• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯಾಯಾಲಯದಲ್ಲಿ ಇಂಗುತಿಂದ ಮಂಗನಾದ ಐಎಎಸ್

By Staff
|

ಬೆಂಗಳೂರು, ಜ. 9 : ನ್ಯಾಯಾಲಯದಲ್ಲಿ ಕುಚೇಷ್ಟೆಯ ಮಾತುಗಳನ್ನಾಡಿದ್ದಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರು ಕ್ಷಮಾಪಣೆ ಕೇಳಬೇಕಾದ ಪ್ರಸಂಗ ಬೆಂಗಳೂರಿನ ನ್ಯಾಯಾಲದಲ್ಲಿ ನಡೆದಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮಂಗಳವಾರ ನ್ಯಾಯಾಂಗ ನಿಂದನೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದಾಗ ಈ ಘಟನೆ ಜರುಗಿತು.

ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ "ಕಕ್ಷಿದಾರ ಬಳ್ಳಾರಿಯಿಂದ ಬೆಂಗಳೂರಿಗೆ ಹೇಗೆ ಬರುತ್ತಾನೆ" ಎನ್ನುವ ಪ್ರಶ್ನೆಯನ್ನು ನ್ಯಾಯಮೂರ್ತಿಗಳು ಕೇಳಿದರು. ಅದಕ್ಕೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ "ಅವರು ಹೆಲಿಕಾಪ್ಟ್‌ರ್‌ನಲ್ಲಿ ಬರ್ತಾರೆ" ಎಂದು ಗೇಲಿ ಮಾಡಿ ಗಹಗಹಿಸಿ ನಗಲು ಶುರು ಮಾಡಿದರು. ತಕ್ಷಣ ತಮ್ಮ ಅಧಿಕಪ್ರಸಂಗದ ಅರಿವಾಗಿ ಕ್ಷಮೆಯನ್ನೂ ಯಾಚಿಸಿದರು.

ಏನ್ರೀ ತಮಾಷೆ ಕೆಟ್ಟುಹೋಯಿತಾ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ವಿ.ಎಲ್ ಸಭಾಹಿತ್ ಮತ್ತು ಎಲ್.ನಾರಾಯಣ ಸ್ವಾಮಿ ಅವರು, ಅಧಿಕಾರಿಯು ಭೇಷರತ್ ಕ್ಷಮಾಪಣೆ ಕೇಳುವ ಅಫಿಡವಿಟ್ ಬರೆದುಕೊಟ್ಟು ಆಮೇಲೆ ನ್ಯಾಯಾಲಯದಿಂದ ಹೊರಗೆ ತೆರಳತಕ್ಕದ್ದು ಎಂದು ಆಜ್ಞೆ ಮಾಡಿಬಿಟ್ಟರು.

ನ್ಯಾಯಾಲಯದಲ್ಲಿ ಇಂಥ ಅಪಹಾಸ್ಯದ ಮಾತುಗಳನ್ನು ಕೇಳಿ ನ್ಯಾಯಾಧೀಶರಿಗೆ ಸಿಕ್ಕಾಪಟ್ಟೆ ಕೋಪ ಬಂದುಬಿಟ್ಟಿತ್ತು. ಸೆರೆಮನೆಯಲ್ಲಿ ಏರೋಪ್ಲೇನಿಗೆ ಹಾಕಿದರೆ ಆಗ ನಿಮಗೆ ಹೆಲಿಕಾಪ್ಟರ್ ಮತ್ತು ಏರೋಪ್ಲೇನಿನ ವ್ಯತ್ಯಾಸ ಗೊತ್ತಾಗತ್ತೆ ಎಂದು ಕುಪಿತರಾದ ನ್ಯಾಯಾಧೀಶರು ಬದರಿಯಾ ಅವರಿಗೆ ಎಚ್ಚರಿಕೆ ಕೊಟ್ಟರು. ಇವತ್ತು ಮಧ್ಯಾನ್ಹ 2.30 ರ ಒಳಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಕೇಳದಿದ್ದರೆ ಒಂದು ದಿನ ಜೈಲಿನಲ್ಲಿ ರಾಗಿ ಬೀಸಬೇಕಾಗುತ್ತದೆ ಎಂದೂ ನ್ಯಾಯಾಲಯ ಕಟ್ಟಪ್ಪಣೆ ಮಾಡಿತು.

ಇದೇ ವಿಚಾರಣೆಯಲ್ಲಿ ನ್ಯಾಯಾಯಲಕ್ಕೆ ಹಾಜರಾಗಬೇಕಾಗಿದ್ದ ಇನ್ನೊಬ್ಬ ಐಎಎಸ್ ಅಧಿಕಾರಿ ಮಹೇಂದರ್ ಜೈನ್ ಕೋರ್ಟಿಗೆ ಬಂದಿರಲಿಲ್ಲ. ಹಾಜರಾಗುವುದಕ್ಕೆ ಆದೇಶ ನೀಡಿದ್ದರೂ ಬಂದಿರಲಿಲ್ಲವಾದ್ದರಿಂದ ಕೋರ್ಟು ಜೈನ್ ಅವರಿಗೆ 500 ರೂಪಾಯಿ ಜುಲ್ಮಾನೆ ವಿಧಿಸಿತು.

ಈ ಇಬ್ಬರು ಐಎಎಸ್ ಅದಿಕಾರಿಗಳು ಮೇಲೆ ಹೊರಿಸಲಾಗಿರುವ ಆಪಾದನೆಯಾದರೂ ಏನು? ನ್ಯಾಯಾಂಗ ನಿಂದನೆ ಪ್ರಕರಣ ಯಾವುದದು ? : ಗಣಿಗಾರಿಗೆ ಮಾಡುವುದಕ್ಕಾಗಿ ಕೆ.ವೆಂಕಣ್ಣ ಎಂಬುವವರಿಗೆ 150 ಎಕರೆ ಭೂಮಿ ಸರ್ಕಾರ ಮಂಜೂರು ಮಾಡಿತ್ತು. ಆದರೆ ಅವಧಿ ಮುಗಿಯುವ ಮೊದಲೇ ಈ ಜಮೀನನ್ನು ಸಂಡೂರು ತಾಲೂಕಿನ ಕುಮಾರಸ್ವಾಮಿ ಬಡಾವಣೆಯ ಕುಮಾರ ಗೌಡ ಎಂಬುವವರಿಗೆ ಭೂಮಿ ಅಲಾಟ್ ಮಾಡಬೇಕೆಂದು ಶಿಫಾರಸ್ಸು ಮಾಡಿದರು. ಇದನ್ನು ಪ್ರಶ್ನಿಸಿ ಹೂಡಿದ ಪ್ರಕರಣದಲ್ಲಿ ವೆಂಕಣ್ಣ ಅವರಿಗೇ ಜಮೀನು ನೀಡಬೇಕೆಂದು ಆದೇಶ ನೀಡಲಾಗಿತ್ತು. ಆದರೆ, ಅವರು ಇಬ್ಬರು ಐಎಎಸ್ ಅಧಿಕಾರಿಗಳು ಆದೇಶ ಪಾಲಿಸದಿದ್ದರಿಂದ ಅವರ ಮೇಲೆ ನ್ಯಾಯಾಲಯ ನಿಂದನೆ ಪ್ರಕರಣದ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲೆ ಕುಚೇಷ್ಟೆಯ ಮಾತಾಡಿದ ಅಧಿಕಾರಿಗೆ ನ್ಯಾಯಾಲಯ ಛೀಮಾರಿ ಹಾಕಿದ್ದು.

(ದಟ್ಸ್ ಕನ್ನಡ ಸುದ್ದಿಮನೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more