• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಕೋಲೇಔಟ್ ನಲ್ಲಿ ಶಂಕಿತ ಉಗ್ರನ ಬಂಧನ

By Staff
|

Salauddin and other terroristsಬೆಂಗಳೂರು, ಫೆ 22: ನಗರದ ಮೈಕೋ ಲೇಔಟ್ ಬಳಿಯ ಗುರುಪ್ಪನಪಾಳ್ಯದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರನಿಷೇಧಿತ ಸಿಮಿ ಸಂಘಟನೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ಎಂದು ಸಿಓಡಿ ಪೊಲೀಸರು ಖಾತ್ರಿಪಡಿಸಿದ್ದಾರೆ. ಜಿಇ ಸಾಫ್ಟ್ ವೇರ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಮಹಮದ್ ವೈ.ಕಮ್ಮಕುಟ್ಟಿ ಅಲಿಯಾಸ್ ಯಾಹ್ಯಾ (31) ಅವರನ್ನು ಗುರುವಾರ ರಾತ್ರಿ ಸುಮಾರು 8:30 ಕ್ಕೆ ಬಂಧಿಸಲಾಗಿತ್ತು.

ಯಾಹ್ಯಾ ಒಂದೂವರೆ ವರ್ಷದಿಂದ ಗುರಪ್ಪನ ಪಾಳ್ಯದಲ್ಲಿ ವಾಸವಾಗಿದ್ದ. ಜಿಇ ಕಂಪೆನಿಯನ್ನು ಬಿಟ್ಟ ನಂತರ ಐಬಿಎಂ ಕಂಪೆನಿ ಸೇರಿ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ಇನ್ನೊಬ್ಬ ಬಂಧಿತನನ್ನು ಸಯ್ಯದ್ ಎಂದು ಗುರುತಿಸಲಾಗಿದ್ದು, ಆತ ವೆಲ್ಡಿಂಗ್ ಕೆಲಸಗಾರನಾಗಿದ್ದ ಎನ್ನಲಾಗಿದೆ. ಬಂಧಿತ ಯಾಹ್ಯಾನನ್ನು ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದರು.

ಸಲಾವುದ್ದೀನ್ ಬಾಯ್ಬಿಟ್ಟ ಸತ್ಯಗಳು:

ಇತ್ತೀಚೆಗೆ ಉತ್ತರಪ್ರದೇಶದ ರಾಂಪುರದಲ್ಲಿ ಬಂಧಿತನಾದ ಐಐಎಸ್ ಸಿ ದಾಳಿಯ ಪ್ರಮುಖ ರುವಾರಿ ಸಲಾವುದ್ದೀನ್ ನೀಡಿದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಎಟಿಸಿ ಮತ್ತು ಸಿಓಡಿ ಪೊಲೀಸ್ ತಂಡ ಕಮ್ಮಕುಟ್ಟಿಯ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಬಂಧಿತರಾಗಿರುವ ಆಸಿಫ್, ಮಹಮದ್ ಗೌಸ್ ಕೇವಲ ಪ್ರಾಂತ್ಯವಾರು ಚಟುವಟಿಕೆಯ ನಿಯಂತ್ರಕರಾಗಿದ್ದರು. ಆದರೆ ಕಮ್ಮ ಕುಟ್ಟೀ ಇಡೀ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಿಯಂತ್ರಿಸುತ್ತಿದ್ದ ಎನ್ನಲಾಗಿದೆ.

ಕಮ್ಮಕುಟ್ಟಿ ಹಾಗೂ ಲಂಡನ್ ಗ್ಲಾಸ್ಕೋ ವಿಮಾನನಿಲ್ದಾಣ ಸ್ಫೋಟಕ್ಕೆ ಯತ್ನಿಸಿದ್ದ ಕಫೀಲ್ ಇಬ್ಬರು ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಫೀಲ್ ಜತೆ ಕಮ್ಮಕುಟ್ಟಿ ನಿರಂತರ ಸಂಪರ್ಕದಲ್ಲಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಕಳೆದ ವರ್ಷ ಗೋವಾದಲ್ಲಿ ನಡೆದ ಉಗ್ರಗಾಮಿಗಳ ಸಭೆಯಲ್ಲಿ ಭಾಗವಹಿಸಿ, ರಾಜ್ಯದ ಪ್ರಮುಖ ಸ್ಥಳಗಳನ್ನು ನಾಶ ಮಾಡುವ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿದ್ದ ಎನ್ನಲಾಗಿದೆ. ಐಐಎಸ್ ಸಿ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಮ್ಮಕುಟ್ಟಿ, ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more