• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ ಮುನ್ನ ರೈತರ ಪಾಲಿಗೆ ಕಹಿಯಾದ ಕಬ್ಬು

By Staff
|

ಸಂಕ್ರಾಂತಿ ಬೆನ್ನಲ್ಲೇ ರೈತರ ಪಾಲಿಗೆ ಕಹಿಯಾದ ಕಬ್ಬುಬೆಂಗಳೂರು, ಜ.11: ಈ ಬಾರಿಯ ಸಂಕ್ರಾತಿ ಹಬ್ಬ ಕಬ್ಬು ಬೆಳೆಗಾರರ ಪಾಲಿಗೆ ಸಮೃದ್ಧಿ ತಂದಿಲ್ಲ ಎನ್ನುವುದು ರೈತರ ಆಕ್ರೋಶ, ಅಸಹನೆ, ಪ್ರತಿಭಟನೆ ಮೂಲಕ ವ್ಯಕ್ತವಾಗಿದೆ.

ಕಬ್ಬು ಬೆಳೆಗೆ ಆಗಿರುವ ಹಾನಿ ಸೇರಿದಂತೆ ರಾಜ್ಯ ಸರ್ಕಾರಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯಲು ಅವಕಾಶ ನೀಡಬೇಕು ಹಾಗೂ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ಆಗ್ರಹಿಸಿ ರೈತರು ಶುಕ್ರವಾರ ರಾಜಭವನ ಮುಂದೆ ಮುಷ್ಕರ ನಡೆಸಿದರು.

ಕಳೆದ ಮೂರು ತಿಂಗಳಿಂದ ಮಂಡ್ಯ, ಚಾಮರಾಜನಗರ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ರೈತರು ರಸ್ತೆ ತಡೆ, ಸರ್ಕಾರಿ ಕಚೇರಿ ಮುತ್ತಿಗೆ ನಡೆಸಿದ್ದರು. ಮಂಡ್ಯ ಮತ್ತು ಸಂಗೂರಿನ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆ ಕಾರ್ಮಿಕರ ಮುಷ್ಕರ ಉಗ್ರರೂಪ ತಾಳಿ ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು ಮತ್ತು ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ಪ್ರತಿಭಟಿಸುತ್ತಿದ್ದ ರೈತರನ್ನು ಮಂಡ್ಯ ಪೊಲೀಸರು ಹತ್ತಿಕ್ಕಲು ಪ್ರಯತ್ನಿಸಿದ್ದರು. ಈ ಹಿನ್ನಲೆಯಲ್ಲಿ ರೈತ ಮತ್ತು ಕನ್ನಡಪರ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆ ನೀಡಿದ್ದವು.

ಇಷ್ಟೆಲ್ಲಾ ಮಾಡಿದರೂ ಸರಕಾರ ಕಣ್ಣು ತೆರೆಯಲಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆ ಕಾರ್ಮಿಕರ ಹಿತ ಕಾಪಾಡಲು ಮುಂದಾಗಲಿಲ್ಲ. ರೊಚ್ಚಿಗೆದ್ದ ರೈತರು ಸರ್ಕಾರದ ಅಸಡ್ಡೆಯನ್ನು ಖಂಡಿಸಿ ಮಂಡ್ಯ, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿದ ರೈತರು ಇಂದು ರಾಜಭವನದ ಮುಂದೆ ಧರಣಿ, ಪ್ರತಿಭಟನೆ ನಡೆಸಿದರು.

ರಾಜ್ಯಪಾಲರ ಭರವಸೆ : ರೈತ ಮುಖಂಡರ ನಿಯೋಗ ರಾಜಭವನಕ್ಕೆ ತೆರಳಿ ಬೇಡಿಕೆಗಳ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ರಾಜ್ಯಪಾಲರು ರೈತರ ಸಮಸ್ಯೆಗಳನ್ನು ಕೃಷಿ ಮತ್ತು ಕೈಗಾರಿಕಾ ಸಚಿವರ ಗಮನಕ್ಕೆ ತಂದು ಕಾನೂನಿನ ರೀತ್ಯ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಆನಂತರ ರೈತ ಸಂಘಟನೆಗಳು ಮುಷ್ಕರವನ್ನು ಹಿಂತೆಗೆದುಕೊಂಡವು.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more