ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿಯಲ್ಲಿ ಅಗ್ನಿ ದುರಂತ; ಲಕ್ಷಾಂತರ ರೂ. ನಷ್ಟ

By Staff
|
Google Oneindia Kannada News

ಮೈಸೂರು, ಜ.4: ಇಲ್ಲಿನ ಹೆಬ್ಬಾಳ ಬಳಿಯ ಇನ್ಪೋಸಿಸ್ ಸಂಸ್ಥೆಯ ಗೋದಾಮಿನಲ್ಲಿ ಗುರುವಾರ (ಜ.3) ರಾತ್ರಿ ಅಗ್ನಿ ದುರಂತ ಸಂಭವಿಸಿ ಸುಮಾರು 40 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿವೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಕಂಪನಿಯ ಗೋದಾಮಿನಲ್ಲಿ ನಿರ್ಮಾಣ ಸಾಮಗ್ರಿಯನ್ನು ಶೇಖರಿಸಿಡಲಾಗಿತ್ತು. ಗುರುವಾರ ರಾತ್ರಿ 9.30ರ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಇದರ ಪಕ್ಕದಲ್ಲೇ ಇದ್ದ 5 ಗುಡಿಸಲುಗಳಿಗೂ ಬೆಂಕಿ ಜ್ವಾಲೆ ಸೋಕಿ ಅವೂ ಕೂಡ ಸುಟ್ಟು ಭಸ್ಮವಾಗಿವೆ.

ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವರದರಾಜನ್ ನೇತೃತ್ವದಲ್ಲಿ ಐದು ತಂಡಗಳು ಹಾಗೂ ಖಾಸಗಿ ಅಗ್ನಿಶಾಮಕ ದಳಗಳು ಜತೆಗೂಡಿ ಬೆಂಕಿಯನ್ನು ನಂದಿಸಲು ಶ್ರಮಿಸಿದವು. ಹಾಗಾಗಿ ಅಗ್ನಿಗೆ ಆಹುತಿಯಾಗಬೇಕಿದ್ದ ಮತ್ತಷ್ಟು ಸಾಮಗ್ರಿ ದುರಂತದಿಂದ ಪಾರಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X