ಹಾಟ್ ಮೇಲ್ ಜನಕ ಸಮೀರ್ ಹೊಸ ವೆಬ್ ಸೈಟ್

ಹಾಟ್ ಮೇಲ್ ಜನಕ ಸಮೀರ್ ಹೊಸ ವೆಬ್ ಸೈಟ್ ಮುಂಬೈ, ಜ.17:ಹಾಟ್ ಮೇಲ್ .ಕಾಂ ಹುಟ್ಟುಹಾಕಿ, ಐಟಿ ಪ್ರಪಂಚದಲ್ಲಿ ಸಂಚಲನ ಸೃಷ್ಟಿ ಮಾಡಿದ ಸಬೀರ್ ಭಾಟಿಯಾ ಮತ್ತೊಂದು ವೆಬ್ ಸೈಟ್ ಆರಂಭಿಸಿದ್ದಾರೆ.

http://www.sabsebolo.com/ ಹೆಸರಿನ ಈ ವೆಬ್ ಸೈಟ್ ನಲ್ಲಿ ಉಚಿತವಾಗಿ ಹೆಚ್ಚಿನ ಜನರೊಡನೆ ಸಂವಾದ ನಡೆಸುವ ಸೌಲಭ್ಯವಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಆರಂಭಿಸಲಾಗಿದೆ. ಕಾನ್ಫರೆನ್ಸ್ ಕಾಲ್ ಮಾಡಲು ಇದರಿಂದ ಸುಲಭವಾಗುತ್ತದೆ.ಒಮ್ಮೆ ನೋಂದಣಿ ಮಾಡಿಕೊಂಡರೆ ಸಾಕು. ಇದಕ್ಕೆ ಬೇಕಾಗಿರುವುದು ನಿಮ್ಮ ಈ ಮೇಲ್ ವಿಳಾಸ ಹಾಗೂ ಗುಪ್ತಪದ ಮಾತ್ರ.

ಕಾನ್ಫರೆನ್ಸ್ ಕರೆ ಮಾಡುವ ಬಗೆ ಹೇಗೆ?
ಕಾನ್ಫರೆನ್ಸ್ ಐಡಿ ಹಾಗೂ ನೋಂದಣಿ ಸಂಖ್ಯೆ ಪಡೆದವರು +91-(0)22-3980-4444 ಕರೆ ಮಾಡಿ, ತಮ್ಮ ಕಾನ್ಫರೆನ್ಸ್ ಐಡಿ ಸಂಖ್ಯೆ ಜತೆಗೆ # ಒತ್ತಿ 4 ಅಂಕಿಗಳ ಕಾನ್ಫರೆನ್ಸ್ ಪಿನ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ನಿಮಗೆ ಸಂಪರ್ಕ ಸಿಗುತ್ತದೆ. ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಸುಮಾರು 10 ಜನರೊಡನೆ ದೂರವಾಣಿ ಸಂಪರ್ಕ ಸಾಧಿಸಬಹುದು. ಅಲ್ಲದೆ ಈ ಸೌಲಭ್ಯವು ದಿನಪೂರ್ತಿ ಲಭ್ಯವಿರುವುದು ವಿಶೇಷ. ಈ ಸೌಲಭ್ಯ ಬಳಸಲು ಹೆಚ್ಚಿನ ತಂತ್ರಾಂಶವನ್ನು ನಿಮ್ಮ ಗಣಕ್ಕೆ ಅಳವಡಿಸುವ ಅಗತ್ಯ ಕೂಡ ಇಲ್ಲ. ಯಾವುದೇ ಮೊಬೈಲ್ ಅಥವಾ ಸ್ಥಿರ ದೂರವಾಣಿಗೆ ಕರೆ ಮಾಡಬಹುದು.

ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸುವುದು ನಮ್ಮ ಉದ್ದೇಶ ಎಂದು ಸಬ್ಸೆ ಬೋಲ್ .ಕಾಂ ನ ರುವಾರಿಗಳಾದ ಸಬೀರ್ ಭಾಟಿಯಾ ಹಾಗೂ ಯೋಗೇಶ್ ಪಟೇಲ್ ಹೇಳಿದ್ದಾರೆ.
(ಏಜನ್ಸೀಸ್ )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+