ಹರ್ಭಜನ್ ಸಿಂಗ್ ವಿರುದ್ಧವಾದ ಆಸೀಸ್ ಪಡೆ

ಹರ್ಭಜನ್ ಸಿಂಗ್ ವಿರುದ್ಧವಾದ ಆಸೀಸ್ ಪಡೆಸಿಡ್ನಿ, ಜ.5: ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಆರೋಪದ ವಿಚಾರಣೆ ನಾಳೆ (ಜ.‍6) ನಡೆಯಲಿದ್ದು, ಆಸೀಸ್ ನ 5 ಆಟಗಾರರು ಅವರ ವಿರುದ್ಧ ಸಾಕ್ಷಿ ಹೇಳಲು ತಯಾರಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಟೆಸ್ಟ್ ನ ಅಂಪೈರ್ ಗಳು ಹರ್ಭಜನ್ ಹಾಗೂ ಸೈಮಂಡ್ ವಿವಾದವನ್ನು ಮ್ಯಾಚ್ ರೆಫರಿಗೆ ಒಪ್ಪಿಸಿದ್ದಾರೆ.

ನಾವು ಜನಾಂಗೀಯ ನಿಂದನೆಯ ಮಾತುಗಳನ್ನು ಆಲಿಸಿಲ್ಲ. ಪಂದ್ಯದಲ್ಲಿ ನಡೆದ ಮಾತಿನ ಚಕಮಕಿಯ ವಿರುದ್ಧ ಆಸೀಸ್ ನ ಆಟಗಾರರು ದೂರು ನೀಡಿರುವ ಹಿನ್ನೆಲೆಯಲ್ಲಿ ರೆಫರಿ ಅವರಿಗೆ ವಿಷಯ ತಿಳಿಸಲಾಗಿದೆ ಎಂದು ಇಬ್ಬರು ಅಂಪೈರ್ ಗಳು ವರದಿಯಲ್ಲಿ ಹೇಳಿದ್ದಾರೆ. ಹರ್ಭಜನ್ ತಮ್ಮನ್ನು ಕೀಳುಮಟ್ಟದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಸೈಮಂಡ್ ಆರೋಪ ಮಾಡಿದ್ದರು.

ಆದರೆ, ಹರ್ಭಜನ್ ಸಿಂಗ್ ಹಾಗೂ ಭಾರತದ ಕ್ರಿಕೆಟ್ ತಂಡದ ವ್ಯವಸ್ಥಾಪಕರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಒಂದು ವೇಳೆ ಹರ್ಭಜನ್ ಅವರ ಮೇಲಿನ ಆರೋಪ ಸಾಬೀತಾದಲ್ಲಿ 2 ರಿಂದ 4 ಟೆಸ್ಟ್ ಅಥವಾ 6 ರಿಂದ 8 ಏಕದಿನ ಪಂದ್ಯಗಳಿಗೆ ನಿಷೇಧ ಹೇರುವ ಸಾಧ್ಯತೆಯಿದೆ.

(ದಟ್ಸ್ ಕ್ರೀಡಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+