ಸುವರ್ಣವಾಹಿನಿ ರೈಲು ಮಾರ್ಚ್ 3ಕ್ಕೆ ಹಳಿ ಮೇಲೆ
ಬೆಂಗಳೂರು , ಜ.11: ಕರ್ನಾಟಕ ರಾಜ್ಯದ ಸುವರ್ಣ ಹಬ್ಬದ ಸಂಭ್ರಮಕ್ಕೆ ಗರಿ ಮೂಡಿಸಲು ಸುವರ್ಣ ರಥ (Golden Chariot) ರೈಲು ಮಾರ್ಚ್ 3 ರಂದು ಅಧಿಕೃತವಾಗಿ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಫೆಬ್ರವರಿ 22ರಿಂದ ಪ್ರಾಯೋಗಿಕ ಓಡಾಟ ಪ್ರಾರಂಭವಾಗಲಿದೆ.
ರೈಲಿನ ಸಂಚರಿಸಲು ಇಚ್ಛೆ ಪಡುವವರಿಗೆ ಮುಂಗಡ ಬುಕ್ಕಿಂಗ್ ಸೌಲಭ್ಯವನ್ನು ಇನ್ನು ಕೆಲದಿನಗಳಲ್ಲಿ ನೀಡಲಾಗುವುದು ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಹೇಳಿದ್ದಾರೆ.
***
ಸಂಸ್ಕೃತ ದಿವಸ ಆಚರಣೆ
ವಾಷಿಂಗ್ಟನ್ :ಭಾರತದ ಪುರಾತನ ಭಾಷೆ ಸಂಸ್ಕೄತದ ಮಹತ್ವ ಗುರುತಿಸಿರುವ ಅಮೆರಿಕದ ನೆವಡಾ ಪ್ರಾಂತ್ಯದ ವಾಷೂ ಕೌಂಟಿಯು ಜ.12 ರಂದು ಸಂಸ್ಕೄತ ದಿವಸ' ಆಚರಣೆ ಕೈಗೊಳ್ಳಲಿದೆ.
ವಾಷೂ ಕೌಂಟಿ ಆಯೋಗದ ಅಧ್ಯಕ್ಷರಾದ ರಾಬರ್ಟ್ ಎಂ.ಲಾರ್ಕಿನ್ ಗುರುವಾರ ಈ ವಿಷಯ ತಿಳಿಸಿದರು. ನಾಳೆ ನಡೆಯಲಿರುವ ಪ್ರಪ್ರಥಮ ಸಂಸ್ಕೃತ ದಿವಸದಲ್ಲಿ ವಿಚಾರ ಸಂಕಿರಣ ಮತ್ತು ತರಗತಿಗಳ ಬಗ್ಗೆ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಸಲಾಗುವುದು ಎಂದು ಲಾರ್ಕಿನ್ ಹೇಳಿದರು.
(ದಟ್ಸ್ ಕನ್ನಡವಾರ್ತೆ )


Click it and Unblock the Notifications
