ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಿ ಹಾಕಿಂಗ್ ಈಗೇನು ಮಾಡುತ್ತಿದ್ದಾರೆ?

By Staff
|
Google Oneindia Kannada News

ವಿಜ್ಞಾನಿ ಹಾಕಿಂಗ್ ಈಗೇನು ಮಾಡುತ್ತಿದ್ದಾರೆ?ಲಂಡನ್, ಜ.4: ಈ ಶತಮಾನದ ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ ಬಗ್ಗೆ ನೀವು ಕೇಳಿದ್ದರೆ ಈ ಮುಂದಿನ ವಿವರಣೆ ಅಗತ್ಯವಿಲ್ಲ. Amyotrophic lateral sclerosis(ALS) ಎಂಬ ಕಾಯಿಲೆಯಿಂದ ಬಳಲುತ್ತಿರುವ ಇವರ ದೇಹದಲ್ಲಿ ಎರಡು ಕೈ ಬೆರಳುಗಳ ಚಲನೆ ಬಿಟ್ಟರೆ ಇನ್ನೆಲ್ಲವೂ ನಿಶ್ಚಲ. ಸದಾ ವೀಲ್‌ಚೇರ್‌ಗೆ ಅಂಟಿಕೊಳ್ಳ ಬೇಕಾದ ಸ್ಥಿತಿ. ಆದರೂ ಗಹನವಾದ ವಿಜ್ಞಾನ ಸಂಗತಿಗಳನ್ನು ಪ್ರಪಂಚಕ್ಕೇ ತಿಳಿಸಿದ ಮಹಾನ್ ವಿಜ್ಞಾನಿ.

ಕಪ್ಪುಕುಳಿ, ಕಾಲ, ವಿಶ್ವವಿಜ್ಞಾನ, ಕ್ವಾಂಟಂ ಗುರುತ್ವಾಕರ್ಷಣೆಯಂತಹ ಹತ್ತು ಹಲವು ದಿಕ್ಕುಗಳೆಡೆಗೆ ಅವರ ಅಧ್ಯಯನ ವಿಸ್ತರಿಸಿಕೊಂಡಿದೆ. ವಿಜ್ಞಾನದ ಸಿದ್ಧಾಂತಗಳ ಬಗ್ಗೆ ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಈಗವರು ಏನು ಮಾಡುತ್ತಿದ್ದಾರೆ ಅಂತ ಕೇಳಿದರೆ ಟಿ.ವಿ ಕಾರ್ಯಕ್ರಮದ ನಿರೂಪಕರಾಗಿ ಚಾನಲ್4ರಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಬಹುದು.

ಆ ಕಾರ್ಯಕ್ರಮದ ಹೆಸರು Stephen Hawking: Master Of The Universe ಎಂದು. 2008ರ ಮಾರ್ಚ್ ತಿಂಗಳಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ವಿಶ್ವದ ಹುಟ್ಟು ಪೂರ್ವೋತ್ತರಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವಂತೆ ಸ್ಟೀಫನ್ ತಿಳಿಸಲಿದ್ದಾರೆ. 65ರ ಪ್ರಾಯದ ಕೇಂಬ್ರಿಡ್ಜ್ ಪ್ರೊಫೆಸರ್ ತನ್ನ ಹಾಗೂ ಇತರ ವಿಜ್ಞಾನಿಗಳ ಆಲೋಚನೆಗಳನ್ನು ಸಾಮಾನ್ಯರಲ್ಲಿ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಲಿದ್ದಾರೆ.

ವಿಜ್ಞಾದ ಅಪೂರ್ವ ಕೃತಿಗಳಲ್ಲಿ ಒಂದಾದ A Brief History Of Time ಪ್ರಕಟವಾಗಿ ಎರಡು ದಶಕಗಳೇ ಕಳೆದಿವೆ. ಈಗವರು ಆ ಪುಸ್ತಕದ ಬಗ್ಗೆ ಚರ್ಚಿಸಲಿದ್ದಾರೆ. ವಿಜ್ಞಾನ ನಿಂತ ನೀರಲ್ಲ ಹೊಸಹೊಸ ಪರಿಕಲ್ಪನೆಗಳಿಗೆ ಸದಾ ತೆರೆದುಕೊಂಡಿರುತ್ತದೆ. ಹಾಗೆ ಹರಿದು ಬಂದ ಹೊಸ ನೀರು 'String Theory" ಹಾಗೂ 'Supersymmetry" ಬಗ್ಗೆ ಸಹಾ ಅವರು ಮಾತನಾಡಲಿದ್ದಾರೆ.

ಮಾತೇ ಆಡದ ಸದಾ ನಿಶ್ಚಲ ಸ್ಥಿತಿಯಲ್ಲಿರುವ ವಿಜ್ಞಾನಿ ಹೇಗೆ ಮಾತನಾಡುತ್ತಾರೆ ಎಂಬುದು ತಾನೆ ನಿಮ್ಮ ಕುತೂಹಲ. ಎಲೆಕ್ಟ್ರಾನಿಕ್ ವಾಯ್ಸ್ ಸಿಂತಸೈಸರ್ ಎಂಬ ಧ್ವನಿ ಸಂಯೋಜನೆ ಸಾಧನದ ಮೂಲಕ. ಈ ಕಾರ್ಯಕ್ರಮದಲ್ಲಿ ಹಾಕಿಂಗ್ ವಿಜ್ಞಾನದ ಸಿದ್ಧಾಂತಗಳನ್ನು ಸರಳ, ಸುಂದರವಾಗಿ ತಿಳಿಸಲಿದ್ದಾರೆ.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X