• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುತ್ತಿಗೆ ಶ್ರೀಗಳ ಸುಪರ್ದಿಗೆ ಅಕ್ಷಯಪಾತ್ರೆ,ಸಟ್ಟುಗ

By Staff
|

Sugunendra Teertha takes charge of Udupi mathಉಡುಪಿ, ಜ,18 : ಸಾಗರೋಲ್ಲಂಘನ ಮಾಡಿದ ಯತಿಗಳು ಪರ್ಯಾಯ ಪೀಠಾರೋಹಣ ಮಾಡಬಾರದೆಂಬ ಸಪ್ತಮಠ ಸಪ್ತಸ್ವರದ ವಿರುದ್ಧ ಮುಖಮಾಡಿನಿಂತ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಬೆಳಿಗ್ಗೆ ಸಾವಿರಾರು ಭಕ್ತಗಣದ ಸಮ್ಮುಖದಲ್ಲಿ ವಿಜೃಂಭಣೆಯಿಂದ ಪರ್ಯಾಯ ಪೀಠವೇರಿದ್ದಾರೆ. ಸುಗುಣೇಂದ್ರ ತೀರ್ಥರ ಹಠವೇ ಅಂತಿಮವಾಗಿ ಪರ್ಯಾಯ ಪೀಠಾವೇರಿದಂತಾಗಿದೆ.

ಪೇಜಾವರ ಮಠಾಧೀಶ್ವರ ವಿಶ್ವೇಶ ತೀರ್ಥ ಸ್ವಾಮೀಜಿಯ ಏಕಾಂಗಿ ಹೋರಾಟ, ಅನ್ನಾಹಾರ ತ್ಯಜಿಸಿ ಮಾಡಿದ ಉಪವಾಸ ಸತ್ಯಾಗ್ರಹ, ಭಕ್ತಗಣದ ಒತ್ತಾಯ, ಉತ್ತರಾಧಿಮಠದ ಸ್ವಾಮೀಜಿ ಮತ್ತು ಮಂತ್ರಾಲಯ ಮಠಾಧಿಕಾರಿಗಳ ಮಧ್ಯಸ್ಥಿಕೆ, ಹಾಗು ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದರೂ ಹಠ ಬಿಡಲೊಪ್ಪದ ಪುತ್ತಿಗೆ ಶ್ರೀಗಳು ಶುಕ್ರವಾರ ಪರ್ಯಾಯ ಪೀಠಾರೋಹಣ ಮಾಡಿದ್ದಾರೆ. ಅಷ್ಟಮಠದ ಬಹುಮತಕ್ಕೆ ತಲೆಬಾಗುವ ಪ್ರಶ್ನೆಯೇಯಿಲ್ಲ ಎಂದು ಸುಗುಣೇಂದ್ರರು ಪಟ್ಟುಹಿಡಿದಿದ್ದರು.

ಸಾವಿರಾರು ಭಕ್ತಾಧಿಗಣದ ಸಮ್ಮುಖದಲ್ಲಿ ಮತ್ತು ಉಳಿದ ಸಪ್ತಮಠ ಯತಿಗಳ ಅನುಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಪೀಠ ಹತ್ತಿದ್ದಾರೆ. ಉಡುಪಿಯನ್ನು ಸುಂದರಗೊಳಿಸುವ ಕನಸಿನೊಂದಿಗೆ ಇನ್ನೆರಡು ವರ್ಷಗಳ ಕಾಲ ಮಧ್ವಾಚಾರ್ಯರು 12ನೇ ಶತಮಾನದಲ್ಲಿ ಸ್ಥಾಪಿಸಿದ ಬಾಲಗೋಪಾಲನ ಪೂಜೆಯನ್ನು ಮಾಡಲಿದ್ದಾರೆ. ಬೆಳಿಗ್ಗೆ 2.30ಕ್ಕೆ ಮೆರವಣಿಗೆ ಪ್ರಾರಂಭವಾಗಿತ್ತು. ಸುಮಾರು 6 ಗಂಟೆಗೆ ವೇದಘೋಷಗಳ ಹಿನ್ನೆಲೆಯಲ್ಲಿ ಸರ್ವಜ್ಞ ಪೀಠ ಅಲಂಕರಿಸಿದ್ದಾರೆ.

ಸಂಧಾನ ವಿಫಲ : ಸಾಗರೋಲ್ಲಂಘನ ಮಾಡಿದ ಯತಿಗಳು ಅಷ್ಟಮಠದ ಶಾಸ್ತ್ರದ ಪ್ರಕಾರ ಪರ್ಯಾಯಕ್ಕೆ ಅರ್ಹರಲ್ಲ. ಕಿರಿಯ ಶ್ರೀಗಳನ್ನು ನೇಮಿಸಿಕೊಂಡು ಅವರ ಮುಖಾಂತರ ಶ್ರೀಕೃಷ್ಣನ ಪೂಜೆ ಮಾಡಬಹುದೆಂಬ ವಿಶ್ವೇಶ ತೀರ್ಥರ ಬೇಡಿಕೆಯನ್ನು ಸುಗುಣೇಂದ್ರ ತೀರ್ಥರು ಅಂತಿಮ ಹಂತದವರೆಗೂ ಮನ್ನಿಸಲೇಯಿಲ್ಲ. ಪರ್ಯಾಯ ಪೀಠವೇರದಿರಲು ಹತ್ತು ಷರತ್ತುಗಳನ್ನು ಮಂಡಿಸಿದ್ದ ಪುತ್ತಿಗೆ ಶ್ರೀಗಳಿಗೆ ಸಪ್ತಮಠಗಳ ಯತಿಗಳಿಂದ ಸಂಪೂರ್ಣ ಒಪ್ಪಿಗೆಯೂ ದೊರೆಯದಿದ್ದ ಕಾರಣ ಸುಗುಣೇಂದ್ರ ತೀರ್ಥರು ಪರ್ಯಾಯ ಕೈಗೊಳ್ಳುವುದು ಶತಸಿದ್ಧವಾಗಿತ್ತು. ಒಪ್ಪಲು ಸಾಧ್ಯವೇಯಿಲ್ಲವೆನ್ನುವಂಥ ಹತ್ತನೇ ಷರತ್ತು ಪೇಜಾವರ ಮಠಾಧಿಪತಿಗಳ ಪ್ರಯತ್ನಕ್ಕೆ ಕೊಕ್ಕೆ ಹಾಕಿತ್ತು.

ಸಂಧಾನದಲ್ಲಿ ಕೃಷ್ಣನ ಪೂಜೆಯನ್ನೂ ಮಾಡುವುದಿಲ್ಲ ಮತ್ತು ಕೃಷ್ಣನಿಗೆ ತುಳಸಿ ಅರ್ಚನೆ ಮಾಡುವುದಿಲ್ಲ ಎಂದು ಪುತ್ತಿಗೆ ಶ್ರೀಗಳು ಒಪ್ಪಿಕೊಂಡಿದ್ದರೂ ಸರ್ವಜ್ಞ ಪೀಠವೇರುವ ವಿಷಯದಲ್ಲಿ ಸುಗುಣೇಂದ್ರ ತೀರ್ಥರು ಮತ್ತು ನಾಲ್ಕು ಮಠಾಧಿಪತಿಗಳು ಹಠ ತೊಟ್ಟಿದ್ದರಿಂದ ಸಂಧಾನಕ್ಕೆ ಮಂಗಳ ಹಾಡಬೇಕಾಯಿತು. ಕೊನೆಗೆ 86 ವರ್ಷ ವಯಸ್ಸಿನ ವಿಶ್ವೇಶ ತೀರ್ಥರೂ ಸುಗುಣೇಂದ್ರರ ಹಠದ ಮುಂದೆ ಸೋಲಬೇಕಾಯಿತು.

ಅಂತೂ ಸಾಂಪ್ರದಾಯಿಕ ಭವ್ಯ ಮೆರವಣಿಗೆಯೊಂದಿಗೆ ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ. ಹಿಂದಿನ ಪೀಠಾಧಿಪತಿಗಳಾಗಿದ್ದ ಕೃಷ್ಣಾಪುರದ ಶ್ರೀಗಳಿಂದ ಪರ್ಯಾಯ ಹಸ್ತಾಂತರದ ಪ್ರತೀಕವಾಗಿರುವ ಅಕ್ಷಯ ಪಾತ್ರೆ ಮತ್ತು ಸಟ್ಟುಗಗಳನ್ನು ಪಡೆದಿದ್ದಾರೆ. ಈ ವಿವಾದಗಳಿಗೂ ನನಗೂ ಸಂಬಂಧವೇಯಿಲ್ಲವೆನ್ನುವಂತೆ ಮುಖ ತಿರುಗಿಸಿ ನಿಂತಿರುವ ಕಡಗೋಲು ಹಿಡಿದಿರುವ ಬಾಲಕೃಷ್ಣನ ಪುಟ್ಟ ಕಪ್ಪು ವಿಗೃಹವನ್ನು ಎರಡು ವರ್ಷಗಳ ಕಾಲ ಪೂಜಿಸಲಿದ್ದಾರೆ.

730 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಉಡುಪಿ ಪರ್ಯಾಯದ ಸಂಪ್ರದಾಯವನ್ನು ಉಲ್ಲಂಘಿಸುವ ಮುಖಾಂತರ ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಮಠದ 21ನೇ ಯತಿಗಳಾದ ಸುಗುಣೇಂದ್ರ ಸ್ವಾಮೀಜಿಗಳು ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ.

100 ಕೋಟಿ ಕನಸು : ಪುತ್ತಿಗೆಯ ಉಪೇಂದ್ರತೀರ್ಥರ ಪರಂಪರೆಯ 21ನೇ ಯತಿಗಳಾದ ಸುಗುಣೇಂದ್ರ ತೀರ್ಥರು ಉಡುಪಿಯ ಬಗ್ಗೆ ಮತ್ತು ವಿಶ್ವ ಮಾಧ್ವ ಮಠವನ್ನು ಸ್ಥಾಪಿಸುವ ಕುರಿತು ಭವ್ಯ ಕನಸನ್ನು ಹೊಂದಿದ್ದಾರೆ. ತಮ್ಮ ಎರಡು ವರ್ಷದ ಅವಧಿಯಲ್ಲಿ ಉಡುಪಿಯನ್ನು ಸುಂದರವಾಗಿಸುವ 100 ಕೋಟಿ ರು.ಗಳ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಭಾರತ ಮಹಾನ್ ಯತಿಗಳು ಜನಿಸಿದಂಥ ಪುಣ್ಯ ಸ್ಥಳವಾದರೂ ಆಧ್ಯಾತ್ಮಿಕ ಸಂಪತ್ತು ನಿಂತ ನೀರಾಗಬಾರದು, ವಿಶ್ವದಲ್ಲೆಲ್ಲಾ ಪಸರಿಸಬೇಕು. ಇದಕ್ಕೆ ಧಾರ್ಮಿಕ ಕಟ್ಟಳೆಗಳು ತಡೆಗೋಡೆಯಾಗಿ ನಿಂತಿವೆ. ವಿಶ್ವ ಮಾಧ್ವಮಠ ಸ್ಥಾಪಿಸುವುದಕ್ಕೆ ತಾವು ಬದ್ಧ ಎಂದು ಪೀಠಾರೋಹಣ ಮಾಡಿದ ನಂತರ ಸುಗುಣೇಂದ್ರ ತೀರ್ಥರು ಸಾರಿದ್ದಾರೆ.ಈ ವಿವಾದಗಳಿಗೆಲ್ಲಾ ಕೊನೆಹಾಡಲು ಲಿಖಿತ ಸಂವಿಧಾನವನ್ನು ರಚಿಸಬೇಕೆಂಬ ವಾದವನ್ನು ಮಂಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more