ಲೈವ್ ಬ್ಯಾಂಡ್ ಗೆ ಅನುಮತಿ ಕೊಡಬೇಕೆಂದು ಮನವಿ
ಬೆಂಗಳೂರು, ಜ.8: ಪಬ್ ಮತ್ತು ಹೊಟೆಲ್‌ಗಳಲ್ಲಿ ಲೈವ್‌ಬ್ಯಾಂಡ್‌ಗೆ ಅವಕಾಶ ಕಲ್ಪಿಸಿಕೊಡಿ ಎಂದು ಕರ್ನಾಟಕ ರೆಸ್ಟೊರೆಂಟ್ ಲೈವ್ ಬ್ಯಾಂಡ್ ಸಂಘ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ. ಸಭೆ ಸಮಾರಂಭಗಳಲ್ಲಿ ಡಿಸ್ಕೊತೆಕ್‌ಗಳಿಗೆ ಅವಕಾಶಕೊಟ್ಟಂತೆ ಲೈವ್‌ಬ್ಯಾಂಡ್‌ಗೂ ಅವಕಾಶ ಮಾಡಿ ಕೊಡಬೇಕೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಹೊರವಲಯದ ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಲೈವ್‌ಬ್ಯಾಂಡ್‌ಗಳಿಗೆ ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಂಘದ ಸದಸ್ಯರು ಆಪಾದಿಸಿದರು. ಬಾರ್‌ಗಳಲ್ಲಿ ಮಹಿಳೆಯರು ಕೆಲಸ ನಿರ್ವಹಿಸಬಹುದು ಎಂದು ಸರ್ವೊಚ್ಚ ನ್ಯಾಯಾಲಯ ಹೇಳಿದೆ ಆದರೂ ಸ್ಥಳೀಯ ಆಡಳಿತ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸಂಘದ ವಕೀಲ ಜಿ.ಕೆ. ಭಟ್ ದೂರಿದ್ದಾರೆ.
ಲೈವ್‌ಬ್ಯಾಂಡ್ ಉದ್ಯಮವು ಹಲವಾರು ಜನರಿಗೆ ಉದ್ಯೋಗ ಕೊಟ್ಟಿದೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ. ಸರಕಾರ ಈ ಬಗ್ಗೆ ಆಸಕ್ತಿ ವಹಿಸಿ ಲೈವ್‍ಬ್ಯಾಂಡ್‌ಗೆ ಅವಕಾಶ ಕೊಡಬೇಕೆಂದು ಸಂಘ ಆಗ್ರಹಿಸಿದೆ.
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
