ಆಟೋ ರಿಕ್ಷಾ ದರ ಹೆಚ್ಚಳ:ಹದಿನೈದು ದಿನಗಳ ಗಡುವು
ಬೆಂಗಳೂರು, ಜ.17: ಆಟೋ ರಿಕ್ಷಾ ಮೀಟರ್ ನ ಕನಿಷ್ಠ ದರವನ್ನು 15 ರುಪಾಯಿಗಳಿಗೆ ಹೆಚ್ಚಿಸುವಂತೆ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ ಸರ್ಕಾರಕ್ಕೆ ಕೋರಿ, 15 ದಿನಗಳ ಗಡುವು ನೀಡಿದೆ.
ಸರ್ಕಾರ ನಿಗದಿತ ಸಮಯದಲ್ಲಿ ಬೇಡಿಕೆ ಈಡೇರಿಸದಿದ್ದರೆ, ಫೆ.1 ರಂದು ಅನಿರ್ಧಿಷ್ಟ ಕಾಲ ಆಟೋ ರಿಕ್ಷಾ ಮುಷ್ಕರ ನಡೆಸುತ್ತೇವೆ. ಈಗಾಗಲೇ ಕೆಲ ಆಟೋ ಚಾಲಕರ ಸಂಘಟನೆ ಕಳೆದವಾರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಬಂದ್ ನಡೆಸಿ, ಮೀಟರ್ ಕನಿಷ್ಠ ಬೆಲೆಯನ್ನು 20 ರುಗಳಿಗೆ ಹೆಚ್ಚಿಸುವಂತೆ ಕೋರಿದ್ದಾರೆ. ಆದರೆ ಕನಿಷ್ಠ ಬೆಲೆಯನ್ನು 20 ರು ಗೆ ಏರಿಸಿದರೆ ಜನಸಾಮಾನ್ಯರಿಗೆ ಹೊರೆಯಾಗುವ ಕಾರಣ, ನಮ್ಮ ಸಂಘ ಅದಕ್ಕೆ ಬೆಂಬಲ ನೀಡುತ್ತಿಲ್ಲ. ಈಗಿರುವ 12 ರು. ಮೀಟರ್ ಕನಿಷ್ಠ ದರವನ್ನು 15 ರುಗಳಿಗೆ ಹೆಚ್ಚಿಸುವುದರಲ್ಲಿ ಯಾವುದೇ ನಷ್ಟವಿಲ್ಲ. ಎಂದು ಆದರ್ಶ ಆಟೋ ರಿಕ್ಷಾ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಹೇಳಿದ್ದಾರೆ.
ಕೆಲ ಆಟೋ ಚಾಲಕರು ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಮೀಟರ್ ದರಕ್ಕಿಂತ ಹೆಚ್ಚಿಗೆ ವಸೂಲಿ ಮಾಡುವ ಚಾಲಕರು ಹಾಗೂ ದುವರ್ತಿಸುವ ಚಾಲಕರನ್ನು ಕಂಡರೆ ತಕ್ಷಣ ನಮ್ಮ ಸಂಘಕ್ಕೆ ಕರೆ ಮಾಡಿ ಎಂದು ಮಂಜುನಾಥ್ ಹೇಳಿದರು. ಆದರ್ಶ ಆಟೋರಿಕ್ಷಾ ಸಂಘದಲ್ಲಿ ಸುಮಾರು 12,500 ಆಟೋರಿಕ್ಷಾ ಚಾಲಕರು ಸದಸ್ಯರಾಗಿದ್ದಾರೆ.
ಸಂಪರ್ಕ ವಾಣಿ: 98451 55999 / 97393 75378
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ:
ನಗರದಲ್ಲಿ ಶುಕ್ರವಾರದಂದು(ಜ.11) ಆಟೋ ಚಾಲಕರ ಮುಷ್ಕರ












Click it and Unblock the Notifications