• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವಜನತೆಯ ದಾರಿ ತಪ್ಪಿಸುತ್ತಿರುವ ಟಿವಿ : ಅಡೂರ್ ವಿಷಾದ

By Staff
|

TV corrupting young minds: Adoor lamentsಬೆಂಗಳೂರು, ಜ.04 : ಅತ್ಯಂತ ಕೀಳುಮಟ್ಟದ ಟಿವಿ ಕಾರ್ಯಕ್ರಮಗಳಿಂದ ರಾಷ್ಟ್ರದ ಯುವಜನತೆ ಅಡ್ಡದಾರಿ ಹಿಡಿಯುತ್ತಿದೆ ಎಂದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ವಿಷಾದಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಅಡೂರ್ ಅವರು ದೂರದರ್ಶನ ಪ್ರಾರಂಭವಾಗುವ ಮೊದಲಿದ್ದ ಸ್ಥಿತಿ ಮತ್ತು ಟಿವಿ ಬಂದ ನಂತರ ಯುವಕರಲ್ಲಿ ಬದಲಾಗುತ್ತಿರುವ ಚಿಂತನಶೀಲತೆಯ ಬಗ್ಗೆ ಪತ್ರಕರ್ತರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅತ್ಯಂತ ಕೆಟ್ಟ ಅಭಿರುಚಿಯ ಚಿತ್ರಗಳನ್ನು ಪಾಲಕರೊಂದಿಗೆ ಮಕ್ಕಳೂ ನೋಡುವಂಥ ದುಃಸ್ಥಿತಿಯನ್ನು ಟಿವಿ ತಂದಿಟ್ಟಿದೆ. ಇದರಿಂದಾಗಿ ಯುವಜನತೆ ಶಿಕ್ಷಿತರಾಗುವ ಬದಲು ಅಶಿಕ್ಷಿತರಾಗುತ್ತಿದ್ದಾರೆ. ಟಿವಿ ಬರುವ ಮೊದಲು ಸಿನೆಮಾ ನೋಡಲು ಬರುತ್ತಿದ್ದ ಪ್ರೇಕ್ಷರ ಮನಸ್ಥಿತಿಯೇ ವಿಭಿನ್ನವಾಗಿತ್ತು. ರಂಗಭೂಮಿ, ಕಲೆ ಮತ್ತು ಸಂಪ್ರದಾಯದ ಬಗ್ಗೆ ಅವರಿಗೆ ಹೆಚ್ಚಿನ ತಿಳಿವಳಿಕೆಯಿತ್ತು. ಅಂದು ಬರುತ್ತಿದ್ದ ಚಿತ್ರಗಳು ಕೂಡ ಜೀವನಪ್ರೀತಿಯನ್ನು ವೃದ್ಧಿಸುವ, ಸಮಾಜದಲ್ಲಿ ಸಹಬಾಳ್ವೆಯನ್ನು ಪ್ರೋತ್ಸಾಹಿಸುವ ಚಿತ್ರಗಳಾಗಿರುತ್ತಿದ್ದವು. ಆದರೆ, ಈಗ ಚಿತ್ರಣವೇ ಬದಲಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಟಿವಿ ಬಂದಾಗ ಉತ್ತಮ ಸಿನೆಮಾಗಳಿಗೆ ಪ್ರೋತ್ಸಾಹ ಸಿಗುವುದೆಂದು ಭಾವಿಸಲಾಗಿತ್ತು. ಆದರೆ ಆಗಿರುವುದು ತದ್ವಿರುದ್ಧ. ಇಂದು ನೀವು ನೋಡುತ್ತಿರುವುದು ಯಕಶ್ಚಿತ್ ಲಾಭಕ್ಕಾಗಿ ಗುಣಮಟ್ಟವನ್ನು ಬಲಿ ನೀಡುತ್ತಿರುವ ಕಾರ್ಯಕ್ರಮಗಳು ಎಂದು ವಿಶ್ವಕ್ಕೆ ಅತ್ಯಂತ ಶ್ರೇಷ್ಠಮಟ್ಟದ ಚಿತ್ರಗಳನ್ನು ನೀಡಿರುವ ಅಡೂರ್ ಹೇಳಿದರು.

ಚಿತ್ರೋತ್ಸವದಲ್ಲಿ ಸಿಕ್ಕ ಕಲಾವಿದನೊಬ್ಬ, ತಮಗೆ ನೀಡಲಾದ ಸಂಭಾಷಣೆಗಳನ್ನು ಬೇರೆಯವರು ಹೇಳಿಕೊಟ್ಟಂತೆ ಮಾತ್ರ ಕಕ್ಕಬೇಕು, ಸಂಭಾಷಣೆಗಳನ್ನು ಅರಿತು ಅರಗಿಸಿಕೊಳ್ಳಲು ಸಮಯವನ್ನೇ ನೀಡುತ್ತಿಲ್ಲ ಎಂದು ಪ್ರಲಾಪಿಸಿದ. ಇದು ಅತ್ಯಂತ ಕೀಳುದರ್ಜೆಯ ಚಿತ್ರತಯಾರಿಕೆ. ಸಂಭಾಷಣೆಗಳು ಕೂಡ ಈದಿನಗಳಲ್ಲಿ ಸತ್ವಹೀನವಾಗಿರುತ್ತವೆ ಎಂದು ನುಡಿದರು.

ಜನಾಕರ್ಷಣೆಗಾಗಿ ಚಿತ್ರಗಳಲ್ಲಿ ಜಾಸ್ತಿ ಮಸಾಲಾಗಳನ್ನು ತುರುಕಲಾಗುತ್ತಿದೆ. ಆದರೆ, ಮಸಾಲಾ ಜಾಸ್ತಿಯಾದರೆ ಅಜೀರ್ಣವಾಗುತ್ತದೆ ಎಂಬುದನ್ನು ಅರಿಯಬೇಕು ಎಂದು ಅಡೂರ್ ಮಾರ್ಮಿಕವಾಗಿ ಹೇಳಿದರು.

(ಯುಎನ್ಐ)

ಪೂರಕ ಓದಿಗೆ

ಬೆಂಗಳೂರಿನಲ್ಲಿ ಬಣ್ಣದಲೋಕ ತೆರೆದಿದೆ ಬಾ ಅತಿಥಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more