ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಬಜೆಟ್ ನಲ್ಲಿ ಏನೇನು ಸಿಕ್ಕಿದೆ?

ನವದೆಹಲಿ, ಫೆ 29: 2008-09 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಪಿ. ಚಿದಂಬರಂ ಅವರು ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರಕ್ಕೆ ನೀಡಿದ ಅನುದಾನ, ಭರವಸೆಗಳ ಮುಖ್ಯಾಂಶಗಳು:

ಶಿಕ್ಷಣ ಕ್ಷೇತ್ರ:
*ಜವಹರ ನವೋದಯ ಶಾಲೆಗಳಿಗೆ 140 ಕೋಟಿ ರೂ ನೀಡಿಕೆ.
*20 ಜಿಲ್ಲೆಗಳಲ್ಲಿ ಹೊಸ ನವೋದಯ ಶಾಲೆಗಳಸ್ಥಾಪನೆ. ಸುಮಾರು 410 ವಿದ್ಯಾಲಯಗಳ ಸ್ಥಾಪನೆ ಗುರಿ.
*ಆಂಧ್ರ, ಬಿಹಾರ್ ಹಾಗೂ ರಾಜಸ್ಥಾನದಲ್ಲಿ 3 ಐಐಟಿಗಳ ಸ್ಥಾಪನೆ.
*16 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆ.
*ಪ್ರೌಢ ಶಿಕ್ಷಣ ಯೋಜನೆಗೆ 4554 ಕೋಟಿ ರು ಮೀಸಲು.
*ಭೂಪಾಲ್ ಹಾಗೂ ತಿರುವನಂತಪುರದಲ್ಲಿ 3 ಐಐಎಸ್ ಸಿ ಸ್ಥಾಪನೆ.
*ಎಲ್ಲಾ ಜ್ಞಾನ ಕೇಂದ್ರಗಳನ್ನು ಬ್ರಾಂಡ್ ಬ್ಯಾಂಡ್ ಮೂಲಕ ಸಂಪರ್ಕ.
*ಎಲ್ಲಾ ವಿವಿಗಳ ನಡುವೆ ಡಿಜಿಟಲ್ ಸಂಪರ್ಕ ಸಾಧಿಸುವ ಗುರಿ.
*ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿಭಾವಂತರಿಗೆ ಸ್ಕಾಲರ್ ಶಿಪ್ .
*ರಾಷ್ಟ್ರೀಯ ಜ್ಞಾನ ಸಂಪರ್ಕ ಯೋಜನಾ ಕೇಂದ್ರದ ಅಭಿವೃದ್ಧಿಗೆ 100 ಕೋಟಿ ನೀಡಿಕೆ.
*ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1500 ರು ಗಳಿಗೆ ಏರಿಕೆ.
*ಶಿಕ್ಷಣ ಆರೋಗ್ಯಕ್ಕೆ ಶೇ. 20 ರಷ್ಟು ಹಣ ಮೀಸಲು.
*80 ಕೋಟಿ ರು ಬಾಲಿಕ ವಿದ್ಯಾಲಯಕ್ಕೆ ನೀಡಿಕೆ.
*ಮಧ್ಯಾಹ್ನ ಬಿಸಿಯೂಟವನ್ನು ಉನ್ನತ ಮಾಧ್ಯಮಿಕ ಶಾಲೆಗಳಿಗೂ ವಿಸ್ತರಿಸಲಾಗುವುದು.
*ಬಿಸಿಯೂಟ ಯೋಜನೆಗೆ 8000 ಕೋಟಿ ರು ಮೀಸಲು.
*ಸರ್ವ ಶಿಕ್ಷಣ ಅಭಿಯಾನಕ್ಕೆ 13,100 ಕೋಟಿ ರು. ಮೀಸಲು.
*ಭಾರತ ನಿರ್ಮಾಣ ಯೋಜನೆಗೆ 31,281 ಕೋಟಿ ರು.
*34400 ಕೋಟಿ ರು ಶಿಕ್ಷಣ ಕ್ಷೇತ್ರಕ್ಕೆ ಮೀಸಲು.
*6 ಸಾವಿರ ಉನ್ನತ ದರ್ಜೆಯ ಶಾಲೆಗಳ ನಿರ್ಮಾಣ.
*ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ.
*ಉದ್ಯೋಗ ಖಾತ್ರಿ ಯೋಜನೆಗೆ 16,000 ಕೋಟಿ ರು ಅನುದಾನ.

(ದಟ್ಸ್‌ಕನ್ನಡ ವಾರ್ತೆ)

ಯುಪಿಎ ಸರ್ಕಾರದ ಐದು ಮತ್ತು ಕೊನೆಯ ಬಜೆಟ್
ಕೇಂದ್ರ ಬಜೆಟ್ 2008-09ನ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+