ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕ್ಸಿಂಗ್ ಡೇ ಟೆಸ್ಟಲ್ಲಿ ಭಾರತಕ್ಕೆ ಆಸೀಸ್‌ನ ಸೋಲಿನ ಪಂಚ್

By Staff
|
Google Oneindia Kannada News

India bites dust in Boxing Day Testಮೆಲ್ಬೋರ್ನ್, ಡಿ.29 : ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತಕ್ಕೆ ಭರ್ಜರಿ ಸೋಲಿನ ಬಾಕ್ಸನ್ನು ಉಡುಗೊರೆಯಾಗಿ ನೀಡಿದೆ.

ವಿಶ್ವದಲ್ಲೇ ಅತ್ಯಂತ ಸದೃಢ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ನಾಲ್ಕೇ ದಿನಗಳಲ್ಲಿ 337 ರನ್‌ಗಳಿಂದ ಸೋತು ಆಸ್ಟ್ರೇಲಿಯಾಕ್ಕೆ ಸತತ ಟೆಸ್ಟ್ ಗೆಲುವುಗಳ ಸರಪಳಿಗೆ ಹದಿನೈದನೇ ಕೊಂಡಿಯನ್ನು ಜೋಡಿಸಿದೆ. ಸಿಡ್ನಿಯಲ್ಲಿ ನಡೆಯಲಿರುವ ಮುಂದಿನ ಟೆಸ್ಟನ್ನೂ ಆಸ್ಟ್ರೇಲಿಯನ್ನಗು ಗೆದ್ದರೆ 1999ರಿಂದ 2001ವರೆಗೆ ದಾಖಲಿಸಿದ್ದ 16 ಟೆಸ್ಟ್ ಗೆದ್ದ ದಾಖಲೆಯನ್ನು ಸರಿಗಟ್ಟಲಿದ್ದಾರೆ.

499 ರನ್‌ಗಳ ಭಾರೀ ಮೊತ್ತವನ್ನು ಬೆನ್ನತ್ತಿದ ಭಾರತ ಯಾವ ಹಂತದಲ್ಲಿಯೂ ಗೆಲ್ಲುವ ತಂಡವಾಗಿ ಕಾಣಲೇಯಿಲ್ಲ. ಆರಂಭದಿಂದಲೂ ಮುಗ್ಗರಿಸುತ್ತಾ ಸಾಗಿದ ಭಾರತಕ್ಕೆ ಯಾವ ಬ್ಯಾಟ್ಸ್‌ಮನ್ ಆಸರೆಯಾಗಿ ನಿಲ್ಲಲಿಲ್ಲ. ಕೇವಲ 161 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕೊನೆಯ ಐದು ವಿಕೆಟ್‌ಗಳನ್ನು 36 ರನ್‌ಗಳಿಗೆ ಮತ್ತು ಕೊನೆಯ ನಾಲ್ಕು ವಿಕೆಟ್‌ಗಳನ್ನು ಕೇವಲ 4 ರನ್‌ಗಳಿಗೆ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.

ಭಾರತದ ಪರ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಮಾತ್ರ 40ರ ಗಡಿ ದಾಟಿದರೆ ಉಳಿದವರು 20ರ ಗಡಿಯನ್ನೂ ದಾಟಲಿಲ್ಲ. ಜಾಫರ್, ದ್ರಾವಿಡ್, ಲಕ್ಷ್ಮಣ್, ಸಚಿನ್, ಸೌರವ್, ಯುವರಾಜ್, ಧೋನಿಯಿರುವ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತಕ್ಕೆ ಈ ಆಟಗಾರರು ಭಾರೀ ನಿರಾಸೆ ಮಾಡಿದರು.

ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಷೆಲ್ ಜಾನ್ಸನ್ ಮೂರು ವಿಕೆಟ್ ಕಬಳಿಸಿದರೆ, ಬ್ರೆಟ್ ಲೀ ಮತ್ತು ಬ್ರಾಡ್ ಹಾಗ್ ತಲಾ ಎರಡು ವಿಕೆಟ್ ಕಿತ್ತರು. ಪ್ರಥಮ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಬಾರಿಸಿದ್ದ ಮ್ಯಾಥ್ಯೂ ಹೇಡನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಮಡಿಲಿಗಿಳಿಸಿದರು.

(ದಟ್ಸ್‌ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X