• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಖಡ್ಗಗಳಿಂದ ಹೊಮ್ಮಿದ ನ್ಯಾನೋ ವಿಜ್ಞಾನ

By Staff
|

ನೊಬೆಲ್ ಪ್ರಶಸ್ತಿ ವಿಜೇತ ರಸಾಯನ ವಿಜ್ಞಾನಿ ರಾಬರ್ಟ್ ಕರ್ಲ್ ಜೂನಿಯರ್ ವಿಶಾಖಪಟ್ಟಣ, ಜ.8: ನ್ಯಾನೋ ತಂತ್ರಜ್ಞಾನ ಎಂಬ ವಿಜ್ಞಾನದ ಹೊಸ ಶಿಖರ ಭಾರತೀಯರಿಗೇನೂ ಹೊಸದಲ್ಲ. ಅವರಿಗೆ 18ನೇ ಶತಮಾನದಲ್ಲೇ ನ್ಯಾನೋ ವಿಜ್ಞಾನದ ಬಗ್ಗೆ ಅರಿವಿತ್ತು ಎಂದು ನೊಬೆಲ್ ಪ್ರಶಸ್ತಿ ವಿಜೇತ ರಸಾಯನ ವಿಜ್ಞಾನಿ ರಾಬರ್ಟ್ ಕರ್ಲ್ ಜೂನಿಯರ್ 95ನೇ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ತಿಳಿಸಿದ್ದಾರೆ.

ಅಂದಿನ ಖಡ್ಗಗಳು ನ್ಯಾನೋ ವಿಜ್ಞಾನದ ಆಧಾರದ ಮೇಲೆ ರೂಪಗೊಂಡಿವೆ. ಇದಕ್ಕೆ ಸಾಕ್ಷಿಯಾಗಿ ಟಿಪ್ಪು ಸುಲ್ತಾನನ ಖಡ್ಗವನ್ನು ಹೆಸರಿಸಬಹುದು. ಆದರೆ ತಾವು ಖಡ್ಗ ತಯಾರಿಕೆಗೆ ಬಳಸುತ್ತಿರುವುದು ನ್ಯಾನೋ ವಿಜ್ಞಾನ ಎಂದೂ, ಅದು ಭವಿಷ್ಯದಲ್ಲಿ ಉಂಟು ಮಾಡಬಹುದಾದ ಕ್ರಾಂತಿಯ ಬಗ್ಗೆ ಅವರಿಗೆ ಅರಿವಿರಲಿಲ್ಲ. ಅದೇ ರೀತಿ ರೋಮ್‌ನಲ್ಲೂ ನ್ಯಾನೋ ವಿಜ್ಞಾನ ಬಳಸಿ ಗಾಜನ್ನು ತಯಾರಿಸಲಾಗುತ್ತಿತ್ತು ಎಂದು ಕರ್ಲ್ 'ರಸಾಯನ ಶಾಸ್ತ್ರದ ಅಸಾಧಾರಣ ಮೂಲವಸ್ತು ಇಂಗಾಲ: ನ್ಯಾನೋ ಸಾಧನಗಳಿಗೆ ಒಂದು ಅವಕಾಶ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.

ಇವರು ತಯಾರಿಸುತ್ತಿದ್ದ ಖಡ್ಗಗಳಲ್ಲಿ ಇಂಗಾಲದ ಪ್ರಮಾಣ ಅಧಿಕವಾಗಿತ್ತು. ಆದ ಕಾರಣ ಅವು ಹರಿತವಾಗಿ ಮತ್ತು ಬಲಿಷ್ಠವಾಗಿದ್ದವು ಎಂದು ಕರ್ಲ್ ಹೇಳಿದರು. ವಿಜ್ಞಾನಿಗಳ ಪ್ರಕಾರ ಅಂದಿನ ಜನಕ್ಕೆ ತಾಂತ್ರಿಕ ಪರಿಜ್ಞಾನ ಇರಲಿಲ್ಲ ಆದರೂ ನ್ಯಾನೋ ವಿಜ್ಞಾನದ ಬಳಕೆ ಅವರಿಗೆ ಗೊತ್ತಿತ್ತು ಎನ್ನುತ್ತಾರೆ. ಹೈದರಾಬಾದ್‌ನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಜೆ.ಎಸ್. ಯಾದವ್, ಹ್ಯೂಸ್ಟನ್‌ನ ತಳಿ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷರಾದ ಕೃಷ್ಣ ದ್ರೋಣಂರಾಜು ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

(ಏಜನ್ಸೀಸ್)

ಬ್ಯಾಕ್ಟೀರಿಯಾ, ಇಲ್ಲ 'ನ್ಯಾನೊ' ಫ್ಯಾಕ್ಟರಿಯಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more