ಈಗ ಪ್ರಕಟಣೆಗಳು; ಜಾಹೀರಾತು ದರ ಬದಲಾಗಿದೆ!

ಚೆನ್ನೈ, ಜ.9: ನಾಲ್ಕು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ದಕ್ಷಿಣ ಭಾರತದ ದೂರದರ್ಶನ ವಾಹಿನಿ ಸನ್ ನೆಟ್‌ವರ್ಕ್ ತನ್ನ ಜಾಹೀರಾತು ದರಗಳನ್ನು ಹೆಚ್ಚಿಸುತ್ತಿದೆ. ಚಾನಲ್ ಮಾರುಕಟ್ಟೆಯಲ್ಲಿ ವೀಕ್ಷಕರ ಸಂಖ್ಯೆ ಹಾಗೂ ರೇಟಿಂಗ್ ಜಾಸ್ತಿ ಹೊಂದಿರುವ ಸನ್ ನೆಟ್‌ವರ್ಕ್ ಇದ್ದಕ್ಕಿದ್ದಂತೆ ಜಾಹೀರಾತು ದರಗಳನ್ನು ಏರಿಸಲು ನಿರ್ಧರಿಸಿದೆ.

ಪರಿಷ್ಕೃತ ಜಾಹೀರಾತು ದರಗಳು ಫೆಬ್ರವರಿ 1ರಿಂದ ಜಾರಿಯಾಗಲಿವೆ. ಏರಿಕೆಯ ಪ್ರಮಾಣ ಹೀಗಿದೆ, ತಮಿಳು ಶೇ.11, ತೆಲುಗು ಶೇ.15, ಕನ್ನಡ ಹಾಗೂ ಮಲಯಾಳಂ ಶೇ.10. ಈ ಪರಿಷ್ಕೃತ ದರಗಳು ಉದಯ, ಸನ್, ಸೂರ್ಯ, ಜೆಮಿನಿ ಚಾನಲ್‌ಗಳಿಗೆ ಮಾತ ಅನ್ವಯವಾಗುತ್ತದೆ ಎಂದು ಕಂಪನಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಸನ್ ನೆಟ್‌ವರ್ಕ್‌ನ ಇತರ ಚಾನಲ್‌ಗಳಾದ ಸನ್ ಮ್ಯುಸಿಕ್, ಸನ್ ನ್ಯೂಸ್, ಜೆಮಿನಿ ಮ್ಯೂಸಿಕ್, ಜೆಮಿನಿ ನ್ಯೂಸ್, ತೇಜ, ಉದಯ ಮೂವೀಸ್, ಉದಯ ವಾರ್ತೆಗಳು, ಯು2 ಮತ್ತು ಕಿರಣ್ ಚಾನಲ್‌ಗಳ ಜಾಹೀರಾತಿನ ಬೆಲೆಗಳು ಅವುಗಳ ಕಾರ್ಯಕ್ರಮಗಳನ್ನು ಅವಲಂಬಿಸಿ ಶೇ.10 ರಿಂದ ಶೇ.25ರವರೆಗೂ ಏರಿಕೆಯಾಗಲಿವೆ. ಈ ಚಾನಲ್‌ಗಳ ಪರಿಷ್ಕೃತ ದರಗಳು ಫೆಬ್ರವರಿ 15ರಿಂದ ಜಾರಿಯಾಗಲಿವೆ.

ಜಾಹೀರಾತುಗಳ ದರ ಏರಿಕೆಯು ಸನ್ ನೆಟ್‍ವರ್ಕ್‌ ಷೇರುಗಳ ಮೇಲೂ ಪರಿಣಾಮ ಬೀರಿದೆ. ಬುಧವಾರದ ಷೇರುಪೇಟೆಯಲ್ಲಿ ಸನ್ ನೆಟ್‌ವರ್ಕ್‌ನ ಷೇರುಗಳು ಶೇ.1.5ರಷ್ಟು ಕುಸಿತ ಕಂಡಿವೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+