ಬುಡಕಟ್ಟು ಜನಾಂಗದ ಬಗ್ಗೆ ಅನಂತಮೂರ್ತಿ ಆತಂಕ

ಮೈಸೂರು, ಜ.19: ಅರಣ್ಯಗಳು ನಕ್ಸಲರ ಕುಟಿಲ ತಾಣಗಳಾಗಲು ಬುಡಕಟ್ಟು ಜನಾಂಗದವರನ್ನು ಅಲ್ಲಿಂದ ಎತ್ತಂಗಡಿ ಮಾಡುತ್ತಿರುವುದೇ ಕಾರಣ ಎಂದು ಸಾಹಿತಿ ಯು.ಆರ್.ಅನಂತಮೂರ್ತಿ ಶುಕ್ರವಾರ ಬುಡಕಟ್ಟು ಜನಾಂಗದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಬುಡಕಟ್ಟು ಜನಾಂಗದ ಜೀವನೋತ್ಸಾಹದ ತಾಣಗಳಾಗಿದ್ದ ಅರಣ್ಯಗಳು ಇಂದು ನಕ್ಸಲರ ತಾಣಗಳಾಗುತ್ತಿವೆ. ಅಭಿವೃದ್ಧಿ ಹೆಸರಲ್ಲಿ ಸ್ವತಂತ್ರವಾಗಿದ್ದ ಈ ಜನಾಂಗದವರನ್ನು ಅತಂತ್ರರಾಗಿಸುತ್ತಿದ್ದೇವೆ. ಅವರ ಕಲೆಯನ್ನು ಮಾರುಕಟ್ಟೆಗೆ ತಂದು ಪ್ರದರ್ಶನದ ವಸ್ತುವಾಗಿಸುತ್ತಿದ್ದೇವೆ. ಬುಡಕಟ್ಟು ಜನಾಂಗದ ಸಂಸ್ಕೃತಿ ಉಳಿಸಲು ಪ್ರಯತ್ನಿಸಬೇಕು ಎಂದು 'ಬಹುರೂಪಿ' ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಹೀಗೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಮಾತನಾಡಿ, ಬುಡಕಟ್ಟು ಜನರ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿರುವ ಕೆಲಸ ನಡೆಯುತ್ತಿರುವುದು ನಿಜ ಎಂದರು. ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ನಿರ್ದೇಶಕ ಚಿದಂಬರರಾವ್ ಜಂಬೆ ಸ್ವಾಗತಿಸಿದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+