ಹೊಗೇನಕಲ್ ಜಲ ವಿದ್ಯುತ್ತಿಗೂ ತಮಿಳರ ತಗಾದೆ

ಹೊಗೇನಕಲ್ ಜಲ ವಿದ್ಯುತ್ತಿಗೂ ತಮಿಳರ ತಗಾದೆಬೆಂಗಳೂರು, ಜ.27: ಕಾವೇರಿ ನದಿ ಹಂಚಿಕೆ ವಿವಾದವನ್ನು ತೆಗೆದು ಕೆಣಕುತ್ತಿದ್ದ ತಮಿಳರ ಕಣ್ಣು ಈಗ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಹೊಗೇನಕಲ್ ಜಲ ವಿದ್ಯುತ್ ಉತ್ಪಾದನೆ ಮೇಲೆ ಬಿದ್ದಿದ್ದೆ.

ತಮಿಳುನಾಡಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಜಲವಿದ್ಯುತ್ ಯೋಜನೆ ವಿಳಂಬಕ್ಕೆ ಕರ್ನಾಟಕವೇ ಕಾರಣ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಜಲವಿದ್ಯುತ್ ಯೋಜನೆಯ ಉತ್ಪಾದನೆಯ ಪೂರ್ಣ ಲಾಭವನ್ನು ಕರ್ನಾಟಕ ಪಡೆಯಲು ಹವಣಿಸುತ್ತಿದೆ ಎಂದು ತಮಿಳುನಾಡಿನ ವಿದ್ಯುತ್ ಖಾತೆ ಸಚಿವ ಅರ್ಕಾಟ್ ಎನ್. ವೀರಾಸ್ವಾಮಿ ಅಲ್ಲಿನ ವಿಧಾನಸಭೆಯಲ್ಲಿ ಆರೋಪ ಮಾಡಿದ್ದಾರೆ.

120 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯವಿರುವ ಹೊಗೇನಕಲ್ ಹಾಗೂ 270 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯವಿರುವ ಶಿವನಸಮುದ್ರ ಯೋಜನೆಯಿಂದ ಬರುವ ಉತ್ಪನ್ನವನ್ನು ಪೂರ್ಣವಾಗಿ ತನಗೇ ನೀಡಬೇಕೆಂದು ಕರ್ನಾಟಕ ಬೇಡಿಕೆ ಇಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆಗಿನ ಮಾತುಕತೆ ವಿಫಲವಾಗಿದೆ. ಮುಂದಿನ ತಿಂಗಳು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಮಸ್ಯೆಗೆ ಪರಿಹಾರಸಿಗುವ ಸಾಧ್ಯತೆಯಿದೆ . ಕಾವೇರಿ ನದಿಯಿಂದ 1150 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯತೆಯಿದೆ. ಇದರ ಪ್ರಯೋಜನವನ್ನು ಉಭಯ ರಾಜ್ಯಗಳು ಸಮನಾಗಿ ಹಂಚಿಕೊಳ್ಳಕೊಂಡರೆ ಉತ್ತಮ ಎಂದು ವೀರಾಸ್ವಾಮಿ ಹೇಳಿದರು.

ಹೊಗೇನಕಲ್ ಜಲ ವಿದ್ಯುತ್ ಯೋಜನೆಯ ನಕ್ಷೆ ತಯಾರಾದದ್ದು 1965 ರಲ್ಲಿ. ಆದರೆ ಉಭಯ ರಾಜ್ಯಗಳಲ್ಲಿ ಒಮ್ಮತ ಮೂಡದ ಕಾರಣ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ ಎಂದು ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಹೇಳಿದೆ. 1998 ರಿಂದ ಈಚೆಗೆ ಮೂರ್ನಾಲ್ಕು ಬಾರಿ ಉಭಯ ರಾಜ್ಯಗಳು ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

(ದಟ್ಸ್ ಕನ್ನಡವಾರ್ತೆ )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+