ಮಾರ್ಚ್ ಹೊತ್ತಿಗೆ ರಾಜ್ಯದಲ್ಲಿ ಇನ್ನೂ ಆರು ನ್ಯೂಸ್ ಚಾನಲ್

ಬೆಂಗಳೂರು, ಡಿ.29 : ಮುಂದಿನ ವರ್ಷದ ಯುಗಾದಿ ಹೊತ್ತಿಗೆ ಕನ್ನಡ ಸುದ್ದಿಪ್ರೇಮಿಗಳಿಗೆ ಭರ್ಜರಿ ಔತಣ ದೊರೆಯಲಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಏನಿಲ್ಲೆಂದರೂ 6 ನ್ಯೂಸ್ ಚಾನಲ್‌ಗಳು ಸುದ್ದಿ ಭೋಜನವನ್ನು ವೀಕ್ಷಕರಿಗೆ ಬಡಿಸಲಿವೆ.

ಟಿವಿ 9 ನ್ಯೂಸ್ ಚಾನೆಲ್‌ನ ಯಶಸ್ಸಿನಿಂದ ಪ್ರೇರಿತವಾಗಿರುವ ಈ ಟಿವಿ ಚಾನಲ್‌ಗಳು ಕನ್ನಡದಲ್ಲಿ ಸುದ್ದಿಯನ್ನು ಹಗಲುರಾತ್ರಿ ಬಿತ್ತರಿಸಲು ಪೈಪೋಟಿ ನಡೆಸಲಿವೆ.

ಏಷ್ಯಾ ನೆಟ್‌ನ ಸುವರ್ಣ ನ್ಯೂಸ್ ಚಾನಲ್, ಈಟಿವಿ ಗ್ರುಪ್‌ನ ಈಟಿವಿ ಕನ್ನಡ ನ್ಯೂಸ್ ಚಾನಲ್, ಟಿವಿ5, ಸ್ಟಾರ್ ಗುಂಪಿನ ಸ್ಟಾರ್ ನ್ಯೂಸ್ ಕನ್ನಡ ಚಾನಲ್ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮಾಲಿಕತ್ವದ ಜೈಹಿಂದ್ ಚಾನಲ್ ಮಾರ್ಚ್ ಹೊತ್ತಿಗೆ ಜನ್ಮ ತಾಳಲಿವೆ.

ಡಿಕೆಶಿ ಮಾಲಿಕತ್ವದ ಜೈಹಿಂದ್ ಚಾನಲ್ ಜನರ ಆಶೋತ್ತರಗಳಿಗೆ ಪ್ರತಿಸ್ಪಂದಿಸುವುದೋ ಅಥವ ಕಾಂಗ್ರೆಸ್‌ನ ಮುಖವಾಣಿಯಾಗುವುದು ಕಾದು ನೋಡಬೇಕು. ಡಿಕೆಶಿ ಸುದ್ದಿಕಣಕ್ಕಿಳಿದಿರುವುದರಿಂದ ಅವರ ಕಟ್ಟಾವಿರೋಧಿ ಕುಮಾರಸ್ವಾಮಿಯೂ ಹೊಸ ನ್ಯೂಸ್ ಚಾನಲ್ಲನ್ನು ಪ್ರಾರಂಭಿಸಬಹುದು ಎಂಬ ಗಾಳಿ ಸುದ್ದಿಗಳು ತೇಳಿಬರುತ್ತಿವೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ ಹೊತ್ತಿಗೆ ಇರುವುದರಿಂದ ಡಿಕೆಶಿಯಲ್ಲದೇ ರಾಜಕಾರಣಿಗಳ ಒಂದು ದಂಡೇ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಹೊಸ ನ್ಯೂಸ್ ಚಾನಲ್ ಪ್ರಾರಂಭಿಸುವ ಹುನ್ನಾರದಲ್ಲಿ ತೊಡಗಿದ್ದಾರೆ. ಸಂಡೂರಿನ ಮಾಜಿ ಎಂಎಲ್ಎ ಸಂತೋಷ್ ಲಾಡ್, ವಿಆರ್ಎಲ್ ಮಾಲಿಕ ವಿಜಯ್ ಸಂಕೇಶ್ವರ, ಸತೀಶ್ ಜಾರಕಿಹೊಳಿ ಮೊದಲಾದವರು ನ್ಯೂಸ್ ಚಾನಲ್ ಪ್ರಾರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಇವುಗಳಲ್ಲಿ ಯಾವ ಚಾನಲ್ ಚುನಾವಣೆ ಮುಗಿದ ನಂತರವೂ ಮುಂದುವರೆಯುತ್ತವೆಯೋ ಮುಚ್ಚುತ್ತವೆಯೋ? ಒಟ್ಟಿನಲ್ಲಿ ಸುದ್ದಿಗ್ರಾಹಕರಿಗೆ ಭರ್ಜರಿ ಸುದ್ದಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+