ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಪೋಲಿಯೋ ಲಸಿಕೆ ಹಾಕಿಸುವುದನ್ನು ಮರೆಯಬೇಡಿ

By Staff
|
Google Oneindia Kannada News

Pulse Polio immunization is must for children under 5ಬೆಂಗಳೂರು, ಜ.05 : ಜನವರಿ 6ರಂದು ಭಾನುವಾರ ಐದು ವರ್ಷ ವಯಸ್ಸಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಬೆಂಗಳೂರು ನಗರ ಜಿಲ್ಲಾಡಳಿತ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಂಡಿದೆ. ಇದೇ ಕಾರ್ಯಕ್ರಮ ಫೆಬ್ರವರಿ 10ರಂದೂ ನಡೆಯಲಿದೆ.

ಸಾಕಷ್ಟು ಮುಂಜಾಗರೂಕತೆ ತೆಗೆದುಕೊಂಡು ಎಲ್ಲ ಮಕ್ಕಳಿಗೂ ಲಸಿಕೆ ಹಾಕುತ್ತಿದ್ದರೂ ಅಲ್ಲಲ್ಲಿ ಪೋಲಿಯೋವೈರಸ್‌ನಿಂದ ಮಕ್ಕಳು ಬಳಲುತ್ತಿರುವ ವರದಿಗಳು ಬಂದೇ ಬರುತ್ತವೆ. ಆದ್ದರಿಂದ ಲಸಿಕೆ ಹಾಕಿಸುವುದನ್ನು ಉದಾಸೀನ ಮಾಡದೇ ಕಡ್ಡಾಯವಾಗಿ ಐದು ವಯದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಲೇಬೇಕು ಎಂದು ಜಿಲ್ಲಾಧಿಕಾರಿ ಎಂ.ಎ.ಸಾದಿಕ್ ಮನವಿ ಮಾಡಿದ್ದಾರೆ.

ಈ ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ ನಾಲ್ಕುವರೆ ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕಲು 1750 ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ, ಲಸಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜನವರಿ 7ರಿಂದ 9ರವರೆಗೆ ಮತ್ತು ಫೆಬ್ರವರಿ 11ರಿಂದ 13ರವರೆಗೆ ಮನೆಮನೆಗೂ ಭೇಟಿ ನೀಡಿ ಲಸಿಕೆ ಹಾಕಿಸದಿರುವ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಶುಕ್ರವಾರ ತಿಳಿಸಿದರು.

ಇದಲ್ಲದೆ, ಅಂಸಘಟಿತರ ವಸತಿಗಳು, ವಲಸಿಗರು, ಭಿಕ್ಷುಕರು ಹಾಗೂ ಕೂಲಿ ಕಾರ್ಮಿಕರ ಕುಟೀರಗಳೂ ಸೇರಿದಂತೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ 914 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಲಸಿಕೆ ಹಾಕಲು 150 ಸಂಚಾರಿ ತಂಡಗಳನ್ನು ಹಾಗೂ 300 ಲಸಿಕೆ ಹಾಕುವ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರೋಟರಿ ಸೇರಿದಂತೆ ವಿವಿಧ ಸರ್ಕಾರೇತರ ಸಂಘ - ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಶುಶ್ರೂಷಾ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಹಕಾರ ಪಡೆಯಲಾಗಿದೆ ಎಂದು ಸಾದಿಕ್ ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X