ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತಿನಲ್ಲಿ ರೇಡಿಯೋಗಳು ಕಡಿಮೆ ಇಲ್ಲ!

By Staff
|
Google Oneindia Kannada News

ನವದೆಹಲಿ, ಜ.9: ರೇಡಿಯೋ ಜಾಹೀರಾತಿನಲ್ಲಿ ದೆಹಲಿ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಲ್ಲಿವೆ. ಚೆನ್ನೈ ಹಾಗೂ ಬೆಂಗಳೂರು ನಗರಗಳು ನಾಲ್ಕು ಮತ್ತು ಐದನೆ ಸ್ಥಾನಗಳಲ್ಲಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ದೇಶದ ಬಹುದೊಡ್ಡ ಗ್ರಾಹಕ ಮಾರುಕಟ್ಟೆಯಾದ ದೆಹಲಿಯಲ್ಲಿ ರೇಡಿಯೊ ಜಾಹೀರಾತುಗಳು ಅಧಿಕವಾಗಿ ಬಿತ್ತರಗೊಳ್ಳುತ್ತಿರುವ ಕಾರಣ ಅದು ತನ್ನ ಜಾಹೀರಾತಿನ ಮೌಲ್ಯವನ್ನೂ ಹೆಚ್ಚಿಸಿದೆ. ಹಾಗಂತ ಸಮೀಕ್ಷೆ ನಡಿಸಿದ ಟಿಎ‌ಎಮ್ ಮೀಡಿಯಾ ಆಡೆಕ್ಸ್ ಸಂಸ್ಥೆ ತಿಳಿಸಿದೆ.

ಸಮೀಕ್ಷೆಯ ಪ್ರಕಾರ ದೆಹಲಿಯಲ್ಲಿ ಪ್ರತಿ ನಿತ್ಯ ಪ್ರಸಾರವಾಗುವ ಜಾಹೀರಾತುಗಳ ಸಂಖ್ಯೆ 2002. ಅದೇ ಬೆಂಗಳೂರಿನಲ್ಲಾದರೆ 877, ಮುಂಬೈನಲ್ಲಿ 1342, ಕೋಲ್ಕತ್ತಾದಲ್ಲಿ 1303 ಮತ್ತು ಚೆನ್ನೈನಲ್ಲಿ 1024 ಜಾಹೀರಾತುಗಳು ಪ್ರತಿನಿತ್ಯ ಬಿತ್ತರಗೊಳ್ಳುತ್ತಿವೆ. ನಂತರದ ಸ್ಥಾನದಲ್ಲಿ ಹೈದರಾಬಾದ್ ಮತ್ತು ಜೈಪುರಗಳಿವೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X