• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತೂ ಇಂತೂ ಸೆಂಚುರಿ ಬಾರಿಸಿದ ಸಚಿನ್

By Staff
|

Sachin acknowledges after scoring 38th Test century. Harbhajan looks on.ಸಿಡ್ನಿ, ಜ.04 : ಸುಮಾರು ದಿನಗಳಿಂದ ಕಳ್ಳಾಟವಾಡುತ್ತಿದ್ದ ಸೆಂಚುರಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಒಲಿದಿದೆ.

ಬಾಂಗ್ಲಾ ದೇಶದ ವಿರುದ್ಧ 2007ರ ಮೇ ತಿಂಗಳಲ್ಲಿ 37ನೇ ಶತಕ ಬಾರಿಸಿದ ಏಳು ತಿಂಗಳ ನಂತರ ಸಚಿನ್ 38ನೇ ಸೆಂಚುರಿಯನ್ನು ಇಂದು ಮೂರನೇ ದಿನದಾಟದಲ್ಲಿ ಬಾರಿಸಿದರು. ಆಸ್ಟ್ರೇಲಿಯಾದ 463 ರನ್‌ಗಳಿಗೆ ಪ್ರತಿಯಾಗಿ ಭಾರತ ಇಂದು ತನ್ನೆಲ್ಲ ವಿಕೆಟ್ ಕಳೆದುಕೊಂಡು 532 ರನ್ ಗಳಿಸಿತು. ಭಾರತಕ್ಕೆ 69 ರನ್‌ಗಳ ಲೀಡ್ ದೊರೆತಿದೆ. ಅತ್ಯಂತ ಸಂಯಮದ ಮತ್ತು ಏಕಾಗ್ರತೆಯ ಆಟವಾಡಿದ ಸಚಿನ್ 243 ಬಾಲುಗಳಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಇದ್ದ 154 ರನ್ ಗಳಿಸಿ ಅಜೇಯರಾಗುಳಿದರು.

ಭಾರತ ಈ ಮೊತ್ತ ತಲುಪಲು ಬಾಲಂಗೋಚಿಗಳ ಉತ್ತಮ ಕಾಣಿಕೆಯೂ ಕಾರಣವಾಯಿತು. ತಮ್ಮ ಎಂದಿನ ಶೈಲಿಯ ಆಟವಾಡಿದ ಹರಭಜನ್ ಸಿಂಗ್ 63 ರನ್ ಗಳಿಸಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು. ಅವರು ಸಚಿನ್‌ರೊಡಗೂಡಿ ಏಳನೇ ವಿಕೆಟ್‌ಗೆ 129 ರನ್ ಕಲೆಹಾಕಿದರು. ಕೊನೆಯ ವಿಕೆಟ್‌ಗೆ ಇಶಾಂತ್ ಶರ್ಮಾ ಒಡಗೂಡಿ 31 ರನ್ ಗಳಿಸಿದರು. ಅದರಲ್ಲಿ ಇಶಾಂತ್ ಪಾಲು 23.

144ನೇ ಟೆಸ್ಟ್ ಆಡುತ್ತಿರುವ 34ರ ಹರೆಯದ ಸಚಿನ್ ಅತ್ಯಂತ ಜಾಗರೂಕತೆಯಿಂದ ಇಂದು ಅತ್ಯಂತ ಜಾಗರೂಕತೆಯಿಂದ ಆಟವನ್ನು ಮುಂದುವರಿಸಿದರು. 53 ರನ್ ಗಳಿಸಿದ ದ್ರಾವಿಡ್ ಮತ್ತು 109 ರನ್ ಬಾರಿಸಿದ ಲಕ್ಷ್ಮಣ್ ಔಟಾದ ನಂತರ ಸೌರವ್ ಜೊತೆಯಾಟದಲ್ಲಿ 108 ರನ್ ಗಳಿಸಿದರು. ಇದು ಸಿಡ್ನಿ ಗ್ರೌಂಡ್‌ನಲ್ಲಿ ನಾಲ್ಕು ಟೆಸ್ಟ್‌ಗಳಲ್ಲಿ ಅವರು ಗಳಿಸಿದ ಮೂರನೇ ಸೆಂಚುರಿ.

ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ರೆಕಾರ್ಡ್ ಹೊಂದಿರುವವರ ಪಟ್ಟಿಯಲ್ಲಿ ಸಚಿನ್ ಏಳನೇ ಸ್ಥಾನ ಪಡೆದಿದ್ದಾರೆ. ಆ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಭಾರತೀಯರು ಪಡೆದಿದ್ದಾರೆ. ಅವರಲ್ಲೂ ಪ್ರಥಮ ಸ್ಥಾನ ಆಸ್ಟ್ರೇಲಿಯನ್ನರಿಗೆ ನೈಟ್‌ಮೇರ್ ಆಗಿರುವ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್‌ದು.

ಮೊದಲ ಟೆಸ್ಟ್‌ನಲ್ಲಿ ಕಳಪೆಯಾಟವಾಡಿದ್ದ ಸಿಡಿಮದ್ದಿನ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಈ ಇನ್ನಿಂಗ್ಸ್‌ನಲ್ಲೂ ಕಳಪೆಯಾಟ ಪ್ರದರ್ಶಿಸಿದ್ದಾರೆ.

(ದಟ್ಸ್‌ಕ್ರಿಕೆಟ್ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more