ನಕಲಿ ಮತದಾನ ತಡೆಗಟ್ಟಲು ವಿನೂತನ ಯೋಜನೆ

ಬೆಂಗಳೂರು, ಜ.05: ನಕಲಿ ಮತದಾರರನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆನಗರದ ಮತದಾರರ ಸವಿವರವನ್ನು ಅವರವರ ಮನೆಯ ಬಾಗಿಲಲ್ಲಿ ಪ್ರದರ್ಶಿಸುವ ಸ್ಟಿಕರ್ ಗಳನ್ನು ಅಂಟಿಸಲಾಗುವುದು. ಇದರಿಂದ ಮನೆಯಲ್ಲಿ ವಾಸವಿರುವ ಎಲ್ಲಾ ಅರ್ಹ ಮತದಾರರಿಗೂ ಮತ ಚಲಾಯಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ನಗರ ಜಿಲ್ಲಾಧಿಕಾರಿ ಎಂ. ಎ. ಸಾದಿಕ್ ಹೇಳಿದ್ದಾರೆ.

ಯಲಹಂಕ, ಉತ್ತರಹಳ್ಳಿ, ವರ್ತೂರು ಹಾಗೂ ಆನೇಕಲ್ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು ಹತ್ತು ಲಕ್ಷ ಮನೆಗಳಲ್ಲಿ ವಾಸಿಸುತ್ತಿರುವ ನಲವತ್ತು ಲಕ್ಷಕ್ಕೂ ಅಧಿಕ ಮತದಾರರ ಹೆಸರು ಮತ್ತು ವಿಳಾಸದ ವಿವರಗಳನ್ನು ಒಳಗೊಂಡ ಸ್ಟಿಕರ್‌ಗಳನ್ನು ಸಿದ್ಧಪಡಿಸಿ ಅವುಗಳನ್ನು ಸಂಬಂಧಿತರ ಮನೆಯ ಮುಖ್ಯ ದ್ವಾರದ ಮೇಲೆ ಅಂಟಿಸಿ ಪ್ರದರ್ಶಿಸುವ ಕಾರ್ಯ ಸದ್ಯದಲ್ಲಿಯೇ ಪ್ರಾರಂಭಿಸಲು ಯೋಜಿಸಲಾಗಿದೆ .ಇದರಿಂದ ಮನೆ ಸಂಖ್ಯೆ ಮತ್ತಿತರ ಮಾಹಿತಿ ನಿಖರವಾಗಿ ದೊರೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ. ಎ. ಸಾದಿಕ್ ಹೇಳಿದರು.

ಮತದಾರರಿಗೆ ಕೆಲವು ಸೂಚನೆಗಳು:

ಲೋಕಸಭಾ ಅಥವಾ ವಿಧಾನ ಸಭಾ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತಲೂ ಹೆಚ್ಚು ಬಾರಿ ನೋಂದಾವಣೆಯಾಗಿದ್ದಲ್ಲಿ, ಅದು ಅಪರಾಧವಾಗುತ್ತದೆ. ಮತದಾರರ ಪಟ್ಟಿಯಲ್ಲಿನ ಆ ವ್ಯಕ್ತಿ ತಾನು ಇಚ್ಛಿಸುವ ಒಂದೆಡೆ ಮಾತ್ರ ನೋಂದಾಯಿತವಾಗಿರುವ ತನ್ನ ಹೆಸರನ್ನು ಉಳಿಸಿಕೊಂಡು ತನ್ನ ಅಧಿಕ ಹೆಸರುಗಳನ್ನು ಕೂಡಲೇ ತೆಗೆಸಲು ಸಹಾಯಕ ಚುನವಣಾ ನೋಂದಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿಲ್ಲ ಎಂದು ಬಹುತೇಕ ಜನರು ಮತದಾನದ ದಿನದಂದು ಆಕ್ಷೇಪಿಸುವುದು ಸಾಮಾನ್ಯವಾಗಿದೆ. ಚುನಾವಣೆಯಲ್ಲಿ ಸ್ಫರ್ಧಿಸಲು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಾರಂಭವಾಗುವ ಏಳು ದಿನಗಳ ಮುನ್ನ ಕೂಡಾ ಸಹಾ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಹೊಸದಾಗಿ ನೋಂದಾಯಿತವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬಯಸುವ ಅರ್ಹ ಮತದಾರರೂ ಸಂಬಂಧಿತ ತಮ್ಮ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಾಧಿಕ್ ತಿಳಿಸಿದರು. ಪರಿಷ್ಕೃತ ಮತದಾರರ ಪಟ್ಟಿಯನ್ನು ಜ.10 ರೊಳಗೆ ಪ್ರಕಟಿಸಲಾಗುವುದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಲೋಪಗಳಿಲ್ಲದೆ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆಎಂದರು

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+