ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಬಾರಿಗೆ ಎವರೆಸ್ಟ್ ಹತ್ತಿದ್ದ ಹಿಲೆರಿ ಚಿರನಿದ್ರೆಗೆ

By Staff
|
Google Oneindia Kannada News

ಪ್ರಥಮ ಬಾರಿಗೆ ಎವರೆಸ್ಟ್ ಹತ್ತಿದ್ದ ಹಿಲೆರಿ ಚಿರನಿದ್ರೆಗೆಆಕ್ಲೆಂಡ್ , ಜ.11: ಪ್ರಪ್ರಥಮ ಬಾರಿಗೆಎವೆರೆಸ್ಟ್ ಶಿಖರವನ್ನು ಹತ್ತಿ ಸಾಧನೆಗೈದಿದ್ದ ನ್ಯೂಜಿಲ್ಯಾಂಡಿನ ಸರ್ ಎಡ್ಮಂಡ್ ಹಿಲೆರಿ ಮೃತರಾಗಿದ್ದಾರೆ. ಅವರಿಗೆ 88 ವರ್ಷವಯಸ್ಸಾಗಿತ್ತು.

ಸ್ಥಳೀಯ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 9 ರ ಸುಮಾರಿಗೆ ಮೃತಪಟ್ಟರೆಂದು ಇಲ್ಲಿನ ಪ್ರಧಾನ ಮಂತ್ರಿ ಕಚೇರಿಯ ವಕ್ತಾರರು ಘೋಷಿಸಿದ್ದಾರೆ. ರಾಷ್ಟ್ರೀಯ ಶೋಕಾಚರಣೆಗೆ ಕರೆ ಕೊಟ್ಟಿದ್ದಾರೆ.

ಎತ್ತರದ ಮನುಷ್ಯ:
ನೇಪಾಳಿ ಶೇರ್ಪಾ ತೇನ್ ಸಿಂಗ್ ನಾರ್ಕೆ ಜತೆಗೂಡಿ1953 ರ ಮೇ,29 ರಂದುವಿಶ್ವದ ಅತಿ ಎತ್ತರದ(8,848 ಮೀ) ಎವೆರೆಸ್ಟ್ ಪರ್ವತದ ಚಾರಣವನ್ನು ಯಶಸ್ವಿಯಾಗಿ ಪೂರೈಸಿದ್ದರು. 1919 ರ ಜುಲೈ 20 ರಂದು ಜನಿಸಿದ್ದ ಹಿಲೆರಿ ,ಜೇನು ನೊಣ ಸಾಕಾಣಿಕೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. 80 ರ ದಶಕದಲ್ಲಿ ಭಾರತ್ಕ್ಕೆ ನ್ಯೂಜಿಲ್ಯಾಂಡ್ ದೇಶದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಜಗತ್ತಿನ ಉನ್ನತ ಶಿಖರವನ್ನು ಏರಿದ ಮೇಲೂ ತನ್ನ ಸಾಧನೆಯಿಂದ ಬೀಗದೆ, ತನ್ನೊಡನೆ ಎವೆರೆಸ್ಟ್ ಶಿಖರ ಹತ್ತಿ ಸಾಧನೆ ಮಾಡಿದ ಇತರೆ ಸಾಹಸಿಗಳನ್ನು ಹಿಲೆರಿ ಹೊಗಳುತ್ತಿದ್ದ ರು.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X