ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜ್ವಲ ಕಾಶಿ: ಭಾರತೀಯ ಸಂಸ್ಕೃತಿಯ ಸಂಕ್ಷಿಪ್ತ ನೋಟ

By Staff
|
Google Oneindia Kannada News

ಬೆಂಗಳೂರು, ಜ.05:ಭಾರತೀಯ ಸಂಸ್ಕೃತಿಯ ಸುತ್ತ ಒಂದು ಸಂಕ್ಷಿಪ್ತವಾದ ವಿಹಂಗಮ ನೋಟ ನೀಡುವ 'ಪ್ರಜ್ವಲ ಕಾಶಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭ ನಗರದಲ್ಲಿ ಭಾನುವಾರ(ಜ.6)ದಂದು ನಡೆಯಲಿದೆ.

ಅಂಕಿತ ಪುಸ್ತಕ ಪ್ರಕಾಶನದ 244 ನೇ ಪ್ರಕಟಿತ ಕೃತಿಯಾದ ಪ್ರಜ್ವಲ ಕಾಶಿ ಪುಸ್ತಕವನ್ನು ಕೆ. ಚಂದ್ರಮೌಳಿ ಅವರು ರಚಿಸಿದ್ದಾರೆ.ಅನಕೃ ಜನ್ಮ ಶತಮಾನೋತ್ಸವದ ಅಂಗವಾಗಿ ಅನಕೃ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಪುಸ್ತಕ ಅನಾವರಣ ಸಮಾರಂಭ ನಡೆಯಲಿದ್ದು, ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಿ. ಅಶ್ವತ್ಥನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಆಸಕ್ತರು ಆಗಮಿಸಬೇಕಾದ ಸ್ಥಳ:
ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್,
ನಂ. 6, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-04.

ಸಮಯ: ಬೆಳಗ್ಗೆ 10:30

ಸೂಚನೆ: ಬೆಳಗ್ಗೆ 9:30 ಕ್ಕೆ ಉಪಾಹಾರದ ವ್ಯವಸ್ಥೆ ಇರುತ್ತದೆ.

(ದಟ್ಸ್ ಸಭೆ ಸಮಾರಂಭ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X