌ಫಾಕ್ಸ್‌ನ್ನು ತಮ್ಮ ಗಣಕಗಳಲ್ಲಿ ತುಂಬಿಸಿಕೊಂಡಿದ್ದಾರೆ. ಪ್ರಪಂಚದಾದ್ಯಂತ ಬಳಕೆಯಾಗುತ್ತಿರುವ ಒಟ್ಟಾರೆ ಬ್ರೌಸರ್‌ಗಳಲ್ಲಿ ಫೈರ್‌ಫಾಕ್ಸ್ ಬಳಕೆದಾರರ ಪಾಲು ಶೇ.17ರಷ್ಟಿದೆ.

ಮೊಝಿಲ್ಲಾ ಯೋಜನೆಯ ಪ್ರಯೋಗಾರ್ಥ ನ.2004ರಂದು ಫೈರ್‌ಫಾಕ್ಸ್‌ 1.0 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ 5.7 ಮೆಗಾಬೈಟ್ಸ್ ಸಾರ್ಮರ್ಥ್ಯದ ಫೈರ್‌ಫಾಕ್ಸ್‌ನ ಹೊಸ ಆವೃತ್ತಿ 2.0.0.12 ಲಭ್ಯವಿದೆ. ಇದರ ಮುಂದಿನ 3ನೇ ಆವೃತ್ತಿ ಪರೀಕ್ಷಾ ಹಂತದಲ್ಲಿದೆ. ಬರಲಿರುವ ಈ ಹೊಸ ಆವೃತ್ತಿಯಲ್ಲಿ 1,300 ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಎಒಎಲ್ ಸಂಸ್ಥೆಯ ಸೂಚನೆಯ ಮೇರೆಗೆ 2008 ರ ವರ್ಷಾಂತ್ಯಕ್ಕೆ ವಿಂಡೋಸ್ ಹಾಗೂ ಲಿನಕ್ಸ್ ಆಪರೇಟಿಂಗ್ ಸಿಸ್ಟಂನ ಮೊಬೈಲ್ ಫೋನ್‌ನ ಆವೃತ್ತಿ ಸಹ ಬಿಡುಗಡೆ ಆಗಲಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X