ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಕ್ಷ ಕ್ಕೆ ಪ್ರಕೃತಿ-ಪುರುಷ ಸಮಾಗಮವೇ ಉತ್ತರ

By Staff
|
Google Oneindia Kannada News

ಮೋಕ್ಷ ಕ್ಕೆ ಪ್ರಕೃತಿ-ಪುರುಷ ಸಮಾಗಮವೇ ಉತ್ತರಗಂವಾರ, ಜೇವರ್ಗಿ ಫೆ. 3: ಪುರುಷನಿಲ್ಲದೆ ಪಕೃತಿ ಇಲ್ಲ ಪ್ರಕೃತಿ ಇಲ್ಲದೆ ಪುರುಷನಿಲ್ಲ ಇವರೆಡರ ಸಮಾಗಮವೇ ಮೋಕ್ಷ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗಂವ್ಹಾರದಲ್ಲಿ ನಡೆಯುತ್ತಿರುವ ಶಿವ ಸತ್ರ ಕಾರ್ಯಕ್ರಮದಲ್ಲಿಶನಿವಾರ ಶಿವ ಕಥಾ ಕುರಿತು ಆಶೀವರ್ಚನ ನೀಡಿದ ಅವರು. ಪ್ರಕೃತಿ ಎಂದರೆ ಸ್ರ್ತೀ. ಅಂತಲೇ ಭರತ ಖಂಡದಲ್ಲಿ ಸ್ತ್ರೀಗೆ ತಾಯಿಯ ಸ್ಥಾನ ನೀಡುವ ಮೂಲಕ ಪೂಜ್ಯನೀಯ ಭಾವನೆಯಿಂದ ಕಾಣುತ್ತೇವೆ ಎಂದರು.

ಋಷಿ-ಮುನಿಗಳು ನೀಡುವ ಶಾಪ ಔಷಧಿ ಇದ್ದಂತೆ. ಔಷಧಿ ಸೇವಿಸುವಾಗ ಕಹಿಯಾಗಿ ಕಂಡರೂ ಅದು ದೇಹ ಪ್ರವೇಶಿಸಿದ ನಂತರ ಆರೋಗ್ಯವಂತನನ್ನಾಗಿ ಮಾಡುತ್ತದೆ ಹಾಗೇ ಋಷಿ- ಮುನಿಗಳ ಶಾಪ ಕಠೋರವಾಗಿ ಪರಿಣಮಿಸಿದರೂ ಅದು ಲೋಕ ಕಲ್ಯಾಣಾರ್ಥವಾಗಿರುತ್ತದೆ ಎಂದರು.

ಧಾರ್ಮಿಕತೆಯಲ್ಲಿನಂಬಿಕೆ ಕಳೆದುಕೊಳ್ಳುತ್ತಿರುವ ಇಂದಿನ ಆಧುನಿಕ ಯುಗದಲ್ಲಿಇಂಥ ಕಾರ್ಯಕ್ರಮ ಸೂಕ್ತ ಮಾರ್ಗದರ್ಶನ ನೀಡುವುದಲ್ಲದೆ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಲು ಸಹಕಾರಿಯಾಗಲಿದೆ. ಹಳ್ಳಿಗಳಿಂದ ಸಾವಿರ ಸಂಖ್ಯೆಯಲ್ಲಿ ಬರುತ್ತಿರುವ ಭಕ್ತ ಸಮೂಹ ಗ್ರಾಮೀಣ ಶೈಲಿಯಲ್ಲಿ ಶಿವ ಧ್ಯಾನದ ಸಂಕೇತವಾಗಿರುವ ಭಜನೆ ಇಡೀ ರಾತ್ರಿ ನಡೆಸುತ್ತಿರುವುದು ಹಾಗೂ ನಾಲ್ಕು ಜನ ಅಂಧರು ಪಾಳಿಯ ಪ್ರಕಾರ ಅಹೋರಾತ್ರಿ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸುತ್ತಿರುವುದು ವಿಶೇಷವಾಗಿದೆ.

ಲೋಕ ಕಲ್ಯಾಣಾರ್ಥವಾಗಿ ಆರಂಭಿಸಿರುವ ಮಹಾ ರುದ್ರಯಾಗದಲ್ಲಿ ಸುಮಾರು ಮೂರು ನೂರರಕ್ಕೂ ಹೆಚ್ಚು ಪಂಡಿತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸುಮಾರು 20,000 ಸಾವಿರ ಶಿವಭಕ್ತರು ಶಿವ ಸತ್ರದಲ್ಲಿ ಶನಿವಾರ ಭಕ್ತಿ ಪರವಶತೆಗೆ ಒಳಗಾಗಿದ್ದರು.

ವರದಿ: ರಾಘವೇಂದ್ರ ಶರ್ಮಾ

ಪೂರಕ ಓದಿಗೆ:
ಮುಸ್ಲಿಂ ಬಾಂಧವರ ಬಾಯಲ್ಲಿ ವಚನ ಸಾರಮೃತ
ಅನ್ನದಾಸೋಹಕ್ಕಿಂತ ಜ್ಞಾನ ದಾಸೋಹಕ್ಕೆ ಒತ್ತು
ಗಂವ್ಹಾರದಲ್ಲಿ ಈಶ್ವರ ಅಲ್ಲಾ ತೇರೆನಾಮ್ ಭಜನೆ
ಕಲಬುರ್ಗಿಯ ಗಂವ್ಹಾರದಲ್ಲಿ 'ಶಿವಸತ್ರ'ಕ್ಕೆ ಚಾಲನೆ
ಗಂವಾರದ ಶಿವಸತ್ರ ಸರ್ವಧರ್ಮ ಸಮನ್ವಯದ ಚಿತ್ರ ಸಂಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X