ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ಆದೇಶಕ್ಕೆ ಲಾರಿ ಮಾಲೀಕರ ವಿರೋಧ

By Staff
|
Google Oneindia Kannada News

ಬೆಂಗಳೂರು, ಜ.20: ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕುರಿತಾದ ಕರ್ನಾಟಕ ರಾಜ್ಯದ ರಾಜ್ಯಪಾಲರು ನೀಡಿರುವ ಆದೇಶವನ್ನು ಕರ್ನಾಟಕದ ಹಾಗೂ ತಮಿಳುನಾಡಿನ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧವಾಗಿ ನಾಳೆಯಿಂದ ಲಾರಿ, ಖಾಸಗಿ ಬಸ್ಸು ಹಾಗೂ ಮ್ಯಾಕ್ಸಿ ಕ್ಯಾಬ್ ಓಡಾಟ ಸ್ಥಗಿತಗೊಳ್ಳಲಿದೆ. ಇದರಿಂದ ರಾಜ್ಯದಲ್ಲಿ ಸರಕು ಸಾಗಣೆ , ಪೆಟ್ರೋಲಿಯಂ ಉತ್ಪನ್ನ ಸಾಗಣೆ ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಲಿದೆ. ಆದರೆ ಹಾಲು, ತರಕಾರಿ, ಔಷಧಿ, ಅಂಬುಲೆನ್ಸ್ ದಿನಪತ್ರಿಕೆ ಸಾಗಣೆಗೆ ಅಡ್ಡಿ ಇರುವುದಿಲ್ಲ.

ವೇಗ ನಿಯಂತ್ರಕ ಪರಿಣಾಮವನ್ನು ಪರಿಶೀಲಿಸದೆ ಸರ್ಕಾರ ತನ್ನ ನಿರ್ಧಾರವನ್ನು ಕೈಗೊಂಡಿದೆ. ಇದರಿಂದಾಗಿ ಸುಮಾರು 16,400 ಲಾರಿಗಳು ನೋಂದಾಣಿ ಹಾಗೂ ಸಾಮರ್ಥ್ಯ ಪ್ರಮಾಣ ಪತ್ರ(ಎಫ್ ಸಿ) ಸಿಗದೇ ನಿಂತಿವೆ. ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದರು.

ತಮಿಳರ ಬೆಂಬಲ:

ಬೆಂಗಳೂರಿನ ಕಡೆ ಲಾರಿ ಸಂಚಾರವನ್ನು ಅನಿರ್ಧಿಷ್ಟ ಕಾಲ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಲಾರಿ ಮಾಲೀಕರಲ್ಲಿ ಐಕ್ಯಮತ ಮೂಡುವವರೆಗೂ ಸಂಚಾರ ನಿಷೇಧ ಮುಂದುವರೆಯಲಿದೆ ಎಂದು ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪಿ.ಸೆಂಗೋತನ್ ಹೇಳಿದ್ದಾರೆ.

ತಮಿಳುನಾಡಿನ ಲಾರಿ ಗಣತಿಯಂತೆ 1.75 ಲಕ್ಷ ಲಾರಿಗಳಿದ್ದು, ಅದರಲ್ಲಿ 5ಸಾವಿರಕ್ಕೂ ಅಧಿಕ ಲಾರಿಗಳು ಕೃಷ್ಣಗಿರಿ ಮೂಲಕ ಬೆಂಗಳೂರು ನಗರದ ಪ್ರವೇಶ ಮಾಡುತ್ತವೆ. ಲಾರಿಗಳಿಗೆ ವೇಗ ನಿಯಂತ್ರಣ ಅಳವಡಿಕೆ ಬಗ್ಗೆ ತಮಿಳುನಾಡಿನ ಲಾರಿ ಮಾಲೀಕರಲ್ಲೂ ಗೊಂದಲವಿದ್ದು, ಹಲವರು ಕರ್ನಾಟಕದ ಲಾರಿ ಮಾಲೀಕರಿಗೆ ಬೆಂಬಲ ಸೂಚಿಸಿದ್ದಾರೆ.
(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X