ಶ್ರೀಲಂಕಾದಲ್ಲಿ ರಾಮಾಯಣದ ತಾಣಗಳು ಪತ್ತೆ

ಶ್ರೀಲಂಕಾದಲ್ಲಿ ರಾಮಾಯಣದ ತಾಣಗಳು ಪತ್ತೆಶ್ರೀಲಂಕಾ, ಜ.24: ಶ್ರೀಮದ್ರಾಮಾಯಣ ಒಂದು ಕಾಲ್ಪನಿಕ ಕಥೆಯಲ್ಲ. ಅದೊಂದು ಐತಿಹಾಸಿಕ ಸತ್ಯ ಎಂದು ಸಾರುವ ಕುರುಹುಗಳು, ಸಾಕ್ಷಿಗಳು ಶ್ರೀಲಂಕಾದಲ್ಲಿ ಪತ್ತೆಯಾಗಿವೆ. ಸೀತಾಪಹರಣ, ರಾವಣನ ಆಸ್ಥಾನ, ಪುಷ್ಪಕ ವಿಮಾನದ ಹೆಲಿಪ್ಯಾಡ್ ಮುಂತಾದವುಗಳಿಗೆ ಸಾಕ್ಷಿಯಾಗಿ ನಿಲ್ಲುವ ಪುರಾವೆಗಳು ಸಿಕ್ಕಿವೆ ಎಂದು ಗುರುವಾರ ಶ್ರೀಲಂಕಾ ಸರಕಾರ ಘೋಷಿಸಿದೆ.

ಶ್ರೀಲಂಕಾದ 50ಕ್ಕೂ ಅಧಿಕ ತಾಣಗಳಲ್ಲಿ ರಾಮಾಯಣದ ಐತಿಹ್ಯಗಳಿವೆ ಎಂದು ಶ್ರೀಲಂಕ ಸರ್ಕಾರ ಪ್ರಕಟಿಸಿದ್ದು, ರಾವಣನು ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕದ್ದೊಯ್ದಿದ್ದು ಗೊತ್ತು, ಪುಷ್ಪಕ ವಿಮಾನವನ್ನು ನಿಲ್ಲಿಸುತ್ತಿದ್ದ ತಾಣಗೊತ್ತು, ಹನುಮಂತನ ಹೆಜ್ಜೆ ಗುರುತುಗಳು ಇತ್ತು, ಲಂಕಾ ದಹನದಲ್ಲಿ ಸುಟ್ಟು ಕರಕಲಾದ ಮಣ್ಣು, ಹನುಮಂತ ಲಂಕಾ ಪ್ರವೇಶ ಮಾಡಿದ್ದು, ರಾಮ ರಾವಣರು ಕಾದಾಡಿದ ಯುದ್ಧಭೂಮಿ, ಸೀತೆಯನ್ನು ರಾವಣ ಅಪಹರಿಸಿ ಅಡಗಿಸಿಟ್ಟಿದ್ದ ತೋಪು ಎಲ್ಲಕ್ಕೂ ಪುರಾವೆಗಳಿವೆ ಎಂದು ಸರಕಾರ ಹೇಳಿದೆ.

ಪ್ರಕಟಣೆಯ ಮುಖ್ಯಾಂಶಗಳು :

  • ಪುಷ್ಪಕ ವಿಮಾನ ನಿಲ್ದಾಣ ಪತ್ತೆ
  • ರಾಮ, ಸೀತೆ, ರಾವಣರ ಕುರುಹುಗಳು ಪತ್ತೆ
  • ಲಂಕಾದಹನದ ಕರಕಲಾದ ಮಣ್ಣು ಗೋಚರ
  • ಆಂಜನೇಯ ಲಂಕಾ ಪ್ರವೇಶ ಮಾಡಿದ್ದ
  • ರಾವಣನಿಗೂ ಗುಡಿ ಕಟ್ಟಿಸಲಾಗಿದೆ
  • ರಾಮಾಯಣ ಸಿಂಹಳೀಯರಿಗೂ ಪವಿತ್ರ
  • ರಾಮಾಯಣ ಪಾತ್ರಗಳನ್ನು ಪುಷ್ಟೀಕರಿಸುವ ಇನ್ನಷ್ಟು ಪಾತ್ರಗಳು ಲಭ್ಯ
  • ರಾಮಾಯಣದ ಪ್ರಸಂಗಗಳಿಗೆ ಹೋಲಿಕೆ
  • ರಾಮಾಯಣದ ರಣರಂಗ ಈಗ ಬಟಾಬಯಲು
  • ಸೀತೆಯನ್ನು ಇರಿಸಿದ್ದ ಸ್ಥಳಗಳು ಗೋಚರ
  • ರಾಮ-ರಾವಣರ ಯುದ್ಧದ ಸ್ಥಳ ಪತ್ತೆ
  • ಸೀತೈಲಿಯಾ, ರಾಮಭೋದ ಮಹತ್ವದ ತಾಣಗಳು
  • ರಾವಣನ ಅರಮನೆ ನೀರಿನಲ್ಲಿ ಮುಳುಗಿದೆ
  • ಹನುಮಂತನ ಹೆಜ್ಜೆಗುರುತುಗಳು ಅಲ್ಲಿವೆ
  • ತಾಣಗಳ ಭೇಟಿಗೆ ಶ್ರೀಲಂಕಾ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ

(ಏಜನ್ಸೀಸ್)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+