ಚಿನ್ನ, ವಜ್ರಗಳ ಗಣಿಗಾರಿಕೆಗೆ ಹೊಸ ಸೂತ್ರ: ಕೇಂದ್ರ ಸಚಿವ
ಕೋಲ್ಕತ್ತಾ, ಜ.20: ಚಿನ್ನ ಹಾಗೂ ವಜ್ರ ಮುಂತಾದ ಬೆಲೆ ಬಾಳುವ ಲೋಹಗಳ ಗಣಿಗಾರಿಕೆಗೆ ಹೊಸ ನಿಯಮಾವಳಿಗಳನ್ನು ರಚಿಸಲಾಗುವುದು ಎಂದು ಏಷ್ಯಾ ಮಟ್ಟದ ಗಣಿ ಕಾಂಗ್ರೆಸ್ ಸಮಾವೇಶದಲ್ಲಿ ಕೇಂದ್ರ ಗಣಿಖಾತೆಯ ರಾಜ್ಯ ಸಚಿವ ಟಿ ಎಸ್ ರೆಡ್ಡಿ ಹೇಳಿದರು.
ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಸುಮಾರು 15,000 ಟನ್ ಗಳಷ್ಟು ಚಿನ್ನದ ಅದಿರನ ನಿಕ್ಷೇಪ ಇರುವಿಕೆಯ ಬಗ್ಗೆ ಪತ್ತೆಯಾಗಿದೆ. ಆಂಧ್ರಪ್ರದೇಶ,ಛತ್ತಿಸ್ ಗಢ, ಮಧ್ಯಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿವೆ. ಇವುಗಳನ್ನು ಸಂರಕ್ಷಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಉನ್ನತ ತಂತ್ರಜ್ಞಾನ ಬಳಸಿ, ಹೊಸ ನಿಕ್ಷೇಪಗಳ ಸಂಶೋಧನೆಗೆ ವಿದೇಶಿ ಕಂಪೆನಿಗಳಿಗೆ ಆಹ್ವಾನ ನೀಡಲಾಗುವುದು. ಭಾರತೀಯ ಸರ್ವೇಕ್ಷಣ ವಿಭಾಗ(Geological Survey of India ) ಕೂಡ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತದೆ ಎಂದು ಸಚಿವರು ನುಡಿದರು.
ಮುಂದಿನ ಐದು ವರ್ಷಗಳಲ್ಲಿ ಸುಮಾರು10,000 ರು ವೆಚ್ಚದ ಚಿನ್ನ ಹಾಗೂ ವಜ್ರ ಉತ್ಪಾದನೆಯ ನಿರೀಕ್ಷೆಯಿದೆ. ಇವುಗಳ ಜತೆಗೆ ಕಲ್ಲಿದ್ದಿಲಿನ ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಅದರ ಬಗ್ಗೆ ಕೂಡ ಗಮನ ಹರಿಸಲಾಗುವುದು ಎಂದು ಸಚಿವ ರೆಡ್ಡಿ ಹೇಳಿದರು.
(ಏಜನ್ಸೀಸ್)


Click it and Unblock the Notifications
