ರಕ್ಷಕರೇ ಭಕ್ಷಕರಾದಾಗ, ಲೋಕಯುಕ್ತರೇ ಗತಿ

ಬೆಂಗಳೂರು, ಜ.18:ನಗರದ ಕೋರಮಂಗಲದಲ್ಲಿನ ಸರ್ವೀಸ್ ಅಪಾರ್ಟ್ ಮೆಂಟ್ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದ ಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಲೋಕಯುಕ್ತರ ತಂಡ ಬಂಧಿಸಿದ್ದಾರೆ.

ಎಸ್ ಐ ವಿ. ನಾಗೇಶ್, ಎ ಎಸ್ ಐ(Asst. Sub Inspector)ಗಳಾದ ನಾರಾಯಣಮೂರ್ತಿ, ವೆಂಕಟೇಶ್, ಪೇದೆಗಳಾದ ಅಪ್ಪಾಜಿ, ವೆಂಕಟೇಶ್ ಹಾಗೂ ರಂಗಸ್ವಾಮಿ ಎಂಬವರನ್ನು ಬಂಧಿಸಲಾಗಿದೆ. ಚಂದ್ರಪ್ಪ ಎಂಬ ಪೇದೆ ಪರಾರಿಯಾಗಿದ್ದಾರೆ. ಇವರೆಲ್ಲರೂ ಸಿಸಿಬಿಯ ಮಹಿಳಾ ಮತ್ತು ಮಾದಕದ್ರವ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಶಿವಕುಮಾರ್ ಅವರಿಗೆ 1ಲಕ್ಷ ರು ನೀಡುವಂತೆ ಒತ್ತಾಯಪೂರ್ವಕ ಬೆದರಿಕೆ ಒಡ್ಡಿದ್ದ ಎಸ್ ಐ ವಿ. ನಾಗೇಶ್ ಹಾಗೂ ತಂಡದವರು, ಮೊದಲ ಕಂತಿನ ರೂಪದಲ್ಲಿ 25ಸಾವಿರ ರು ಪಡೆದಿದ್ದರು. ಸ್ಥಳೀಯ ವಿದ್ಯಾರ್ಥಿ ದೀಪಕ್ ಎಂಬುವನ ಮುಖಾಂತರ ಎರಡನೇ ಕಂತನ್ನು ಪಡೆಯಲು ಆರೋಪಿ ಪೊಲೀಸರ ತಂಡ ಹವಣಿಸುತ್ತಿದ್ದಾಗ, ಲೋಕಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲೋಕಯುಕ್ತರಿಗೆ ನೀಡಿರುವ ದೂರಿನಲ್ಲಿ ಪೊಲೀಸರು ಸುಳ್ಳು ಆರೋಪ ಹೊರೆಸಿ ತಮ್ಮನ್ನು ಬಂಧಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಬಂಧಿತ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.

(ಏಜನ್ಸೀಸ್ )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+