• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಟ್ಟ ಅಂಪೈರ್ ಬಕ್ನರ್ ಮುಖಕ್ಕೆ ಮಂಗಳಾರತಿ

By Staff
|

ಮೆಲ್ಬೋರ್ನ್, ಜ.08 : ಭಾರತದ ಕ್ರಿಕೆಟ್ ಕಾಲಿಗೆ ಚುಚ್ಚಿದ ಮುಳ್ಳಂತಿರುವ ಅಂಪೈರ್ ಸ್ಟೀವ್ ಬಕ್ನರ್ ಅವರನ್ನು ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂರನೇ ಟೆಸ್ಟ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಕಿತ್ತೆಸೆದಿದೆ. ಇದರ ಜೊತೆಗೆ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮೇಲೆ ಹೇರಲಾಗಿದ್ದ 3 ಪಂದ್ಯಗಳ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ.

ಎರಡನೇ ಟೆಸ್ಟ್‌ನಲ್ಲಿ ಕಣ್ಣಿದ್ದೂ ಕುರುಡನಂತೆ ಕೆಟ್ಟ ನಿರ್ಣಯಗಳನ್ನು ನೀಡಿ ಭಾರತ ಸೋಲಿಗೆ ಕಾರಣನಾದ 'ಜಾಣ ಕಿವುಡ' ಸ್ಟೀವ್ ಬಕ್ನರ್‌ನನ್ನು ಹಿಂತೆಗೆದುಕೊಂಡಿರುವುದು ಭಾರತಕ್ಕೆ ನೈತಿಕ ಜಯ ಸಿಕ್ಕಂತಾಗಿದೆ. ಪದೆಪದೆ ಕೆಟ್ಟ ನಿರ್ಣಯಗಳನ್ನು ನೀಡುತ್ತಿದ್ದ ಬಕ್ನರ್‌ನನ್ನು ಕಿತ್ತುಹಾಕಬೇಕೆಂದು ಭಾರತ ಐಸಿಸಿಗೆ ಮನವಿ ಮಾಡಿತ್ತು.

ಪರ್ಥ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಬಕ್ನರ್ ಸ್ಥಾನದಲ್ಲಿ ನ್ಯೂಜಿಲಂಡ್‌ನ ಅಂಪೈರ್ ಬಿಲ್ಲಿ ಬೌಡೆನ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಐಸಿಸಿ ಅಧ್ಯಕ್ಷ ಮಾಲ್ಕಂ ಸ್ಪೀಡ್ ಮಂಗಳವಾರ ತಿಳಿಸಿದರು. ಈ ಸರಣಿಯ ಯಾವುದೇ ಪಂದ್ಯದಲ್ಲೂ ಬಕ್ನರ್ ಅವರು ಅಂಪೈರ್ ಆಗಿ ಕಾರ್ಯ ನಿರ್ವಹಿಸಬಾರದು ಎಂಬ ಭಾರತ ಮನವಿಯನ್ನು ಐಸಿಸಿ ಪುರಸ್ಕರಿಸಿದೆ ಎಂದು ತಿಳಿದುಬಂದಿದೆ.

ಜನಾಂಗೀಯ ನಿಂದನೆಗಾಗಿ ಹರ್‌ಭಜನ್ ಸಿಂಗ್ ವಿರುದ್ಧ ಹೇರಿರುವ ಮೂರು ಟೆಸ್ಟ್ ಪಂದ್ಯಗಳ ಅಮಾನತು ಆದೇಶದ ವಿರುದ್ಧ ಬಿಸಿಸಿಐನ ಅಧಿಕೃತ ಮೇಲ್ಮನವಿ ಕೂಡ ಐಸಿಸಿ ತಲುಪಿದೆ ಎಂದು ಸ್ಪೀಡ್ ತಿಳಿಸಿದರು. ಭಾರತದ ಆಟಗಾರರ ವಿರುದ್ಧ ಆಸ್ಟ್ರೇಲಿಯಾ ಆಟಗಾರ ಬ್ರಾಡ್ ಹಾಗ್ ಮಾಡಿರುವರೆನ್ನಲಾದ ಅವಾಚ್ಯ ಶಬ್ದದ ವಿರುದ್ಧವೂ ಬಿಸಿಸಿಐ ಅರ್ಜಿ ಸಲ್ಲಿಸಿದೆ ಎಂದು ಸ್ಪೀಡ್ ಹೇಳಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಉದ್ಭವಿಸಿರುವ ಶೀತಲ ಸಮರವನ್ನು ಶಾಂತಗೊಳಿಸಲು ಐಸಿಸಿಯ ಮುಖ್ಯ ರೆಫ್ರಿ ರಂಜನ್ ಮುದುಗಲ್ಲೆ ಆಸ್ಟ್ರೇಲಿಯಾಕ್ಕೆ ಧಾವಿಸಲಿದ್ದಾರೆ.

(ದಟ್ಸ್‌ಕ್ರಿಕೆಟ್ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more