ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಗಾತ್ರದ ಕಾರು ಉತ್ಪಾದನೆಯತ್ತ ಹಮಾರಾ ಬಜಾಜ್

By Staff
|
Google Oneindia Kannada News

Bajaj Auto unveils Small Car with a Mileage of 34 kmplಪುಣೆ, ಜ.09: ಭಾರತದಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬಜಾಜ್ ಆಟೋ ಲಿಮಿಟೆಡ್ ಮುಂಬರುವ 3-4ವರ್ಷಗಳಲ್ಲಿ ಸಣ್ಣಗಾತ್ರದ ಕಾರುಗಳ ಉತ್ಪಾದನೆಯಲ್ಲಿ ತೊಡಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.

ಉದ್ದೇಶಿತ ಯೋಜನೆಯ ಮಾದರಿ ಕಾರನ್ನು ಅನಾವರಣಗೊಳಿಸಿ ಮಾತನಾಡಿದ ರಾಜೀವ್ ,ಫ್ರೆಂಚ್ ದೇಶದ ಕಾರು ಉತ್ಪಾದಕ ಸಂಸ್ಥೆ ರಿನೊ(Renault) ಹಾಗೂ ನಿಸ್ಸಾನ್ (nissan) ಜೊತೆ ಈ ಬಗ್ಗೆ ಮಾತುಕತೆ ಆರಂಭವಾಗಿದೆ.ಒಪ್ಪಂದ ಆಶಾದಾಯಕವಾಗದೆ ಹೋದರೆ, ಬಜಾಜ್ ಸಂಸ್ಥೆ ಸ್ವಂತವಾಗಿ ಕಾರು ಉತ್ಪಾದನಾ ಕ್ಷೇತ್ರಕ್ಕೆ ಕಾಲಿಡಲಿದೆ ಎಂದರು.

ಟಾಟಾ ಕಾರಿನ ಬೆಲೆಗಿಂತ ಬಜಾಜ್ ಕಾರುಗಳು ಹೆಚ್ಚಾಗಿರುವುದಂತೂ ಖಂಡಿತಾ.ಆದರೆ, ಪ್ರತಿ ಲೀಟರ್ ಗೆ ಸುಮಾರು 34 ಕಿ.ಮೀ ನೀಡುವ ಸಾಮರ್ಥ್ಯವುಳ್ಳ ಕಾರನ್ನು ರೂಪಿಸುವುದು ನಮ್ಮ ಗುರಿ. ಪೆಟ್ರೋಲ್ ಹಾಗೂ ಡೀಸೆಲ್ ಇಂಧನಕ್ಕೆ ಹೊಂದುವ ಎರಡೂ ಮಾದರಿ ಕಾರುಗಳನ್ನು ತಯಾರಿಸಲಾಗುವುದು.ಪುಣೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಉದ್ದೇಶವಿದೆ ಎಂದು ರಾಜೀವ್ ಬಜಾಜ್ ಹೇಳಿದರು.

ಬಹು ನಿರೀಕ್ಷಿತ ಟಾಟಾಸಂಸ್ಥೆಯ 1ಲಕ್ಷದ ಕಾರು ರೋಡಿಗಿಳಿಯಲು ಎರಡು ದಿನ ಬಾಕಿಯಿರುವಂತೆ, ಬಜಾಜ್ ಸಂಸ್ಥೆ ಈ ಸುದ್ದಿಯನ್ನು ಹೊರ ತಂದಿರುವುದು ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X