ಹುಬ್ಬಳ್ಳಿ ಕಲಬುರ್ಗಿ ಬೆಳಗಾವಿಗೂ ಒನ್ ಸೌಲಭ್ಯ

ಬೆಂಗಳೂರು, ಫೆ.25 :ನಾಗರೀಕರಿಗೆ ಸರ್ಕಾರದ ಸೇವೆಗಳು ಸುಲಭ ರೀತಿಯಲ್ಲಿ, ಪಾರದರ್ಶಕ ರೀತಿಯಲ್ಲಿ ಒದಗಿಸುವಲ್ಲಿ ಮಾಹಿತಿ ತಂತ್ರಜ್ಞಾನವು ತುಂಬ ಉಪಯುಕ್ತ. ಇದರ ಉಪಯುಕ್ತತೆಗೆ ಬೆಂಗಳೂರು-ಒನ್, ಭೂಮಿಯಂತಹ ಕಾರ್ಯಕ್ರಮಗಳೇ ಸಾಕ್ಷಿ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಹೇಳಿದ್ದಾರೆ.

ಅವರು ಇಂದು ಇ-ಆಡಳಿತ ಇಲಾಖೆಯು ಆರಂಭಿಸಿರುವ 20 ಹೊಸ ಬೆಂಗಳೂರು-ಒನ್, ಸಮಗ್ರ ಸೇವಾ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡುತ್ತ ಈ ರೀತಿ ಅಭಿಪ್ರಾಯಪಟ್ಟರು. ಒಟ್ಟು 39 ಸೇವಾ ಕೇಂದ್ರಗಳು ನಗರದ ಜನರಿಗೆ ವಿವಿಧ ಬಗೆಯ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಅತ್ಯಂತ ಕಡಿಮೆ ವೇಳೆಯಲ್ಲಿ ಒದಗಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು-ಒನ್ ಯೋಜನೆ ಅಂತರ ರಾಷ್ಟ್ರೀಯ ಗಮನ ಸೆಳೆದಿದ್ದು, ಇತ್ತೀಚೆಗೆ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಯೋಜನೆಯ ವಿವರಗಳನ್ನು ಅಭ್ಯಸಿಸಲು ಕರ್ನಾಟಕಕ್ಕೆ ಬಂದಿದ್ದನ್ನು ಅವರು ನೆನೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿಗಳಾದ ಪ್ರೊ|| ಬಿ.ಕೆ.ಚಂದ್ರಶೇಖರ್ ಅವರು ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯು ಯಾವುದೇ ಸದ್ದಿಲ್ಲದೆ ಕ್ರಾಂತಿಯನ್ನು ಮಾಡುತ್ತಿದೆಯೆಂದರು. ಈ ಬಗ್ಗೆ ಬಿ.ಎಸ್.ಎನ್.ಎಲ್.ನ ಸಹಕಾರ ಹಾಗೂ ದಕ್ಷ ಕೆಲಸದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಾರ್ವಜನಿಕರ ಸೇವೆಯಲ್ಲಿರುವ ಇಲಾಖೆಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕಾದರೆ ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆಯುವುದು ಬಹಳ ಮುಖ್ಯವೆಂದರು. ಮಾಹಿತಿ ತಂತ್ರಜ್ಞಾನ ಇಲಾಖೆಯು ಸಾಫ್ಟ್‌ವೇರ್ ಬೆಳವಣಿಗೆಗೆ ನೀಡುವಷ್ಟೇ ಪ್ರಾಶಸ್ತ್ಯವನ್ನು ಹಾರ್ಡ್‌ವೇರ್ ಬೆಳವಣಿಗೆಗೆ ಕೂಡ ನೀಡುವುದು ಅತಿ ಮುಖ್ಯವೆಂದ ಅವರು ಚೈನಾ ದೇಶ ಈ ವಿಚಾರದಲ್ಲಿ ಮಾದರಿಯಾಗಿದೆ ಎಂದು ತಿಳಿಸಿದರು.

ತಮ್ಮ ಸ್ವಾಗತ ಭಾಷಣದಲ್ಲಿ ಇ-ಆಡಳಿತ ಮಾಹಿತಿ, ಜೈವಿಕ /ತಂತ್ರಜ್ಞಾನ ಹಾಗೂ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್‌ರವರು ನಗರದಲ್ಲಿ ಈಗ ಒಟ್ಟು 39 ಬೆಂಗಳೂರು-ಒನ್ ಕೇಂದ್ರಗಳನ್ನು ಆರಂಭಿಸಿರುವುದರ ಜೊತೆಗೆ ಮಾರ್ಚ್ ಮೊದಲ ವಾರದಲ್ಲಿ ಹುಬ್ಬಳ್ಳಿ, ಧಾರವಾಡ-ಒನ್ ಕೇಂದ್ರವನ್ನು, ಡಿಸೆಂಬರ್ ಅಂತ್ಯದೊಳಗೆ ಗುಲ್ಬರ್ಗಾ-ಒನ್, ಬೆಳಗಾಂ-ಒನ್ ಕೇಂದ್ರಗಳನ್ನು ಕಾರ್ಯಾರಂಭಿಸಲಾಗುವುದೆಂದರು. ಈ ಕೇಂದ್ರಗಳಲ್ಲಿ ಕೆ.ಎಸ್.ಆರ್.ಟಿ.ಸಿ ಟಿಕೆಟ್ ನೀಡಿಕೆ, ಎಲ್.ಐ.ಸಿ ಯ ಸೇವೆಗಳನ್ನು ಸಹ ಒದಗಿಸಲಾಗುವುದೆಂದರು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರ ರಾವ್, ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

( ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+