ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಬ್ಬ ವಿದ್ಯಾರ್ಥಿ ಉಗ್ರಗಾಮಿ ಹುಬ್ಬಳ್ಳಿಯಲ್ಲಿ ಬಂಧನ

By Staff
|
Google Oneindia Kannada News

ಹುಬ್ಬಳ್ಳಿ, ಫೆ.9: ಬಂಧಿತ ಉಗ್ರವಾದಿ ಮೊಹಮ್ಮದ್ ಆಸೀಫ್‌ಗೆ ನೆರವು ನೀಡಿದ್ದಾನೆಂಬ ಆರೋಪದ ಮೇಲೆ ಹುಬ್ಬಳ್ಳಿಯ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿ ಅಲ್ಲಾ ಭಕ್ಷ್ ಯರವಾಡನನ್ನ್ನು(24) ಪೊಲೀಸರು ಶುಕ್ರವಾರ ತಡ ರಾತ್ರಿ ಬಂಧಿಸಿದ್ದಾರೆ.

ಅಲ್ಲಾ ಭಕ್ಷ್ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮೂರನೆ ದರ್ಜೆ ರೈಲ್ವೆ ನೌಕರನೊಬ್ಬನ ಮಗ. ಈತ ಹುಬ್ಬಳ್ಳಿಯ ಕಿಮ್ಸ್ ಕಾಲೇಜಿನಿಂದ ಬಂಧನಕ್ಕೊಳಗಾಗುತ್ತಿರುವ ಎರಡನೆಯ ವಿದ್ಯಾರ್ಥಿ. ಬಂಧಿತ ಉಗ್ರವಾದಿ ಮೊಹಮ್ಮದ್ ಆಸೀಫ್‌ನ ಸಹಪಾಠಿಯಾಗಿದ್ದ ಈಗ ಪೊಲೀಸರ ಅಥಿತಿಯಾಗಿದ್ದಾನೆ. ಆತನ ಕೊಠಡಿಯಿಂದ ಧಾರ್ಮಿಕ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲಭಕ್ಷ್ ಮೂಲತಃ ರಾಯಚೂರಿನ ಹಟ್ಟಿಯವನು ಎಂದು ಪೊಲೀಸರು ತಿಳಿಸಿದ್ದಾರೆ.

ತಾನೂ ಹಾಗೂ ಆಸೀಪ್ ಒಳಗೊಂಡಂತೆ ಇಪ್ಪತ್ತು ಸದಸ್ಯರ ಗುಂಪು ಆಗಾಗ ಸಭೆ ಸೇರಿ ಚರ್ಚಿಸುತ್ತಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಅಲ್ಲಾಭಕ್ಷ್ ತಿಳಿಸಿದ್ದಾನೆ. ಇವರು ಸಿಮಿ ಸಂಘಟನೆಯನ್ನು ಬಲಪಡಿಸಲು ಉತ್ತರಪ್ರದೇಶ, ಕೇರಳ ಹಾಗೂ ಕರ್ನಾಟಕದ ವಿದ್ಯಾರ್ಥಿಗಳನ್ನು ಒಗ್ಗೂಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾನೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X