• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳ್ಳಿ ಹಕ್ಕಿಯ ಹಾಡು ಮತ್ತು ಬೆಳ್ಳಿ ಹಕ್ಕಿಯ ಪಾಡು

By ಶಾಮ್
|

B. Sarojadevi with S.M. Krishna (A file photo)ಬೆಂಗಳೂರು, ಜ. 29 : ಕಣ್ತೆರೆಯುವ ಮುನ್ನವೆ ಸುದ್ದಿಗೆ ಗ್ರಾಸವಾಗಿದ್ದ, ಬಿಡುಗಡೆಗೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿದ್ದ ರಾಜಕಾರಣಿ ಎಚ್.ವಿಶ್ವನಾಥ್ ಅವರ ಆತ್ಮಕಥನ "ಹಳ್ಳಿ ಹಕ್ಕಿಯ ಹಾಡು" ಕೃತಿ ಇಂದು ಬೆಳಗ್ಗೆ ಇಲ್ಲಿ ಸುರಕ್ಷಿತವಾಗಿ ಬಿಡುಗಡೆ ಆಯಿತು. ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಕಾಶಕರು ಸುದ್ದಿಗೋಷ್ಠಿಯ ಮೊರೆಹೊಕ್ಕಿದ್ದರಿಂದಾಗಿ ಸಮಾರಂಭಕ್ಕೆ ಮೈಸೂರಿನಲ್ಲಿ ಯಾರೂ ಯಾವ ಅಡ್ಡಿ ಆತಂಕಗಳನ್ನೂ ಒಡ್ಡಲಾಗಲಿಲ್ಲ.

ಸೋಮವಾರ ಸಂಜೆ ಮೈಸೂರಿನ ಹುಣಸೂರು ರಸ್ತೆಯಲ್ಲಿ ನಡೆಯಬೇಕಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭ ಪ್ರತಿಭಟನಕಾರರ ಪ್ರತಿರೋಧದಿಂದಾಗಿ ರದ್ದಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಯು.ಆರ್. ಅನಂತಮೂರ್ತಿ, ವಿಶ್ವೇಶ್ವರ ಭಟ್, ಮತ್ತು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅನ್ಯ ಮಾರ್ಗವಿಲ್ಲದೆ ಸಮಾರಂಭದ ತಾಣದಿಂದ ನಿರ್ಗಮಿಸಿದ್ದರು.

ಆದರೆ, ಬಿಡುಗಡೆ ಮಾಡುವುದಾಗಿ ಪಟ್ಟುಹಿಡಿದಿದ್ದ ಪ್ರಕಾಶಕರು ಪತ್ರಿಕಾಗೋಷ್ಠಿ ಕರೆದಿದ್ದರು. ಸುದ್ದಿಗೆ ಸುದ್ದಿಯೂ ಆಯಿತು, ಪತ್ರಕರ್ತ ಸಮೂಹಕ್ಕೆ ಸಮಜಾಯಿಷಿಗಳನ್ನು ಕೊಡುವುದಕ್ಕೂ ವೇದಿಕೆಯಾಯಿತು ಹಾಗೂ ಕೃತಿ ಅಧಿಕೃತವಾಗಿ ಲೋಕಾರ್ಪಣೆಯೂ ಆಯಿತು. ವಿಚಾರವಾದಿ ಗೋವಿಂದಯ್ಯ ಅವರು ಪುಸ್ತಕ ಬಿಡುಗಡೆಯನ್ನು ಕಿಕ್ಕಿರಿದು ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ನಿರಾತಂಕವಾಗಿ ನೆರವೇರಿಸಿದರು. ಈ ಪುಸ್ತಕ ಪ್ರಸವ ಸಿಝೇರಿಯನ್ ಹೆರಿಗೆಯಂತಾಯಿತು ಎಂದು ಮೈಸೂರಿನ ಸಾರಸ್ವತಲೋಕದ ಮಂದಿ ಬಣ್ಣಿಸಿದರು.

ಎಸ್.ಎಂ. ಕೃಷ್ಣ ಮತ್ತು ಬಿ. ಸರೋಜಾದೇವಿಯವರ ನಡುವೆ ಒಂದುಬಗೆಯ ಅಮೂರ್ತವಾದ ಅನುರಾಗ ಸೆಳೆತವಿತ್ತು ಎಂದು ನಿರೂಪಿಸುವಂತಹ ಕೆಲವು ಸಾಲುಗಳು ಪುಸ್ತಕದಲ್ಲಿವೆ. ತಮ್ಮ ಖಾಸಾ ಅನುಭವಕ್ಕೆ ದತ್ತವಾದ ಸತ್ಯಾಂಶಗಳನ್ನು ದಾಖಲಿಸಿದ್ದೇನೆ ವಿನಾ ಯಾರೊಬ್ಬರ ತೇಜೋವಧೆ ಮಾಡುವ ಉದ್ದೇಶ ಖಂಡಿತ ಇಲ್ಲ ಎಂದು ಲೇಖಕ ವಿಶ್ವನಾಥ್ ಸ್ಪಷ್ಟನೆ ನೀಡಿದ್ದರು.

ಸರೋಜ ಮತ್ತು ಕೃಷ್ಣ ಅವರನ್ನು ಕೊಟ್ಟುತಂದು ಮಾಡಿಕೊಳ್ಳುವ ಬಗ್ಗೆ ಮಂಡ್ಯ ಸೀಮೆಯ ಎರಡೂ ಮನೆತನಗಳ ನಡುವೆ ಪ್ರಸ್ತಾವನೆ ಇದ್ದದ್ದು ನಿಜ. ಆದರೆ, ಆ ದಿನಗಳು ದೂರವಾಗಿ ಐವತ್ತು ಸಂವತ್ಸರಗಳೇ ಸಂದಿವೆ ಎಂದು ಕೃಷ್ಣ ಮನೆಯ ಮೂಲಗಳು ಮಾರುತ್ತರ ಕೊಟ್ಟವು. ಕೃಷ್ಣ ಅವರ ಧರ್ಮಪತ್ನಿ ಪ್ರೇಮಾ ಕೃಷ್ಣ ಅವರೇ ಈ ಸಂಗತಿಯ ಬಗೆಗೆ ಮಾತನಾಡಿ "ಇದು ಎಂದೋ ಆಗಿಹೋದ ವಿಷಯ" ಎಂದು ಪ್ರತಿಕ್ರಯಿಸಿದ್ದರು.

ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯನ್ನು ನಿರ್ವಹಿಸುತ್ತಿರುವ ಕೃಷ್ಣ ಅವರ ಕಡೆಯಿಂದ ಈ ಪ್ರಸಂಗದ ಬಗೆಗೆ ಏನೊಂದು ಪ್ರತಿಕ್ರಿಯೆ ಬಂದಿರುವುದಿಲ್ಲ. ಆದರೆ, ಬೆಂಗಳೂರಿನಲ್ಲಿರುವ ಬಿ. ಸರೋಜಾದೇವಿಯವರಿಗೆ ಈ ಘಟನೆಯಿಂದ ತೀವ್ರ ಬೇಸರವಾಗಿರುವುದಂತೂ ನಿಜ. ಸರೋಜಾದೇವಿಯವರಿಗೆ ಪುಸ್ತಕದಲ್ಲಿ ಅಚ್ಚಾಗಿರುವ ಸಂಗತಿಗಳಿಗಿಂತ ಹೆಚ್ಚಾಗಿ, ಘಟನೆಗೆ ಸಂಬಂಧಿಸಿದಂತೆ ಕೆಲವರು ನೀಡಿರುವ ಹೇಳಿಕೆಗಳನ್ನು ಓದಿಯೇ ಖಿನ್ನರಾಗಿದ್ದಾರೆ. ಕನ್ನಡದ ಪ್ರಸಿದ್ಧ ಬರಹಗಾರರೊಬ್ಬರ ಬಳಿ ಈ ವಿದ್ಯಮಾನಗಳ ಬಗೆಗೆ ಖಾಸಗಿಯಾಗಿ ಮಾತನಾಡಿರುವ ಅವರು ಮನದಾಳದ ನೋವುಗಳನ್ನು ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಸುರಸುಂದರಿಯರಲ್ಲಿ ಮತ್ತು ಪ್ರಖ್ಯಾತಿಯನ್ನು ಪಡೆದ ಅಭಿನೇತ್ರಿಯರಲ್ಲಿ ಒಬ್ಬರಾದ ಸರೋಜಾದೇವಿ ತಮ್ಮ ಪತಿ ಹರ್ಷ ಅವರನ್ನು ಕಳೆದುಕೊಂಡು 21 ವರ್ಷಗಳೇ ಕಳೆದಿವೆ. ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದೊಂದೆ ಅವರಿಗೆ ಮುಖ್ಯವಾಗಿ ಇತರೆಲ್ಲ ಕ್ಷೇತ್ರಗಳಿಂದ ಅವರು ದೂರವೆ ಉಳಿದಿದ್ದಾರೆ. ಹಾಗೆ ನೋಡಿದರೆ ತಮಿಳು ಚಿತ್ರರಂಗದಲ್ಲಿ ಮೆರೆದ ಕನ್ನಡ ನಟಿಯರಲ್ಲಿ ಈಕೆಯೂ ಒಬ್ಬರು. ಮನಸ್ಸು ಮಾಡಿದ್ದರೆ ಜಯಲಲಿತಾ ಅವರಂತೆ ಸರೋಜಾದೇವಿಯವರೂ ಕೂಡ ಅನೇಕ ಪ್ರಯೋಗಗಳನ್ನು ಮಾಡಬಹುದಾಗಿತ್ತು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವುದುಂಟು.

ಅಂದಹಾಗೆ, ಅಪ್ಪಟ ಕನ್ನಡ ಸಂಸ್ಕೃತಿಯ ರಾಯಭಾರಿಯಂತಿರುವ ದೇವಿಯವರಿಗೆ ಕನ್ನಡ ಸಾಹಿತ್ಯ ಮತ್ತು ಅಕ್ಷರ ಸಂಪತ್ತಿನ ಬಗೆಗೆ ವಿಶೇಷ ಪ್ರೀತಿಯಿದೆ. ತಮ್ಮ ತಾಯಿಯ ಹೆಸರಲ್ಲಿ ಅವರು ಒಂದು ಸಾಹಿತ್ಯಿಕ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿರ್ವಹಣೆಯಾಗುವ ಈ ಪ್ರಶಸ್ತಿ ವಿತರಣೆ ಸಮಾರಂಭ ಇಂದು ಸಂಜೆ ಕನ್ನಡ ಸಾಹಿತ್ ಪರಿಷನ್ಮಂದಿರದಲ್ಲಿ ನಡೆಯಲಿದೆ. ಪ್ರಶಸ್ತಿಯನ್ನು ಸರೋಜಾದೇವಿಯವರು ಪ್ರದಾನ ಮಾಡಲಿದ್ದಾರೆ. ಸಮಯ ಮಂಗಳವಾರ ಸಂಜೆ 4.30.

ಪೂರಕ ಓದಿಗೆ

ಕೃಷ್ಣ ಸರೋಜಾದೇವಿ ಪ್ರಣಯಪ್ರಸಂಗದ 'ವಿಶ್ವ'ರೂಪ

ವಿಶ್ವನಾಥ್ ಮಾನಸಿಕ ರೋಗಿ : ಡಿಕೆಶಿ ವ್ಯಂಗ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more