ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಬ್ಬ ಮುನ್ನಾಭಾಯ್ ಎಂಬಿಬಿಎಸ್

By Staff
|
Google Oneindia Kannada News

ಬೆಂಗಳೂರು, ಜ.29: ಓದಿದ್ದು ನಾಲ್ಕನೆ ತರಗತಿ. ಎಲ್ಲರಿಗೂ ಹೇಳಿ ನಂಬಿಸಿದ್ದು ಮಾತ್ರ ತಾನೊಬ್ಬ ಪ್ರಸಿದ್ಧ ವೈದ್ಯನೆಂದು. ಮಂಗಳವಾರ ಈ ನಕಲಿ ವೈದ್ಯ ಚಿಕ್ಕಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಗರದ ವೈಟ್‍ಫೀಲ್ಡ್ ರಸ್ತೆಯಲ್ಲಿ ವಾಸವಾಗಿದ್ದ ಈತ ಐದು ವರ್ಷದ ವೈದ್ಯಕೀಯ ಪದವಿ ಪಡೆದವನಂತೆ ಡಾ.ಸಲೀಂ ಅಂತ ಹೆಸರಿಟ್ಟುಕೊಂಡಿದ್ದ. ಈತ ರೋಗಿಗಳನ್ನು ಪರೀಕ್ಷೆ ಮಾಡುವ ನೆಪದಲ್ಲಿ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಲಪಟಾಯಿಸುತ್ತಿದ್ದ.

ಈತನ ಈ ಕೃತ್ಯಕ್ಕೆ 'ಬಾಪ್ ಏಕ್ ನಂಬರಿ ಬೇಟಾ ದಸ್ ನಂಬರಿ' ಎಂಬ ಹಿಂದಿ ಚಲನಚಿತ್ರವೇ ಪ್ರೇರಣೆಯಂತೆ. ಈ ನಕಲಿ ವೈದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಎಕ್ಸ್‌ರೇ, ಸ್ಕ್ಯಾನಿಂಗ್, ಲ್ಯಾಬ್ ಪರೀಕ್ಷೆ ಮಾಡಿಕೊಡುವ ನೆಪದಲ್ಲಿ ರೋಗಿಗಳ ಮೈಮೇಲಿನ ಒಡವೆಗಳನ್ನು ಬಿಚ್ಚಿಸಿಕೊಂಡು ವಂಚಿಸುತ್ತಿದ್ದ. ಇದೇ ರೀತಿಯ ವಂಚನೆಗೆ ಸಂಬಂಧಿಸಿದಂತೆ ಈ ಹಿಂದೆ ಜೈಲು ಶಿಕ್ಷೆಯನ್ನೂ ಅನುಭವಿಸಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಕಣ್ವ, ಕಿದ್ವಾಯಿ, ಸೇಂಟ್ ಜಾನ್, ಬೆಂಗಳೂರು ಆಸ್ಪತ್ರೆ, ಸಾಗರ್ ಅಪೊಲೋ, ಸೇಂಟ್ ಫಿಲೋಮಿನಾ, ಕಿಮ್ಸ್, ಸೇಂಟ್ ಮಾರ್ಥಾಸ್‌ ಆಸ್ಪತ್ರೆಗಳಲ್ಲಿ ರೋಗಿಗಳನ್ನು ವಂಚಿಸಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಪೊಲೀಸರು 6ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಈ ನಕಲಿ ವೈದ್ಯನಿಂದ ವಶಪಡಿಸಿಕೊಂಡಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X