ನಿಧಿಗಾಗಿ ಮಂಡ್ಯಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಬಲಿ

ಬೆಂಗಳೂರು, ಜ.17: ನಿಧಿ ಆಸೆಗಾಗಿ ಇಬ್ಬರು ಮಹಿಳೆಯರನ್ನು ಬಲಿಕೊಟ್ಟ ಐದು ಮಂದಿಯನ್ನು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಂಡ್ಯದ ರವೀಂದ್ರ(24) ಅಲಿಯಾಸ್ 'ಕಾಡು ಮನುಷ್ಯ' ಎಂಬುವನೇ ನಿಧಿಗಾಗಿ ಇಬ್ಬರು ಮಹಿಳೆಯರನ್ನು ಬಲಿಕೊಟ್ಟ ಆಸಾಮಿ. ಎಲಿಜಬೆತ್ ಮತ್ತು ಅರುಣ ಎಂಬುವವರೇ ಬಲಿಯಾದ ಇಬ್ಬರು ನತದೃಷ್ಟ ಮಹಿಳೆಯರು. ಭೂಮಿಯಲ್ಲಿ ಹುದುಗಿರುವ ನಿಧಿಯನ್ನು ತೆಗೆಯಲು ಇವರನ್ನು ಬಲಿ ಕೊಡಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್. ಅಚ್ಯುತರಾವ್ ಸುದ್ದಿಗಾರರಿಗೆ ತಿಳಿಸಿದರು.

ನಿಮ್ಮ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುತ್ತೇವೆ ಎಂದು ನಂಬಿಸಿ ಈ ಮಹಿಳೆಯರನ್ನು ನದಿತೀರಕ್ಕೆ ಕರೆದೊಯ್ದು ಸಾಯಿಸಿದ್ದಾರೆ. ಮೋಹನ(20), ಶೇಖರ್(20), ರವಿಕುಮಾರ್(20) ಮತ್ತು ಚಂದ್ರಶೇಖರ್(19) ಬಂಧನಕ್ಕೊಳಗಾದ ಇತರರು. ಈ ಇಬ್ಬರು ಮಹಿಳೆಯರೂ ಬಂಧನಕ್ಕೆ ಒಳಗಾಗಿರು ಮೋಹನ್‌ಗೆ ಪರಿಚಿತರಾಗಿದ್ದರು. ಇವರನ್ನು ಶಿಂಶಾ ಮತ್ತು ವೈಷ್ಣವಿ ನದಿತೀರದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತರಿಂದ ಮೊಬೈಲ್ ಫೋನ್ ಮತ್ತು ಕೊಲೆಯಾದ ಮಹಿಳೆಯರ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ರವೀಂದ್ರ ನಗರದ ಗೆಳೆಯನೊಬ್ಬನ ಮನೆಯಲ್ಲಿ ತಂಗಿದ್ದ ಇದರ ಸುಳಿವು ಪಡೆದ ಪೊಲೀಸರು ಆತನನ್ನು ಬಂಧಿಸಿದರು ಎಂದು ಕಲಾಸಿ ಪಾಳ್ಯ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+